ಚಿತ್ರದುರ್ಗ: ‘ಬಾಬಾಸಾಹೇಬರ ಜಾತಿವಿನಾಶ ಕೃತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಭಾರತದ ಪ್ರಜಾಪ್ರಭುತ್ವದ ಆಶಯಗಳು ಸಾಕಾರಗೊಳ್ಳುತ್ತವೆ’ ಎಂದು ಚಿಂತಕ ವೇದಾಂತ ಏಳಂಜಿ ತಿಳಿಸಿದರು.

ನಗರದ ಮಹಾತ್ಮ ಫುಲೆ ಅಧ್ಯಯನ ಕೇಂದ್ರದಲ್ಲಿ ಬುಧವಾರ ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘4000 ಜಾತಿಗಳನ್ನು 4 ವರ್ಣದಲ್ಲಿ ಮಾಡಿ ಮೇಲು ಕೀಳು ಪರಿಕಲ್ಪನೆಯಲ್ಲಿ ಹಿಂದೂ ಎಂದರೆ ಯಾವ ಜಾತಿ ಎಂದು ಕೇಳುವ ಧೋರಣೆಯಿದೆ’ ಎಂದರು.

‘ನಿರ್ಬಂಧ ಹೇರುವ ಧರ್ಮದ ಕಟ್ಟಲೆಗಳು ನಿಲ್ಲುವವರೆಗೂ ಹಿಂದೂ ಧರ್ಮ ಆದರ್ಶವಾಗಲಾರದು. ಜಾತಿ ಪದ್ಧತಿ ಅನುಸರಿಸುವ ಜನರದ್ದು ತಪ್ಪಿಲ್ಲ ಆದರೆ, ಜನರಿಗೆ ಜಾತಿ ಕಮ್ಮಟಗಳನ್ನು ಹಾಗೂ ಧರ್ಮ ಬೋಧನೆ ಮಾಡುವುದು ತಪ್ಪು ಎಂದು ಬಾಬಾಸಾಹೇಬರು ಹೇಳಿದ್ದರು’ ಎಂದು ಸ್ಮರಿಸಿದರು.

ಕೃಷಿ ಅಧಿಕಾರಿ ಕಿರಣ್ ಕುಮಾರ್, ಚಿಂತಕ ಶ್ರೀನಿವಾಸರಾಜು ದೊಡ್ಡೇರಿ, ಉಪನ್ಯಾಸಕ ಹನುಮಂತಪ್ಪ ದಡಗೂರು, ಪ್ರಕಾಶ ಯಾದಲಗಟ್ಟೆ, ಪುರುಷೋತ್ತಮ, ಮೋದೂರು ತೇಜ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-44-1477856434

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.