ಗದಗ: ‘ಅಂತಸ್ತು, ಐಶ್ವರ್ಯಗಳಿಂದ ವ್ಯಕ್ತಿತ್ವ ಬೆಳೆಯುವುದಿಲ್ಲ. ಕೇವಲ ಸ್ವಾರ್ಥಕ್ಕಾಗಿ ಬದುಕುವವರು ಸಾಧಕರಾಗುವದಿಲ್ಲ. ಸ್ವಾರ್ಥ ಇತಿಮಿತಿಯಲ್ಲಿ ಇರಬೇಕು. ಪ್ರತಿಯೊಬ್ಬ ವ್ಯಕ್ತಿ ಸಮಾಜಕ್ಕಾಗಿ ಕೊಡುಗೆ ನೀಡುವ ಮನೋಬಲ ಹೊಂದಬೇಕು’ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಹಿರಿಯ ಸಾಹಿತಿ ಡಿ.ವಿ. ಬಡಿಗೇರ ಅವರ 75ನೇ ಜನ್ಮದಿನದ ಪ್ರಯುಕ್ತ ಕಬ್ಬಿಗರ ಕೂಟದಲ್ಲಿ ಹಮ್ಮಿಕೊಂಡಿದ್ದ ಅಭಿನಂದನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಡಿ.ವಿ. ಬಡಿಗೇರ ಸಾಹಿತಿಯಾಗಿ, ಸಾಹಿತ್ಯ ಸಂಘಟಕರಾಗಿ ಹಾಗೂ ದಕ್ಷ ಅಧಿಕಾರಿಯಾಗಿ ಜನಮೆಚ್ಚುವ ಕೆಲಸ ಮಾಡಿದ್ದಾರೆ. ಅವರ ಪ್ರಾಮಾಣಿಕತೆ, ನಿಷ್ಕಳಂಕ ಜೀವನಶೈಲಿ, ಹೋರಾಟ ಮನೋಭಾವ ಅವರಲ್ಲಿ ನೇರ ನುಡಿ, ದಿಟ್ಟ ನಡೆಯನ್ನು ಹುಟ್ಟುಹಾಕಿದೆ. ಚುಟುಕಿನ ಚಾಟಿ ಬೀಸುವ ಮೂಲಕ ಅವರು ಗಮನಾರ್ಹ ಸಾಹಿತಿಯಾಗಿ ಬೆಳೆದಿದ್ದಾರೆ’ ಎಂದರು.

ಮಾಜಿ ಸಚಿವ, ಶರಣ ತತ್ವ ಚಿಂತಕ ಎಸ್.ಎಸ್. ಪಾಟೀಲ, ಪ್ರೊ. ಕೆ.ಎಚ್.ಬೇಲೂರ, ಸಾಹಿತಿ ಗು.ರು. ಕಲ್ಮಠ, ಕಥೆಗಾರ ಬಸವರಾಜ ಗಣಪ್ಪನವರ, ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ, ಸುಭದ್ರಾ ಡಿ. ಬಡಿಗೇರ ಅಥಿತಿಗಳಾಗಿ ಪಾಲ್ಗೊಂಡಿದ್ದರು.

ಸ್ನೇಹ ಬಳಗ, ಅಭಿಮಾನಿ ಬಳಗದವರು ಡಿ.ವಿ.ಬಡಿಗೇರ ದಂಪತಿಯನ್ನು ಸನ್ಮಾನಿಸಿದರು. ಆರ್.ಡಿ.ನಾಡಗೇರ, ಜಗನ್ನಾಥ ಟಿಕಣದಾರ, ಪ್ರಾರ್ಥನೆ, ಸ್ವಾಗತಗೀತೆ ಹಾಡಿದರು. ನಜೀರ ಸಂಶಿ ಸ್ವಾಗತಿಸಿದರು. ಬಾಬಾಜಾನ ಯಲಿಗಾರ ವಂದಿಸಿದರು. ಮಂಜುಶ್ರೀ ಬಡಿಗೇರ ನಿರೂಪಿಸಿದರು.

ಡಾ. ಶಶಿಧರ ರೇಶ್ಮೆ, ಡಾ. ಜೆ.ಎಚ್. ಮೇರವಾಡೆ, ಡಾ. ಕೆ. ಯೋಗೇಶನ್, ಡಾ. ಬಸವರಾಜ ತಳವಾರ, ಡಾ. ಆನಂದ ಸಣಕಲ್ಲ, ಉಮೇಶ ಪುರದ, ಲಲಿತಾ ಸಣಕಲ್ಲ, ಅಂದಾನೆಪ್ಪ ವಿಭೂತಿ, ಸಿ.ಕೆ.ಎಚ್. ಕಡಣಿಶಾಸ್ತ್ರೀ, ಡಾ. ಜಿ.ಬಿ. ಪಾಟೀಲ, ವಿವೇಕಾನಂದಗೌಡ ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-23-1123171479

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.