ದಾವಣಗೆರೆ: ಸಮಾಜದಲ್ಲಿರುವ ಜಾತಿ ಪಿಡುಗಿಗೆ ಬಸವ ತತ್ವವೇ ಔಷಧ ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ವಿರಕ್ತಮಠದಲ್ಲಿ ಬಸವ ಜಯಂತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ ಮೆರವಣಿಗೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘900 ವರ್ಷಗಳ ಹಿಂದೆಯೇ ವಿಶ್ವಮಾನವ ತತ್ವವನ್ನು ಜಗತ್ತಿಗೆ ಸಾರಿದವರು ಬಸವಣ್ಣ. ಜಾತಿ ವ್ಯವಸ್ಥೆ, ಮೇಲು–ಕೀಳು ಹಾಗೂ ಲಿಂಗ ಬೇಧಗಳಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿ ಸಮಾನತೆಯನ್ನು ಸಾರಿದರು’ ಎಂದು ಪ್ರತಿಪಾದಿಸಿದರು.

‘ಮುರುಘಾ ಪರಂಪರೆಯ ವಿರಕ್ತಮಠದಲ್ಲಿ 16 ವರ್ಷಗಳಿಂದ ಶಿಶುಗಳನ್ನು ತೊಟ್ಟಿಲಿಗೆ ಹಾಕಿ ನಾಮಕರಣ ಮಾಡಲಾಗುತ್ತದೆ. ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಒಂದೇ ದಿನ ಇರುವುದು ಹರ್ಷವುಂಟು ಮಾಡಿದೆ. ಶಿಶುಗಳನ್ನು ಬಸವ ತೊಟ್ಟಿಲಿಗೆ ಹಾಕುವ ಮೂಲಕ ಬಂಗಾರದಂತ ಗುಣಗಳನ್ನು ಚಿಣ್ಣರಲ್ಲಿ ಬೆಳೆಸಲಾಗುತ್ತಿದೆ’ ಎಂದು ಹೇಳಿದರು.

ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು, ‘ಮೊಟ್ಟ ಮೊದಲ ಬಸವ ಜಯಂತಿ ದಾವಣಗೆರೆಯಲ್ಲಿ ನಡೆದಿದೆ. ಇಂತಹ ಐತಿಹಾಸಿಕ ಘಟನೆ ನಡೆದಿರುವ ವಿರಕ್ತಮಠದಲ್ಲಿ ಮಕ್ಕಳಿಗೆ ಬಸವಾಶೀರ್ವಾದ ದೊರೆಯುತ್ತಿರುವುದು ಸಂತಸ ನೀಡಿದೆ’ ಎಂದು ಹೇಳಿದರು.

ಬಸವ ಜಯಂತಿ ಪ್ರಯುಕ್ತ ನಡೆದ ತೊಟ್ಟಿಲು ಕಾರ್ಯಕ್ರಮದಲ್ಲಿ ಶಿಶುಗಳಿಗೆ ವಚನ, ಅಕ್ಕಮಹಾದೇವಿ, ಅಲ್ಲಮಪ್ರಭು, ಸತ್ಯಕ್ಕ, ಬಸವರಾಜ, ಚೆನ್ನಬಸವಣ್ಣ, ಸಿದ್ಧರಾಮೇಶ್ವರ, ಮುಕ್ತಾಯಕ್ಕ ಎಂಬ ಹೆಸರುಗಳನ್ನು ಇಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-43-1401702554

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.