ಇಸ್ಲಾಮಿಕ್ ಕ್ಯಾಲೆಂಡರ್ನ ರಂಜಾನ್ ಮಾಸದ ಚಂದ್ರದರ್ಶನದೊಂದಿಗೆ ಆರಂಭವಾಗುವ ಉಪವಾಸವು ಶವ್ವಾಲ್ ತಿಂಗಳ ಚಂದ್ರದರ್ಶನದೊಂದಿಗೆ ಕೊನೆಗೊಳ್ಳುತ್ತದೆ. ಶವ್ವಾಲ್ ತಿಂಗಳ ಮೊದಲ ದಿನ ಈದುಲ್ ಫಿತ್ರ್ ಹಬ್ಬದ ಸಂಭ್ರಮ.

ರಂಜಾನ್ ತಿಂಗಳ 30 ದಿನಗಳನ್ನು ಉಪವಾಸ, ಅಧ್ಯಾತ್ಮದಲ್ಲೇ ಕಳೆದು ಕೊನೆಯಲ್ಲಿ ಮುಸ್ಲಿಮರು ಹಬ್ಬ ಆಚರಿಸುವರು. ಹಬ್ಬದ ದಿನ ಬೆಳಿಗ್ಗೆ ಮಸೀದಿ ಅಥವಾ ಈದ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯುತ್ತದೆ. ಹಬ್ಬದ ದಿನ ಕೇಳಿಬರುವ ‘ಅಲ್ಲಾಹು ಅಕ್ಬರ್’ (ಅಲ್ಲಾಹನು ಶ್ರೇಷ್ಠನು) ಎಂಬ ಅಲ್ಲಾಹನ ನಾಮಸ್ಮರಣೆಯು ದೇವನ ಶ್ರೇಷ್ಠತೆಯನ್ನು, ಮಾನವಕುಲದ ಸಮಾನತೆ ಮತ್ತು ಏಕತೆಯನ್ನು ಪ್ರತಿಪಾದಿಸುತ್ತದೆ.

ಈದ್ ನಮಾಜ್ ಹಬ್ಬದ ಪ್ರಮುಖ ಆಕರ್ಷಣೆ. ಬಡವ, ಶ್ರೀಮಂತ ಎಂಬ ಭೇದವಿಲ್ಲದೆ, ಮೇಲು-ಕೀಳೆಂಬ ತಾರತಮ್ಯವಿಲ್ಲದೆ ಎಲ್ಲರೂ ಸಾಲಾಗಿ ನಿಂತು ಪ್ರಾರ್ಥಿಸುವ ಸನ್ನಿವೇಶ ದೇವನ ಮುಂದೆ ಎಲ್ಲರೂ ಸಮಾನರೆಂಬ ಸಂದೇಶವನ್ನು ಸಾರುತ್ತದೆ. ದೈನಂದಿನ ಸಾಮೂಹಿಕ ನಮಾಜ್ನ ಆಶಯ ಕೂಡ ಇದೇ ಆಗಿದೆ. ಈದ್ ನಮಾಜ್ ಬಳಿಕ ‘ಖುತ್ಬಾ’ ಪ್ರವಚನ ಇರುತ್ತದೆ.

ಪ್ರಾರ್ಥನೆಯ ಬಳಿಕ ಎಲ್ಲರೂ ಪರಸ್ಪರ ಹಸ್ತಲಾಘವ ಮಾಡಿಕೊಂಡು, ಆಲಿಂಗಿಸಿ ಈದ್ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಈದ್ ಹಬ್ಬ ಪರಸ್ಪರ ಸಂಬಂಧ, ಬಾಂಧವ್ಯವನ್ನು ಬಲಪಡಿಸುವ ದಿನವಾಗಿದೆ. ಆದ್ದರಿಂದ ಪ್ರಾರ್ಥನೆಯ ಬಳಿಕ ಸಂಬಂಧಿಕರು, ಸ್ನೇಹಿತರ ಮನೆಗಳಿಗೆ ಭೇಟಿ ನೀಡುತ್ತಾರೆ. ನೆರೆಯವರು, ಬಂಧುಮಿತ್ರರನ್ನು ತಮ್ಮ ಮನೆಗಳಲ್ಲಿ ಸತ್ಕರಿಸುತ್ತಾರೆ. ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸುತ್ತಾರೆ.

ಇಸ್ಲಾಮಿನ ಹಬ್ಬಗಳಲ್ಲಿ ಕಂಡು ಬರುವ ಪ್ರಮುಖ ಅಂಶಗಳೆಂದರೆ ಪ್ರೀತಿ, ಸೌಹಾರ್ದ, ಸಂಬಂಧಗಳ ಸುಧಾರಣೆ ಮತ್ತು ದೇವನೊಂದಿಗೆ ಪ್ರಕಟಿಸಬೇಕಾದ ಕೃತಜ್ಞತೆಯ ಮನೋಭಾವ. ಸಮಾಜದಲ್ಲಿ ಪ್ರೀತಿ, ಸಮಾನತೆಯ ಸಂದೇಶ ಹರಡುವುದಕ್ಕೆ ಹಬ್ಬಗಳಲ್ಲಿ ಒತ್ತು ಕೊಡಲಾಗಿದೆ. ಮನುಷ್ಯನು ಕೇವಲ ತನ್ನ ವೈಯಕ್ತಿಕ ಏಳಿಗೆಯಲ್ಲಿ ಸಂತಸಪಡದೆ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಿತವನ್ನೂ ಬಯಸಬೇಕು ಎಂಬ ಸಂದೇಶವನ್ನೂ ಹಬ್ಬವು ಸಾರುತ್ತದೆ.

ಫಿತ್ರ್ ಝಕಾತ್ (ಕಡ್ಡಾಯ ದಾನ): ಹಬ್ಬದ ದಿನ ಬಡವರಿಗೆ ದಾನ ಕೊಡಬೇಕು ಎಂದು ಇಸ್ಲಾಂ ಆದೇಶಿಸಿದೆ. ಈದ್ ದಿನ ವಿಶೇಷ ಪ್ರಾರ್ಥನೆಗಾಗಿ ಮಸೀದಿಗೆ ಹೋಗುವ ಮುನ್ನ ಕಡ್ಡಾಯ ದಾನ ಮಾಡಲೇಬೇಕು. ಅದನ್ನು ‘ಫಿತ್ರ್ ಝಕಾತ್’ ಎನ್ನುವರು. ಆರ್ಥಿಕ ಮುಗ್ಗಟ್ಟು ಇಲ್ಲದಿರುವ ಪ್ರತಿಯೊಬ್ಬನೂ ತನ್ನ ಅಧೀನದಲ್ಲಿರುವ ಪ್ರತಿಯೊಬ್ಬ ಮನೆಯ ಸದಸ್ಯನ ಪರವಾಗಿ ಸುಮಾರು ಎರಡೂವರೆ ಕೆ.ಜಿ. ಧಾನ್ಯ ಅಥವಾ ಅದಕ್ಕೆ ಸಮನಾದ ಹಣವನ್ನು ದಾನವಾಗಿ ನೀಡಬೇಕು.

ಧಾನ್ಯ ನೀಡುವುದಾದರೆ ಆಯಾ ಪ್ರದೇಶದ ಜನರು ಸಾಮಾನ್ಯವಾಗಿ ತಿನ್ನುವ ಆಹಾರವನ್ನು (ಅಕ್ಕಿ, ಗೋಧಿ, ಜೋಳ, ಬೇಳೆ) ನೀಡಬೇಕು. ಝಕಾತ್ ಪಡೆಯುವವರ ಆಹಾರ ಪದ್ಧತಿಯನ್ನರಿತು, ಅವರ ಊರಿನ ಆಹಾರಪದ್ಧತಿಯಂತೆಯೇ ಝಕಾತ್ ನೀಡಬೇಕು.

ತನ್ನ ಹಾಗೂ ಕುಟುಂಬ ಸದಸ್ಯರ ಆಹಾರ, ಬಟ್ಟೆ ಮತ್ತು ಮೂಲ ಅಗತ್ಯಗಳಿಗಿಂತ ಹೆಚ್ಚು ಸಂಪತ್ತು ಇರುವ ಪ್ರತಿಯೊಬ್ಬನಿಗೆ ‘ಫಿತ್ರ್ ಝಕಾತ್’ ಕಡ್ಡಾಯ. ಬಡವರಿಗೂ ಹಬ್ಬದ ಸಂಭ್ರಮ ಆಚರಿಸಲು ಸಾಧ್ಯವಾಗಬೇಕು ಎಂಬುದು ಇದರ ಉದ್ದೇಶ. ಝಕಾತ್ ಅನ್ನು (ದಾನ) ಹಬ್ಬದೊಂದಿಗೆ ಜೋಡಿಸಿರುವ ಕ್ರಮದಿಂದಾಗಿ ಇದು ಬಡವರ ಪಾಲಿನ ಹಬ್ಬ ಎನಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.