ದೇವನಹಳ್ಳಿ: ತಾಲೂಕಿನ ಕಾರಹಳ್ಳಿಯ ವಿಶ್ವಜ್ಯೋತಿ ಬುದ್ಧ ವಿಹಾರದಲ್ಲಿ ಈಚೆಗೆ ಬುದ್ಧ ಜಯಂತಿ ನಡೆಯಿತು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಇತಿಹಾಸದಲ್ಲಿ ಬುದ್ಧನ ಸ್ಥಾನ ಅನನ್ಯವಾಗಿದ್ದು, ಮಾನವನ ದುಃಖಗಳಿಗೆ ಮೂಲ ಕಾರಣ ಆಸೆ ಎಂಬ ಸತ್ಯ ಬೋಧಿಸಿದ ಮಹಾತ್ಮ ಎಂದು ಹೇಳಿದರು.

ಬೌದ್ಧ ಧರ್ಮ ಸಮ ಸಮಾಜ ಮತ್ತು ಸಮಾನತೆ ಸ್ಥಾಪನೆಗೆ ಮಾರ್ಗದರ್ಶಿ. ಬುದ್ಧನ ಉಪದೇಶ ಶಾಂತಿ, ಕರುಣೆ ಹಾಗೂ ನೆಮ್ಮದಿಯ ಬದುಕಿಗೆ ದಾರಿಯಾಗಿದೆ. ಪ್ರತಿಯೊಬ್ಬರೂ ಪಂಚಶೀಲಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

ಸಾವಿರಾರು ವರ್ಷಗಳ ಹಿಂದೆಯೇ ಬುದ್ಧ ಪಂಚಶೀಲಗಳ ಮೂಲಕ ಸುಖ ಜೀವನದ ಮಾರ್ಗ ತೋರಿಸಿದ್ದಾರೆ. ಶಾಂತಿ ಮತ್ತು ಸಮಾನತೆಯ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಮುಖಂಡ ಕಾರಹಳ್ಳಿ ಕೇಶವ ಹೇಳಿದರು.

ಬೌದ್ಧ ಧರ್ಮವು ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಬುದ್ಧರ ಆದರ್ಶಗಳು ಇಂದಿನ ಸಮಾಜಕ್ಕೂ ಅಗತ್ಯವಾಗಿವೆ ಎಂದು ವಿಹಾರದ ಕಾರ್ಯದರ್ಶಿ ಕೆಂಪಣ್ಣ ಹೇಳಿದರು.

ಮುನಿರಾಜು, ಕೃಷ್ಣ ತೈಲಗೆರೆ, ಮುನಿರಾಜು ಕಾರಹಳ್ಳಿ, ಆನಂದಮ್ಮ, ಅರುಣ, ಆಶಾ, ಮನೋಜ, ಯಶವಂತ, ಮಂಜುನಾಥ, ಮಾನಸ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-15-884492615

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.