ಧಾರವಾಡ: ‘ನಾಡಿನಲ್ಲಿ ಹಲವಾರು ಧರ್ಮಗಳು ಸಾಮರಸ್ಯದ ಬಾಳ್ವೆಯ ಅರಿವು ಮತ್ತು ಅನುಭಾವವನ್ನು ನೀಡಿದವು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.

ಕರ್ನಾಟಕ ವಿ.ವಿ ಬಸವೇಶ್ವರ ಪೀಠದ ವತಿಯಿಂದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಕನ್ನಡ ಸಾಹಿತ್ಯ ಪರಂಪರೆ ಮತ್ತು ಅನುಭಾವ’ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಾಮರಸ್ಯದ ಜೀವನ ನಡೆಸಲು ಅನೇಕ ಧರ್ಮಗಳು ತಾತ್ವಿಕ ಚಿಂತನೆಗಳನ್ನು ನೀಡಿವೆ. ಎಲ್ಲ ಧರ್ಮಗಳ ಸಾರ ಸಹಬಾಳ್ವೆ’ ಎಂದರು.

ಕುಲಪತಿ ಪ್ರೊ.ಎ.ಎಂ.ಖಾನ್ ಮಾತನಾಡಿ, ‘ಶಿಕ್ಷಣವು ಮನುಷ್ಯನಲ್ಲಿ ಉತ್ತಮ ಸಂಸ್ಕಾರ ಬೆಳೆಸುತ್ತದೆ. ಮನುಷ್ಯರಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಮೂಡಿಸಲು ಎಲ್ಲ ಧರ್ಮಗಳು ಸಹಾಯಕವಾಗಿವೆ’ ಎಂದರು.

ಪ್ರಭಾರ ಕುಲಸಚಿವ ಪ್ರೊ.ಎ.ಎಚ್.ಅಗಡಿ ಮಾತನಾಡಿ, ‘12ನೇ ಶತಮಾನದಲ್ಲಿ ವಚನಕಾರರು ವಚನಗಳ ಮೂಲಕ ಸತ್ಯ, ಕಾಯಕ ಸೇರಿದಂತೆ ಜೀವನ ಸಂದೇಶ ಮೌಲ್ಯಗಳನ್ನು ಸಾರಿದರು. ಎಲ್ಲ ಧರ್ಮಗಳು ಜೀವನದ ಸೌಹಾರ್ದತೆಯ ಸಂದೇಶವನ್ನು ನೀಡಿವೆ’ ಎಂದರು.

ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಕಡಕೋಳ, ಬಸವೇಶ್ವರ ಪೀಠದ ಸಂಯೋಜಕ ನಿಜಲಿಂಗಪ್ಪ ಮಟ್ಟಿಹಾಳ, ಸಿಂಡಿಕೇಟ್ ಸದಸ್ಯರಾದ ಶ್ಯಾಮ ಮಲ್ಲನಗೌಡರ, ರಾಬರ್ಟ್ ದದ್ದಾಪೂರಿ, ಸಂಶೋಧಕ ಪ್ರೊ.ವೀರಣ್ಣ ರಾಜೂರ, ಕೆ.ಆರ್.ದುರ್ಗಾದಾಸ್, ಈರಣ್ಣ ಇಂಜನಗೇರಿ, ಪ್ರೊ.ಶಿರಾಳಶೆಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-24-119876701

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.