ಧರ್ಮಾಪುರ: ‘ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಪ್ರತಿಯೊಂದು ಜಾತಿ, ಧರ್ಮ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ರಕ್ಷಣೆಯಾಗಿದೆ’ ಎಂದು ಸಾಮಾಜಿಕ ಹೋರಾಟಗಾರ ಹರಿಹರ ಆನಂದಸ್ವಾಮಿ ತಿಳಿಸಿದರು.

ಸಮೀಪದ ರತ್ನಪುರಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘ, ಮಹಿಳಾ ಒಕ್ಕೂಟ, ಸ್ವಸಹಾಯ ಸಂಘಗಳು ಹಾಗೂ ಗ್ರಾಮಸ್ಥರು ಸೇರಿ ಏರ್ಪಡಿಸಿದ್ದ ಅಂಬೇಡ್ಕರ್ 135ನೇ ಜನ್ಮದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

‘ಯುವತಿಯರು ಅಂಬೇಡ್ಕರ್ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಸಂವಿಧಾನವು ಪ್ರೀತಿ, ಶಾಂತಿ, ಕರುಣೆ ಎಲ್ಲವನ್ನು ಒಳಗೊಂಡಿದೆ, ಪ್ರತಿಯೊಂದಕ್ಕೂ ಕಾನೂನುಗಳಿವೆ. ಅಂಬೇಡ್ಕರ್ ಕೊಟ್ಟ ಮೀಸಲಾತಿ, ಸಂವಿಧಾನದಿಂದ ಅಧಿಕಾರಕ್ಕೆ ಬಂದು ಅದರ ವಿರುದ್ಧವೇ ಮಾತನಾಡುವುದು ಸರಿಯಲ್ಲ, ದೇಶದ ಆಡಳಿತ ಸಂವಿಧಾನದ ಅಡಿಯಲ್ಲಿದೆ ಎಂಬುದನ್ನು ಎಲ್ಲ ವರ್ಗದ ಜನರು ತಿಳಿದುಕೊಳ್ಳಬೇಕು’ ಎಂದರು.

ದಸಂಸ ರಾಜ್ಯ ಸಂಚಾಲಕ ನಿಂಗರಾಜ್ ಮಲ್ಲಾಡಿ ಮಾತನಾಡಿ, ‘ಮಹಿಳೆಯರಿಗೆ, ದಲಿತರಿಗೆ ಸಂವಿಧಾನದ ಮೂಲಕ ರಕ್ಷಣೆ ನೀಡಿದವರು ಅಂಬೇಡ್ಕರ್. ನಾವು ಬದಲಾದರೆ ಮಾತ್ರ ಸಮಾಜ ಸುಧಾರಣೆ ಆಗುತ್ತದೆ’ ಎಂದರು.

ರತ್ನಪುರಿ ಪುಟ್ಟಸ್ವಾಮಿ ಮಾತಾನಾಡಿ, ‘ಗ್ರಾಮದಲ್ಲಿ ಎಲ್ಲ ಜಾತಿ, ಧರ್ಮಗಳು ಸೇರಿ ಅಂಬೇಡ್ಕರ್ ಜಯಂತಿ ಜೊತೆಗೆ ಪ್ರತಿಯೊಬ್ಬ ಮಹನೀಯರ ಜಯಂತಿಗಳನ್ನು ಆಚರಣೆ ಮಾಡುವುದು ಪ್ರತಿಯೊಂದು ನಗರಗಳಿಗೂ ಮಾದರಿ’ ಎಂದರು.

ಸಂಪನ್ಮೂಲ ವ್ಯಕ್ತಿ ನಾಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ರಾವ್ ಮೆಂಗಾಣಿ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ವಿಜಯೇಂದ್ರ ಕುಮಾರ್, ಡೇವಿಡ್, ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು.

ದಸಂಸ ಮುಖಂಡ ಬಿ.ವೈ.ಪ್ರಸನ್ನ, ಗ್ರಾ.ಪಂ. ಸದಸ್ಯರಾದ ಮನು ಕುಮಾರ್, ರಾಮಭೋವಿ, ರತ್ನಮ್ಮ, ಅಕ್ರಮ ಸಕ್ರಮ ಸಮಿತಿ ಸದಸ್ಯ ಕುಮಾರ್, ಬಿಳಿಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸುದರ್ಶನ್ ಸಿಂಗ್, ಮುಖಂಡರಾದ ರಾಮಸ್ವಾಮಿ, ಮುರುಗೇಶ್, ಎಸ್.ಪಿ.ಚಾಂದ್, ಪಿಡಿಒ ಶ್ರೀಧರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-38-1626714769

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.