ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನ ಭವಿಷ್ಯ ಶುಕ್ರವಾರ, ಜೂನ್‌ 26, 2020

Last Updated 25 ಜೂನ್ 2020, 19:30 IST
ಅಕ್ಷರ ಗಾತ್ರ

ಶಾರ್ವರಿ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಆಷಾಢ ಮಾಸ ಶುಕ್ಲ ಪಕ್ಷ ಮಳೆ ನಕ್ಷತ್ರ ಆದ್ರೆ ಪಂಚಮಿ ಗಂ. 1-54 (ಬೆ. 6-49) ಉಪರಿ ಷಷ್ಠೀ ಗಂ. 54-41 ಶುಕ್ರವಾರ ನಿತ್ಯ ನಕ್ಷತ್ರ ಮಖೆ ಗಂ. 14-15 (ಹ. 11-46) ಸಿದ್ಧಿ ನಾಮ ಯೋಗ ಗಂ 51-36 ಬಾಲವ ಕರಣ ಗಂ 1-54 ಉಪರಿ ಕೌಲವ ಕರಣ ಗಂ. 27-20 ವಿಷ ಗಂ. 33-8 ಅಮೃತ ಗಂ. 7-51 ಪುನರಮೃತ ಗಂ. 55-49 ರಾಹುಕಾಲ ಬೆ ಗಂ. 10-30 ರಿಂದ 12-00 ಗುಳಿಕ ಬೆ ಕಾಲ ಗಂ 7-30 ರಿಂದ 9-00 ಯಮಗಂಡ ಕಾಲ ಮ ಗಂ 3-00 ರಿಂದ 4-30 ಸೂರ್ಯೋದಯ: 5-59 ಸೂರ್ಯಾಸ್ತ: 6-45 ಅದೃಷ್ಟ ಸಂಖ್ಯೆ 2, 6, 9

ಮೇಷ: ಕುಟುಂಬ ಸದಸ್ಯರಲ್ಲಿನ ಭಿನ್ನಮತದಿಂದಾಗಿ ಬೇಸರದ ವಾತಾವರಣ. ಹಿರಿಯರ, ಹಿತೈಷಿಗಳ ಮಧ್ಯಪ್ರವೇಶದಿಂದಾಗಿ ಎಲ್ಲವೂ ನಿರ್ಧಾರಕ್ಕೆ ಬರಲಿದೆ. ಆರ್ಥಿಕ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿಂಜರಿಕೆ.

ವೃಷಭ: ಸಂಯಮದಿಂದ ಕಾರ್ಯ ಪ್ರವೃತರಾಗಿ. ಸಾಂಸಾರಿಕವಾಗಿ ತಲೆದೋರಿರುವ ಏರಿಳಿತಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಗುರುಹಿರಿಯರ ಸಕಾಲಿಕ ನೆರವಿನಿಂದ ಸಂತಸದ ಕ್ಷಣಗಳು ನಿಮ್ಮದಾಗುವವು.

ಮಿಥುನ: ನಿಮ್ಮ ಮುಂದಾಳುತನದ ಬಗ್ಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗುವುದು. ಸಾಮಾಜಿಕ ಕೆಲಸಗಳಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆ. ಯಶಸ್ಸಿನ ಅಮಲಿನಲ್ಲಿ ಸಂಸಾರದ ಬಗ್ಗೆ ಅವಗಣನೆ ಸಲ್ಲ.

ಕರ್ಕಾಟಕ: ನಿಮ್ಮ ಬಹುದಿನದ ಕೆಲಸ–ಕಾರ್ಯಗಳು ಕ್ಷಿಪ್ರಗತಿಯಲ್ಲಿ ಮುಗಿದು ಮನಸ್ಸಿಗೆ ನೆಮ್ಮದಿ. ಆರ್ಥಿಕ ರಂಗದಲ್ಲಿಯೂ ಉತ್ತಮ ಪ್ರಗತಿಯನ್ನು ಹೊಂದಿ ನೆಮ್ಮದಿ ನೆಲೆಸುವುದು. ಮನೆಯಲ್ಲಿ ಹಬ್ಬದ ವಾತಾವರಣ.

ಸಿಂಹ: ಕಾರ್ಯಕ್ಷೇತ್ರದಲ್ಲಿ ಒತ್ತಡವಿದ್ದರೂ ಯೋಜಿತ ಕ್ರಮದಂತೆ ಸುಗಮವಾಗಿ ಕೈಗೂಡುವುದು. ಮನಸ್ಸಿಗೆ ನೆಮ್ಮದಿ ದೊರೆತು ನಿರಾಳವಾಗುವಿರಿ. ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದನ್ನು ಕೇಳುವ ಅವಕಾಶ.

