ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನ ಭವಿಷ್ಯ ಮೇ 28, ಗುರುವಾರ 2020

Last Updated 27 ಮೇ 2020, 19:30 IST
ಅಕ್ಷರ ಗಾತ್ರ

ಶಾರ್ವರಿ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜೇಷ್ಠ ಮಾಸ ಶುಕ್ಲ ಪಕ್ಷ ಮಳೆ ನಕ್ಷತ್ರ ರೋಹಿಣಿ ಷಷ್ಠಿ ಗಂ. 36-53 (ರಾ. 8-45) ಗುರುವಾರ ನಿತ್ಯ ನಕ್ಷತ್ರ ಆಶ್ಲೇಷಾ ಗಂ. 56-37 (ರಾ. 4-38) ಧ್ರುವ ನಾಮ ಯೋಗ ಗಂ 41-35 ಕೌಲವ ಕರಣ ಗಂ 8-36 ವಿಷ ಗಂ 29-19 ಅಮೃತ ಗಂ. 52-16 ರಾಹುಕಾಲ ಮ ಗಂ. 1-30 ರಿಂದ 3-00 ಗುಳಿಕ ಕಾಲ ಬೆ ಗಂ 9-00 ರಿಂದ 10-30 ಯಮಗಂಡ ಕಾಲ ಬೆ ಗಂ 6-00 ರಿಂದ 7-30 ಸೂರ್ಯೋದಯ: 5-56 ಸೂರ್ಯಾಸ್ತ: 6-37 ಅದೃಷ್ಟ ಸಂಖ್ಯೆ 9

ಮೇಷ: ಸ್ನೇಹ ಸಂಬಂಧ ವೃದ್ಧಿಸುವ ಸಾಧ್ಯತೆ. ವ್ಯವಹಾರಗಳಲ್ಲಿ ಸಂಬಂಧ ಹಳಸದಂತೆ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ಗುರುವೃಂದದವರಿಂದ ಸೂಕ್ತ ಮಾರ್ಗದರ್ಶನ ದೊರೆಯಲಿದೆ. ಓದಿನಲ್ಲಿ ಯಶಸ್ಸು ಸಿಗಲಿದೆ.

ವೃಷಭ: ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಲಾಭ ಪಡೆಯುವವರ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಬಾಲ ಬಡುಕರನ್ನು ದಿನದ ಮಟ್ಟಿಗೆ ದೂರವಿಡಿ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ.

ಮಿಥುನ: ಇಂದಿನ ಅನಿವಾರ್ಯವಲ್ಲದ ಕೆಲಸ–ಕಾರ್ಯಗಳನ್ನು ಮುಂದೂಡುವುದು ಉತ್ತಮ. ದೂರ ಪ್ರಯಾಣ ಬೇಡ. ಮಕ್ಕಳಿಂದ ಮನಸ್ಸಿಗೆ ಸಂತಸ ದೊರೆಯುವುದು. ಮಡದಿ ನಿಮ್ಮ ಚಿಂತೆಗಳನ್ನು ದೂರ ಮಾಡಲಿದ್ದಾರೆ.

ಕರ್ಕಾಟಕ: ನಿಮ್ಮ ವಿರುದ್ಧ ಸಹೋದ್ಯೋಗಿಗಳಿಂದ ಸಣ್ಣ ಪಿತೂರಿಯೊಂದು ರೂಪುಗೊಳ್ಳುವ ಸಾಧ್ಯತೆಯಿದೆ. ಸಮಾಧಾನ ನಿಮ್ಮ ನೆರವಿಗೆ ಬರುವುದು. ಸಹೋದರಿಯರಿಂದ ಸಕಾಲಿಕ ಸಾಂತ್ವನ.

ಸಿಂಹ: ಮನಸ್ಸಿನಲ್ಲಿ ಹರಿಯುತ್ತಿರುವ ಪ್ರೀತಿ–ಪ್ರೇಮಗಳ ಹುಚ್ಚು ಹೊಳೆಗೆ ಲಗಾಮು ಹಾಕಿಕೊಳ್ಳಿ. ಸ್ನೇಹದ ವಿಷಯದಲ್ಲಿ ಎಡವಿ ಬೀಳುವ ಸಾಧ್ಯತೆ ಇದೆ. ಅಪರಿಚಿತ ವ್ಯಕ್ತಿಗಳೊಡನೆ ವ್ಯವಹರಿಸುವಾಗ ಎಚ್ಚರವಿರಲಿ.

