ಸಂಕೇಶ್ವರ: ಮಕ್ಕಳು ಚಿಕ್ಕವರಿದ್ದಾಗಲೇ ಪಾಲಕರು ಉತ್ತಮ ಸಂಸ್ಕಾರ ನೀಡಿದರೆ ಭವಿಷ್ಯದಲ್ಲಿ ಮಕ್ಕಳು ಉತ್ತಮ ಪ್ರಜೆಗಳಾಗಿ ಬದುಕಬಲ್ಲರು ಎಂದು ನಿರಂಜನ ಸ್ವಾಮೀಜಿ ಸಲಹೆ ನೀಡಿದರು.

ಅವರು ಬುಧವಾರ ರಾತ್ರಿ ಸಂಕೇಶ್ವರ ಸಮೀಪದ ಅಮ್ಮಣಗಿ ಗ್ರಾಮದಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ತಂದೆ, ತಾಯಿ, ಶಿಕ್ಷಕರು ಹಾಗೂ ಸಮಾಜದ ಗುರುಹಿರಿಯರು ಮಕ್ಕಳಿಗೆ ಬೇಗನೆ ಏಳುವುದು, ಸ್ವಚ್ಛತೆ, ಮನೆಯಲ್ಲಿನ ಹಿರಿಯರಿಗೆ ಗೌರವ ಕೊಡುವುದು ಹಾಗೂ ಯೋಗ ಮತ್ತು ಧ್ಯಾನವನ್ನು ಕಲಿಸಬೇಕು. ಉತ್ತಮವಾದ ಪೌಷ್ಟಿಕ ಆಹಾರ, ವಿವಿಧ ಹಣ್ಣುಗಳ ಸೇವನೆ, ಹೆಚ್ಚು ನೀರು ಸೇವನೆಯಂಥ ಜೀವನ ಕ್ರಮಗಳನ್ನು ಮಕ್ಕಳಲ್ಲಿ ರೂಢಿಸಬೇಕು. ಮಕ್ಕಳು ನಿಶ್ಚಲ ಮನಸ್ಸಿನಿಂದ ಓದುವ ಪರಂಪರೆ, ತಿಳಿಯದ ವಿಷಯಗಳನ್ನು ತಿಳಿಸುವ ಪದ್ಧತಿ ಹಾಗೂ ನೈತಿಕ ಶಿಕ್ಷಣವನ್ನು ಶಿಕ್ಷಕರು ಮಕ್ಕಳಿಗೆ ನೀಡಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುಚಟಿಕೆಗಳಲ್ಲಿಯೂ ಮಕ್ಕಳು ಕ್ರಿಯಾಶೀಲರಾಗಿ ಪಾಲ್ಗೊಳ್ಳಲು ಶಿಕ್ಷಕರು ಪ್ರೇರಣೆ ನೀಡಬೇಕು ಎಂದು ಅವರು ಹೇಳಿದರು.

‘ಪಾಲಕರ ಪ್ರತಿಯೊಂದು ಚಲನವಲನಗಳನ್ನು ಮಕ್ಕಳು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಪಾಲಕರು ತಾವು ಮೊಬೈಲ್, ಟಿ.ವಿ. ನೋಡುತ್ತ ಮಕ್ಕಳಿಗೆ ಅವುಗಳನ್ನು ನೋಡಬೇಡಿ, ಅಭ್ಯಾಸ ಮಾಡಿ ಎಂದು ಹೇಳಿದರೆ ಅದು ಸಮುದ್ರದಲ್ಲಿ ಹುಣಸೆ ಹಣ್ಣನ್ನು ತೊಳೆದಂತೆ ಆಗುತ್ತದೆ. ಆದುದರಿಂದ ಪಾಲಕರು ತಾವು ಮೊದಲು ನೈತಿಕತೆ ಬೆಳೆಸಿಕೊಳ್ಳಬೇಕು’ ಎಂದು ಸ್ವಾಮೀಜಿ ಸಲಹೆ ನೀಡಿದರು.

ಅಂದಾನಯ್ಯ ಹಿರೇಮಠ, ಶಂಕರಯ್ಯಾ ಮಠಪತಿ, ನಾಗರಾಜ ದೇಸಾಯಿ, ಶಂಕರ ಮುತ್ನಾಳಿ, ಬಾಳಪ್ಪಾ ಮಂಜರಗಿ, ಬಸಪ್ಪ ಖಾನಾಪುರಿ, ಕೆಂಪನ್ನಾ ಹುದ್ದಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-21-695661179

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.