ಚಿತ್ರದುರ್ಗ: ‘ಬಹುತ್ವವೇ ಕೋಟೆನಾಡಿನ ನೆಲದ ನಿಜವಾದ ಶಕ್ತಿಯಾಗಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿರುವಂತೆ ಯಾವುದೇ ಒಂದು ನಿರ್ದಿಷ್ಟ ಸಮುದಾಯ ಇಲ್ಲಿ ಬಲಿಷ್ಠವಾಗಿಲ್ಲ. ವಿವಿಧ ಸಮುದಾಯಗಳ ಜನರು ಬೆರೆತು ಬಾಳುತ್ತಿರುವುದು ಇಲ್ಲಿಯ ವಿಶೇಷತೆಯಾಗಿದೆ’ ಎಂದು ಸಂಸ್ಕೃತಿ ಚಿಂತಕ ಎಸ್.ನಟರಾಜ ಬೂದಾಳು ಹೇಳಿದರು.

ನಗರದ ಕ್ರೀಡಾ ಭವನದಲ್ಲಿ ಭಾನುವಾರ ಪತ್ರಕರ್ತರ ಬಳಗದ ವತಿಯಿಂದ ನಡೆದ ಜೆ.ಕರಿಯಪ್ಪ ಮಾಳಿಗೆ ಅವರ ‘ನಡೆ-ನುಡಿ’ ಉಪನ್ಯಾಸ, ಗೌರವಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಬೆಸ್ತರು, ಉಪ್ಪಾರರು, ಗಾಣಿಗರು, ಕುರುಬರು, ದಲಿತರು, ಮುಸ್ಲಿಮರು ಸೇರಿದಂತೆ ಅನೇಕ ಸಣ್ಣಪುಟ್ಟ ಸಮುದಾಯಗಳ ಜನರು ಇಲ್ಲಿ ಬದುಕುತ್ತಿದ್ದಾರೆ. ಬಹುತ್ವ ಇಲ್ಲಿನ ಜನರನ್ನು ಒಟ್ಟಾಗಿ ಹಿಡಿದಿಟ್ಟಿದೆ. ಸಾಂಸ್ಕೃತಿಕ ಬಿಕ್ಕಟ್ಟುಗಳ ಮಧ್ಯೆ ಬದುಕುತ್ತಿರುವ ನಮ್ಮಲ್ಲಿ ತತ್ವಪದಗಳ ದೊಡ್ಡ ಸಂಸ್ಕೃತಿಯೇ ಇದೆ. ತತ್ವಪದಕಾರರ ಅಂತರಂಗದ ಒಡನಾಟದೊಂದಿಗೆ ಮಣ್ಣಿನ ಸತ್ವ ಮತ್ತು ಜೀವತಂತುವನ್ನು ಮೀಟಿದ ಅಪರೂಪದ ಸಂಶೋಧಕರಾಗಿ ಕರಿಯಪ್ಪ ಮಾಳಿಗೆ ನಿಲ್ಲುತ್ತಾರೆ’ ಎಂದರು.

‘ತತ್ವಪದಗಳ ಸಂಗ್ರಹ ಯೋಜನೆಯಲ್ಲಿ ಕರಿಯಪ್ಪ ಅವರು ತೋರಿದ ಶ್ರದ್ಧೆಯಿಂದಾಗಿ ಹೊನ್ನೆನಹಳ್ಳಿ ದಾಸಗಿರಿ ಅಜ್ಜ, ಸಕ್ಕರೆಪ್ಪ ತಾತ, ವೀರಪ್ಪ ತಾತ ಹಾಗೂ ಕರೀಂ ಪೀರ ಅವರಂತಹ ನೂರಾರು ಅಜ್ಞಾತ ತತ್ವಪದಕಾರರು ಸಾಂಸ್ಕೃತಿಕ ಲೋಕಕ್ಕೆ ಪರಿಚಯವಾಗಿದ್ದಾರೆ. ಚಿನ್ಮೂಲಾದ್ರಿ ಪರಂಪರೆಯ ಹಿಂದಿನ ತಲೆಮಾರಿನ ಸ್ವಾಮೀಜಿಗಳು ಕೂಡ ಅದ್ಭುತ ತತ್ವಪದಕಾರರಾಗಿದ್ದರು. ಕರಿಯಪ್ಪ ಮಾಳಿಗೆ ಅವರು ಈ ಎಲ್ಲಾ ಅಸ್ಮಿತೆಗಳನ್ನು ದಾಖಲಿಸಿರುವುದು ಜಿಲ್ಲೆಯ ಚರಿತ್ರೆಗೆ ಸಂದ ದೊಡ್ಡ ಜಯ’ ಎಂದು ಹೇಳಿದರು.