ಕನ್ಯಾ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ಮನಸ್ಸಿಗೆ ನೆಮ್ಮದಿ ನೀಡುವ ಹೊಸ ಮಾರ್ಗವೊಂದು ಗೋಚರವಾಗಲಿದೆ. ವ್ಯಾಪಾರಸ್ಥರಿಗೆ ಉತ್ತಮ ಲಾಭ. ಮನೆ–ಮಂದಿಯೊಂದಿಗೆ ಪ್ರವಾಸ ಮಾಡುವ ಸಾಧ್ಯತೆ ಇದೆ.

ತುಲಾ: ಸಾಲ ಕೊಟ್ಟವರು ಸಾಲ ಮರಳಿ ಪಡೆಯುವ ಬಗ್ಗೆ ತಗಾದೆ ತೆಗೆಯಬಹುದು.ದ್ವೇಷಕ್ಕೆ ಮುಂದಾಗದೆ ಉಪಾಯದಿಂದ ಪಾರಾಗುವ ಬಗ್ಗೆ ಯೋಚಿಸಿ. ಸಂಗಾತಿಯೊಂದಿಗೆ ಸಮಾಲೋಚಿಸಿ ಉತ್ತಮ ನಿರ್ಣಯ ಕೈಗೊಳ್ಳಿ.

ವೃಶ್ಚಿಕ: ಗೆಳೆಯರೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆ. ಕೆಲಸ–ಕಾರ್ಯಗಳಲ್ಲಿ ನಿಮ್ಮ ಸ್ವಭಾವದಿಂದಾಗಿ ಹಿನ್ನೆಡೆ. ದೃಢನಿರ್ಧಾರದಿಂದ ವ್ಯವಹರಿಸಿ. ಹಿರಿಯರ ಬೆಂಬಲದಿಂದಾಗಿ ಯಶಸ್ಸು.

ಧನು: ಸತ್ಯವನ್ನು ಬಯಲುಗೊಳಿಸಲು ಹೋಗಿ ಅವಘಡಕ್ಕೆ ತುತ್ತಾಗುವ ಸಾಧ್ಯತೆ. ಅಂತಹ ಸಂದರ್ಭಗಳನ್ನು ಮುಂದೂಡುವುದೇ ಲೇಸು. ವಾಹನ ಖರೀದಿ ಯೋಗ. ಯಂತ್ರೋಪಕರಣಗಳ ವ್ಯವಹಾರದಲ್ಲಿ ಅಧಿಕ ಲಾಭ.

ಮಕರ: ಸಂಬಂಧವಿಲ್ಲದ ವಿಷಯಗಳು ನಿಮ್ಮನ್ನು ಗೊಂದಲಕ್ಕೆ ಸಿಲುಕಿಸುವ ಸಾಧ್ಯತೆ. ಅಂತಹ ವಿಷಯಗಳಲ್ಲಿ ಅತ್ಯುತ್ಸಾಹ ಸಲ್ಲ. ದೇವತಾ ದರ್ಶನ ಭಾಗ್ಯ ಕಂಡುಬರುತ್ತಿದೆ. ಆರೋಗ್ಯ ವೃದ್ಧಿಯಾಗಿ ಸಂತಸ ಮೂಡುವುದು.

ಕುಂಭ: ಗುಂಪುಗಾರಿಕೆಯಿಂದಾಗಿ ಧನ, ಮಾನ ಹಾನಿ ಸಂಭವ. ಅನ್ಯರ ಮೇಲೆ ವಿನಾ ಸಂಶಯ ಒಳ್ಳೆಯದಲ್ಲ. ದೂರದಲ್ಲಿರುವ ಮಕ್ಕಳ ಆಗಮನ ಸಾಧ್ಯತೆ. ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ.

ಮೀನ: ಬೇರೆಯವರ ಥಳುಕು ಬಳುಕಿನ ಮಾತಿಗೆ ಮರುಳಾಗಿ ಮೋಸ ಹೋಗುವ ಸಾಧ್ಯತೆ. ಹಿರಿಯರ ಹಿತ ನುಡಿಗಳನ್ನು ಮನ್ನಿಸಿ ಅವರ ಆರೋಗ್ಯದ ಕಡೆಗೆ ಗಮನ ವಹಿಸಿ. ದಿನದ ಮಟ್ಟಿಗೆ ದೂರದ ಪ್ರಯಾಣ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT