ಚಿಂತಾಮಣಿ: ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಜಗಜ್ಯೋತಿ ಬಸವಣ್ಣ ವಚನ ಗಾಯನ ನಡೆಯಿತು.

ಶಿಕ್ಷಕ ಮುಳ್ಳಹಳ್ಳಿ ಎಂ.ವೈ.ನಂಜುಂಡಗೌಡ, ‘ಬಸವಣ್ಣ ಅವರು ಕೇವಲ ಧಾರ್ಮಿಕ ನಾಯಕರಲ್ಲ. ಸಾಮಾಜಿಕ ಕ್ರಾಂತಿ ಹರಿಕಾರರು. ಸಮಾಜದಲ್ಲಿ ಅಸಮಾನತೆ, ಅಂಧಶ್ರದ್ಧೆ ಮತ್ತು ಜಾತೀಯತೆ ವಿರುದ್ಧ ಹೋರಾಡಿದ ಮಹಾನ್ ಚಿಂತಕ’ ಎಂದು ಅಭಿಪ್ರಾಯಪಟ್ಟರು.

ಪ್ರತಿಯೊಬ್ಬರು ಶ್ರಮವನ್ನು ಗೌರವಿಸಿ ಸತ್ಯನಿಷ್ಠ ಜೀವನ ನಡೆಸಬೇಕು. ಅವರ ವಚನಗಳು ಇಂದಿನ ಸಮಾಜದಲ್ಲಿಯೂ ಅಷ್ಟೇ ಪ್ರಸ್ತುತವಾಗಿವೆ. 50ಕ್ಕೂ ಹೆಚ್ಚು ವಚನಗಳನ್ನು ಭಾವಪೂರ್ಣವಾಗಿ ಗಾಯನ ಮಾಡಿ, ಅವುಗಳ ಅರ್ಥ ಮತ್ತು ಒಳನೋಟ ಮನಮುಟ್ಟುವಂತೆ ವಿವರಿಸಿದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಎಂ.ತಿಮ್ಮರಾಯಪ್ಪ ಮಾತನಾಡಿ, ಬಸವಣ್ಣ ಅವರು ಸ್ಥಾಪಿಸಿದ ‘ಅನುಭವ ಮಂಟಪ’ ವಿಶ್ವದ ಮೊದಲ ಪ್ರಜಾಸತ್ತಾತ್ಮಕ ವೇದಿಕೆ. ಎಲ್ಲ ವರ್ಗದ ಜನರು ಸಮಾನವಾಗಿ ಕೂಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು. ಇದು ಸಮಾನತೆ ಮತ್ತು ಸ್ವಾತಂತ್ರ್ಯದ ಮಹತ್ವ ಪ್ರತಿಪಾದಿಸುತ್ತದೆ ಎಂದು ಹೇಳಿದರು.

ಹಿರಿಯ ಸಾಹಿತಿ ಕಾಗತಿ ವಿ.ವೆಂಕಟರತ್ನಂ ಮಾತನಾಡಿ, ‘ಬಸವಣ್ಣ ಅವರ ವಚನಗಳನ್ನು ಕೇವಲ ಓದುವುದಷ್ಟೇ ಸಾಲದು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾನತೆ, ಮಾನವೀಯತೆ ಮತ್ತು ಶ್ರಮದ ಗೌರವ ಉಳಿಸಿಕೊಳ್ಳುವುದು ಕರ್ತವ್ಯ’ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪಿ.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿಯರು ಬಸವಣ್ಣ ಅವರ ವಚನಗಳನ್ನು ಪಠಿಸಿದರು. ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರ ನೀಡಿ ಪ್ರಶಂಸಿಸಲಾಯಿತು. ಗಾಯಕ ಶಿವರಾಂ ಅವರು ಹಾಡಿದ ಹಾಡು ಸಭೆಗೆ ಮೆರುಗು ತಂದಿತು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ವಿ.ಶ್ರೀನಿವಾಸನ್, ಪ್ರಾಧ್ಯಾಪಕ ಎನ್.ಅರವಿಂದ ರೆಡ್ಡಿ, ಎಸ್.ಎಂ. ರಮಾನಂದ, ಸುರೇಶ್ ಬಾಬು, ನಂದಿನಿ, ಸಿ.ಎಂ.ರಮೇಶ್, ವಿಜಯಕುಮಾರ್, ಎನ್.ಚಾಣಕ್ಯ, ಪಿ. ನಾಗೇಶ್, ಶಿಕ್ಷಕಿ ಲಕ್ಷ್ಮಿದೇವ, ಕೆ.ಎನ್.ಅಕ್ರಂಪಾಷ, ಕಸಾಪ ಗೌರವಾಧ್ಯಕ್ಷ ಆರ್.ಮಂಜುನಾಥ್, ಕೆ.ಎಸ್. ನೂರುಲ್ಲಾ, ಎನ್.ನಾಗರಾಜು, ಈ.ವೈ.ಸರಸ್ವತಮ್ಮ, ಹಾಸ್ಯ ಸಾಹಿತಿ ಗುರು ಪ್ರಸನ್ನ, ಕಾಲೇಜಿನ ಸಿಬ್ಬಂದಿ, ಕಸಾಪ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-16-1693982350

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.