ವಿಮರ್ಶಕ ಲೋಕೇಶ್ ಅಗಸನಕಟ್ಟೆ ಮಾತನಾಡಿ, ‘ಜಾನಪದ ವಿಶ್ವವಿದ್ಯಾಲಯದ ಮಹತ್ವಕಾಂಕ್ಷೆಯ ‘ಗ್ರಾಮ ಚರಿತ್ರೆ' ಮತ್ತು 'ಗ್ರಾಮ ಕೋಶ' ಸಿದ್ಧಪಡಿಸುವಲ್ಲಿ ಕರಿಯಪ್ಪ ಅವರ ಶ್ರಮ ಅಪಾರವಾದುದು. ಜಿಲ್ಲೆಯ ಹಳ್ಳಿಗಳ ಮಾಹಿತಿ ಸಂಗ್ರಹಿಸುವ ಹೊಣೆಯನ್ನು ಅವರು ಸಮರ್ಥವಾಗಿ ನಿಭಾಯಿಸಿದರು. ಮಾಹಿತಿ ಸಂಗ್ರಹಕಾರರು ನೀಡಿದ ದತ್ತಾಂಶಗಳನ್ನು ಕೇವಲ ಕಾಗದದ ಮೇಲೆ ನಂಬದೆ, ಸ್ವತಃ ಹಳ್ಳಿಗಳಿಗೆ ಭೇಟಿ ನೀಡಿ ಅವುಗಳ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದರು’ ಎಂದರು.

ವಿಮರ್ಶಕಿ ತಾರಿಣಿ ಶುಭದಾಯಿನಿ ಮಾತನಾಡಿ, ‘ಶೈಕ್ಷಣಿಕ ಕ್ಷೇತ್ರ ಮತ್ತು ಬದುಕಿನ ಹಾದಿ ಎರಡರಲ್ಲೂ ಕರಿಯಪ್ಪ ಮಾಳಿಗೆ ಅವರು ಹಾಕಿಕೊಟ್ಟಿರುವ ಹೆಜ್ಜೆಗುರುತುಗಳು ಅತ್ಯಂತ ಪ್ರಭಾವಶಾಲಿಯಾಗಿವೆ. ಸಂಶೋಧನೆಯು ಕೇವಲ ಅಂಕಿ-ಅಂಶಗಳ ಸಂಗ್ರಹವಾಗದೆ ಆ ನೆಲದ ಮಣ್ಣಿನ ಗುಣ, ಜನರ ಆಹಾರ ಪದ್ಧತಿಯನ್ನು ಪ್ರಭಾವಶಾಲಿಯಾಗಿ ದಾಖಲಿಸಿದ್ದಾರೆ. ಮಾಳಿಗೆ ಅವರು ಗಾದೆಗಳು ಮತ್ತು ಜನಪದ ಕಥನಗಳ ಮೂಲಕ ಸಾಂಸ್ಕೃತಿಕ ಸತ್ವವನ್ನು ಶೋಧಿಸುವ ಕೆಲಸ ಮಾಡಿದ್ದಾರೆ’ ಎಂದು ತಿಳಿಸಿದರು.

ಕವಿ ಚಂದ್ರಶೇಖರ್ ತಾಳ್ಯ ಮಾತನಾಡಿ, ‘ಕರಿಯಪ್ಪ ಮಾಳಿಗೆ ಅವರು ನಿಜವಾದ ನೆಲದ ಮಗನಾಗಿದ್ದು, ಮಣ್ಣಿನ ಗುಣ ಮತ್ತು ಜನರ ನಾಡಿಮಿಡಿತವನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಕಾಲದಲ್ಲಿ ಮಾನವೀಯ ಸಂಬಂಧಗಳು ಹಳಸುತ್ತಿರುವ ಈ ಸಮಯದಲ್ಲಿ ಮಾಳಿಗೆ ಅವರು ತಮ್ಮ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವ ನಿರ್ಮಲ ಪ್ರೀತಿ ಮತ್ತು ಗೌರವ ಎಲ್ಲರಿಗೂ ಮಾದರಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ಕಥೆಗಾರ ಗಂಗಾಧರಯ್ಯ, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡಿದರು. ಗೌನಹಳ್ಳಿ ಗೋವಿಂದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕರಿಯಪ್ಪ ಮಾಳಿಗೆ ಹಾಗೂ ಅವರ ಪತ್ನಿ ಮಹದೇವಮ್ಮ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೀರೇಶ ವಿ. ಅಪ್ಪು, ನಿರ್ದೇಶಕ ವೀರೇಂದ್ರ ಕುಮಾರ್ ಕೋಗುಂಡೆ ಮಠ, ಉದ್ಯಮಿ ಟಿ.ವಿ.ಅರುಣ್ ಕುಮಾರ್, ಎಸ್.ಸಿದ್ದರಾಜು, ಮಹೇಶ್ ಬಾಬು, ಕೆ.ಪಿ.ಓಂಕಾರಮೂರ್ತಿ, ವಿಜಯ್ ಕುಮಾರ್, ಕೆ.ಚಿತ್ತಯ್ಯ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-44-1518686231

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.