ಚಿತ್ರದುರ್ಗ: ‘ಚರಿತ್ರೆ ಕೇವಲ ರಾಜ ಮಹಾರಾಜರ ಕಥೆಯಲ್ಲ. ಮರೆಯಲಾಗದ ಮಹಾನುಭಾವರ ಕಥೆಯನ್ನು ಅದು ಹೇಳುತ್ತದೆ. ಅಂತಹವರನ್ನು ಮರೆಯುವುದೆಂದರೆ ಅದೊಂದು ಮಾನಸಿಕ, ಇಲ್ಲವೇ ಸಾಂಸ್ಕೃತಿಕ ದಾರಿದ್ರ್ಯ’ ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.

ನಗರದ ಮುರುಘಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಜಯವಿಭವ ಶ್ರೀಗಳ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾವು ಎಲ್ಲಿ ಮರೆಯುತ್ತೇವೆಯೋ ಅಲ್ಲಿ ನಮ್ಮ ಸಾಂಸ್ಕೃತಿಕ ಹಾಗೂ ಬೌದ್ಧಿಕ ನಾಶವೂ ಕೂಡ ಇರುತ್ತದೆ. ಹಾಗಾಗಿ ನಾವು ಮಹಾನುಭಾವರ ನೆನಪನ್ನು ಮರೆಯದೇ ಅರಿಯಬೇಕು’ ಎಂದರು.

‘ಜಯವಿಭವ ಮುರುಘರಾಜೇಂದ್ರ ಸ್ವಾಮೀಜಿಗಳ ಕಾಲದಲ್ಲಿ ಮುರುಘಾಮಠವು ವಿದ್ವತ್ತು, ವೈರಾಗ್ಯ, ಲೋಕಸೇವೆ ಮತ್ತು ಸಂಪತ್ತುಗಳಿಗೆ ಭಾರತದಲ್ಲಿಯೇ ಹೆಸರಾಗಿತ್ತು. ಶ್ರೀಗಳು ಸುಮಾರು 20 ವರ್ಷಗಳ ಕಾಲ ಕಾಶೀ ಕ್ಷೇತ್ರದಲ್ಲಿದ್ದು ಸಾಹಿತ್ಯ ಸೇರಿದಂತೆ ಶಾಸ್ತ್ರ ಪಾರಂಗತರಾಗಿದ್ದರು’ ಎಂದು ತಿಳಿಸಿದರು.

‘ಹಿರಿಯ ಶ್ರೀಗಳಂತೆಯೇ ದೇಶೋನ್ನತಿ ಕಾರ್ಯಗಳಿಗೆ, ವಿದ್ಯಾಸಂಸ್ಥೆಗಳಿಗೆ ಲಕ್ಷಗಟ್ಟಲೆ ಧನವನ್ನು ಉದಾರವಾಗಿ ನೀಡಿದ್ದಾರೆ. ಹಾಸನದ ಸಾರ್ವಜನಿಕ ವಿದ್ಯಾರ್ಥಿ ನಿಲಯಕ್ಕೆ ₹ 1 ಲಕ್ಷ, ಬೆಂಗಳೂರು ರವೀಂದ್ರ ಕಲಾ ಕ್ಷೇತ್ರ ನಿರ್ಮಾಣ, ಚಿತ್ರದುರ್ಗ ಜಯವಿಭವ ಕ್ರೀಡಾಂಗಣ, ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ವಾರ್ಡ್ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆಂದು’ ಸ್ಮರಿಸಿದರು.

‘ನಾವು ಏನನ್ನು ನೀಡುತ್ತೇವೆಯೋ, ಅದನ್ನೇ ಪಡೆಯುತ್ತೇವೆ. ಇದೇ ಸತ್ಯ ಇದೇ ಇತಿಹಾಸ. ಸುತ್ತು ಮತ್ತುಕಟ್ಟು ಎಂಬ ಜಯದೇವ ಜಗದ್ಗುರುಗಳ ಅಣತಿಯಂತೆ ಜಯವಿಭವ ಶ್ರೀಗಳು ಬೆಳೆದಂತವರು. ಮುಳಗುಂದ ಮಠದಲ್ಲಿ ಬಾಲ್ಯವನ್ನು ಕಳೆದ ಶ್ರೀಗಳು ಅಲ್ಲಿಂದಲೇ ಬೆಳೆದು ಬಂದರು’ ಎಂದು ನಿವೃತ್ತ ಉಪನ್ಯಾಸಕ ಮಲ್ಲಿಕಾರ್ಜುನ ಜವಳಿ ತಿಳಿಸಿದರು.

‘ಸಂಸ್ಕೃತ, ಬಂಗಾಳಿ, ಮರಾಠಿ ಒಳಗೊಂಡಂತೆ ಹಲವಾರು ಭಾಷೆಗಳ ಪಾಂಡಿತ್ಯವನ್ನು ಶ್ರೀಗಳು ಹೊಂದಿದ್ದರು. ಜಯದೇವ ಗುರುಗಳಂತೆ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಗೆ ಅಡಿಪಾಯ ಹಾಕಿದರು. ಇದೆಲ್ಲವೂ ಕೂಡ ಆಧುನಿಕ ಜಗತ್ತಿನ ಮಠಮಾನ್ಯಗಳಿಗೆ ಇವತ್ತಿಗೂ ಒಂದು ಆದರ್ಶವಾಗಿದೆ’ ಎಂದು ತಿಳಿಸಿದರು.

ಭಕ್ತರಾದ ಕಣಕುಪ್ಪಿ ಮುರುಗೇಶ್, ಹನುಮಂತಪ್ಪ, ಎಂ.ಕೆ. ಪ್ರಭುದೇವ್, ಕೆಇಬಿ ಷಣ್ಮುಖಪ್ಪ, ಎಸ್.ಎಂ.ಕೊಟ್ರೇಶಪ್ಪ, ಎಸ್.ವಿ. ನಾಗರಾಜಪ್ಪ, ಮಹಡಿ ಶಿವಮೂರ್ತಿ, ಆರತಿ ಮಹಡಿ ಶಿವಮೂರ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-44-1137024372

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.