ಕನ್ಯಾ: ನಿಮ್ಮ ಧಾರ್ಮಿಕ ನಡೆಯ ಬಗ್ಗೆ ಇತರರಲ್ಲಿ ಅಚ್ಚರಿ ಮೂಡುವುದು. ಹೊಸ ವಿಚಾರವೊಂದು ಮನದಲ್ಲಿ ಮೂಡಿ ಚಿಂತನೆಗೆ ಹಚ್ಚಲಿದೆ. ಸಮತೋಲನ ದೃಷ್ಟಿಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ.

ತುಲಾ: ಪರಿಸ್ಥಿತಿ ನಿಮಗೆ ವಿರೋಧವಾಗಿರುವುದರ ಜೊತೆಗೆ ಮಕ್ಕಳ ನಡೆ ನುಡಿಗಳಿಗೆ ನೀವು ತಲೆ ತಗ್ಗಿಸುವ ಸಂದರ್ಭ ಒದಗಬಹುದು. ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳುವಿರಿ. ಕುಲದೇವತಾ ಆರಾಧನೆಯಿಂದ ನೆಮ್ಮದಿ.

ವೃಶ್ಚಿಕ: ನಿಮ್ಮ ಕೆಲಸ–ಕಾರ್ಯಗಳು ಎಂದಿನಂತೆ ಸುಗಮವಾಗಿ ಸಾಗಲಿದೆ. ಆದರೆ ಅನ್ಯರ ಅನಪೇಕ್ಷಿತ ಹಸ್ತಕ್ಷೇಪದಿಂದ ಮಾನಸಿಕ ಕಿರಿಕಿರಿ. ಸಂಯಮದಿಂದ ಹಸ್ತಕ್ಷೇಪವನ್ನು ಗಡೆಗಣಿಸುವುದು ಉತ್ತಮ.

ಧನು: ವಿದ್ಯಾರ್ಥಿಗಳಿಗೆ ಪ್ರಗತಿದಾಯಕ ದಿನ. ವಿವಾಹಾಕಾಂಕ್ಷಿಗಳಿಗೆ ಉತ್ತಮ ಆಯ್ಕೆ ದೊರೆಯುವುದು. ಕ್ಷಿಪ್ರ ವಿವಾಹ ಸಂಬಂಧಗಳು ಕೂಡಿಬರುವ ಸಾಧ್ಯತೆ. ದಿನದಾಂತ್ಯಕ್ಕೆ ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ.

ಮಕರ: ಬಾಹ್ಯ ಸೌಂದರ್ಯದ ಸೆಳೆತದಿಂದಾಗಿ ಸಂಕಟಗಳು ಎದುರಾಗುವ ಸಾಧ್ಯತೆ. ಮನೋವೃತ್ತಿಯ ಮೇಲೆ ಹಿಡಿತ ಸಾಧಿಸಿ. ದಿನನಿತ್ಯದ ಕಾರ್ಯಗಳಲ್ಲಿ ಗಮನ ವಹಿಸುವುದು ಉತ್ತಮ. ಸಂಗಾತಿ ಮಾತಿಗೆ ಮನ್ನಣೆ ನೀಡಿ.

ಕುಂಭ: ಕಾವ್ಯ, ಕವನಗಳ ಬರವಣಿಗೆಯಲ್ಲಿ ಆಸಕ್ತಿ ಮೂಡುವುದು. ನಿಮ್ಮ ಮೇಲಿನ ಎಲ್ಲ ಆಪಾದನೆಗಳಿಂದ ಮುಕ್ತಿಪಡೆದು ಅಭಿಮಾನಕ್ಕೆ ಪಾತ್ರರಾಗುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.

ಮೀನ: ಕೆಲಸ-ಕಾರ್ಯಗಳಲ್ಲಿ ಹೊಸತನ, ಉತ್ಸಾಹಗಳು ಮೂಡಿಬರಲಿವೆ. ವೈದ್ಯಕೀಯ ವಲಯದಲ್ಲಿರುವವರಿಗೆ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಧನಪ್ರಾಪ್ತಿ. ಹೊಸ ಹೊಸ ಸ್ನೇಹಿತರಿಂದ ಹೊಸ ವಿಚಾರಗಳ ಬಗ್ಗೆ ತಿಳಿವಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT