ಗದಗ: ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಶಾರದಾ ಪೀಠ ಶೃಂಗೇರಿ ವತಿಯಿಂದ ಏ.20ರಿಂದ ಮೇ 3ರವರೆಗೆ ಸಂಸ್ಕಾರ ಸುಧಾ 14 ದಿನಗಳ ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.

ನಗರದ ನಗರೇಶ್ವರ ದೇವಸ್ಥಾನ ಆವರಣದಲ್ಲಿರುವ ವಾಸವಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ (ನರಿಭಾವಿ ಓಣಿ, ವಿ.ಎನ್.ಟಿ. ರಸ್ತೆ) ಉಚಿತ ಬೇಸಿಗೆ ಶಿಬಿರ ಪ್ರತಿದಿನ ಬೆಳಿಗ್ಗೆ 10ರಿಂದ 1.30ರವರೆಗೆ ನಡೆಯಲಿದೆ. 10 ರಿಂದ 16 ವರ್ಷಗಳ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು.

ಮಕ್ಕಳಲ್ಲಿ ಆಧುನಿಕತೆಯ ಜೊತೆಗೆ ಧಾರ್ಮಿಕ ಮೌಲ್ಯಗಳು, ನೈತಿಕತೆ ಹಾಗೂ ಸಂಸ್ಕಾರಗಳು ಬೆಳೆಯಬೇಕು ಎಂಬ ಉದ್ದೇಶದಿಂದ ಈ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ, ನಮ್ಮ ಪರಂಪರೆ ಸಂಸ್ಕಾರ, ಸಂಸ್ಕೃತಿ, ಧಾರ್ಮಿಕ ಮೌಲ್ಯಗಳ ಪರಿಚಯ ಮತ್ತು ಸರಳ ನಿತ್ಯಪೂಜೆಯ ತರಬೇತಿ ನಂತರ ಪ್ರಮಾಣಪತ್ರ ಶಿಬಿರ ಕಿಟ್ ನೀಡಲಾಗುವುದು. ಶಿಬಿರ ಆರಂಭವಾಗುವ ಮುಂಚೆಯೇ ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಬೇಕು.

ಮಾಹಿತಿಗೆ ಸಂಚಾಲಕರಾದ ಡಾ. ಗಣೇಶ ಸುಲ್ತಾನಪುರ 99020 66252, ಸಹ ಸಂಚಾಲಕರಾದ ಸತೀಶ ಕುಂಬಾರ 80509 03407 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-23-59754683

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.