ದಾವಣಗೆರೆ: ‘ಸಮಾಜದಲ್ಲಿ ಶಾಂತಿ ಕಾಪಾಡಲು ಆಚಾರ-ವಿಚಾರಗಳು ಹಾಗೂ ಸಂಸ್ಕಾರಗಳು ಅಡಿಪಾಯವಾಗ ಬೇಕು. ಅಂತರಂಗದ ಶುದ್ಧಿ ಮತ್ತು ಮಾನವೀಯ ಮೌಲ್ಯಗಳಿಲ್ಲದ ಬದುಕು ಅರ್ಥಹೀನ’ ಎಂದು ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ದೇವರಾಜ ಅರಸು ಬಡಾವಣೆಯ ಹಾಲಕೆರೆ ಅನ್ನದಾನೀಶ್ವರ ಶಾಖಾ ಮಠದಲ್ಲಿ ಈಚೆಗೆ ನಡೆದ 292ನೇ ಶಿವಾನುಭವ ಸಂಪದ ಹಾಗೂ ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ವ್ಯಕ್ತಿ ತನ್ನ ಬದುಕನ್ನು ರೂಪಿಸಿಕೊಳ್ಳುವಾಗ ಇತರರ ವಿಚಾರಗಳಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡಬಾರದು. ಪ್ರೀತಿ, ವಿಶ್ವಾಸದಿಂದ ಸಹಬಾಳ್ವೆ ನಡೆಸಬೇಕು. ದೇವರು ಹೊರಗಿಲ್ಲ, ನಮ್ಮೊಳಗೇ ಇದ್ದಾನೆ ಎಂಬ ಅರಿವು ನಮ್ಮನ್ನು ಸರಿ ದಾರಿಯಲ್ಲಿ ನಡೆಸುತ್ತದೆ. ಸಂಸ್ಕೃತಿ ಮತ್ತು ಸಂಸ್ಕಾರಗಳು ಕೇವಲ ಮಾತಿಗೆ ಸೀಮಿತವಾಗದೆ ದೈನಂದಿನ ಬದುಕಿನ ಭಾಗವಾಗಬೇಕು’ ಎಂದರು.

‘ಪ್ರಕೃತಿಯ ಬದಲಾವಣೆಗಳಿಗೆ ಅನು ಗುಣವಾಗಿ ಆಹಾರ ಪದ್ಧತಿಯನ್ನು ರೂಪಿಸಿಕೊಳ್ಳುವುದು ಅಗತ್ಯ. ಬೇಸಿಗೆಯಲ್ಲಿ ದೇಹದ ಉಷ್ಣತೆ ಸಮತೋಲನದಲ್ಲಿಡಲು ಮಜ್ಜಿಗೆ, ನಿಂಬೆ ಶರಬತ್ತು ಹಾಗೂ ದ್ರವಾಹಾರಕ್ಕೆ ಆದ್ಯತೆ ನೀಡಬೇಕು. ಬಸವಣ್ಣನವರು ಸಾರಿದ ಮಿತಾಹಾರದ ತತ್ವ ಇಂದಿಗೂ ಪ್ರಸ್ತುತ’ ಎಂದು ಪ್ರೊ.ರವಿಕುಮಾರ್ ಪಾಟೀಲ್ ಹೇಳಿದರು.

ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶಿವಕುಮಾರ ಕಣಸೋಗಿ, ‘ಇಂದು ಜಾಗತಿಕ ಯುದ್ಧಗಳಿಂದ ಹಿಡಿದು ಮನೆಯೊಳಗಿನ ಆಸ್ತಿ ವಿವಾದಗಳವರೆಗೆ ಎಲ್ಲೆಡೆ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ. ಬಸವಣ್ಣನವರ ವಚನಗಳು ಕೇವಲ ಸಾಹಿತ್ಯವಲ್ಲ, ಅವು ಬದುಕಿನ ಪಾಠಗಳು. ಹೊರಗಿನ ಲೋಕವನ್ನು ಬದಲಾಯಿಸುವುದಕ್ಕಿಂತ ನಮ್ಮೊಳಗಿನ ಮನೋಭಾವ ಬದಲಿಸಿಕೊಳ್ಳುವುದು ಮುಖ್ಯ’ ಎಂದರು.

ಮಠದ ಕಾರ್ಯದರ್ಶಿ ಎನ್. ಅಡಿವೆಪ್ಪ, ನಾಗರಾಜ್ ಯರಗಲ್, ಕಲ್ಲೇಶ್, ಎನ್.ಎ. ಗುರುರಾಜ್, ವಿವೇಕ್ ಎಲ್. ಬದ್ದಿ, ಪತ್ರಕರ್ತ ಅನಿಲ್ ಕುಮಾರ್ ವಿ. ಭಾವಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-43-1646232512

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.