ಗದಗ: ‘ಆಧುನಿಕ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದ್ದು, ಸಾಂಪ್ರದಾಯಿಕ ಸಿರಿಧಾನ್ಯಗಳನ್ನು ಬಳಸುವುದರಿಂದ ಆರೋಗ್ಯ ವೃದ್ಧಿಸುತ್ತದೆ’ ಎಂದು ನಿವೃತ್ತ ಶಿಕ್ಷಣಾಧಿಕಾರಿ ಐ.ಬಿ ಬೆನಕೊಪ್ಪ ಹೇಳಿದರು.

ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಮಂಗಳವಾರ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ವಿಶೇಷ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ವಚನ ಸಾಹಿತ್ಯ ಸಮಾನತೆ ಬೋಧಿಸಿದೆ. ಈ ಹಿನ್ನೆಲೆಯಲ್ಲಿ ವಚನಕಾರ್ತಿಯರ ವಿಚಾರಗಳನ್ನು ತಿಳಿಯುವ ಹಾಗೂ ಮಹಿಳೆಯಲ್ಲಿರುವ ವಿಶೇಷ ಸಾಮರ್ಥ್ಯಗಳ ಅನಾವರಣಕ್ಕೆ ಇದು ಬಹುಮುಖ್ಯ ವೇದಿಕೆಯಾಗಿದೆ. ಜೊತೆಗೆ ಆರೋಗ್ಯ ಭಾಗ್ಯ ಎಲ್ಲರಿಗೂ ಮುಖ್ಯವಾದದ್ದು ಸಿರಿಧಾನ್ಯಗಳು ಆರೋಗ್ಯವೃದ್ಧಿಗೆ ಸಹಾಯಕವಾಗಿವೆ. ನಮ್ಮ ಹಿರಿಯರು ಮಾಡುತ್ತಿದ್ದ ಹಲವಾರು ಗಾದೆಗಳು ಸದೃಢ ಆರೋಗ್ಯಕ್ಕೆ ಪೂರಕವಾಗಿದ್ದವು. ಇಂತಹ ಸ್ಪರ್ಧೆಗಳ ಮೂಲಕ ಅವೆಲ್ಲವನ್ನು ಯುವಪೀಳಿಗೆಗೆ ತಿಳಿಸುವ ಪ್ರಯತ್ನ ಶ್ಲಾಘನೀಯ’ ಎಂದರು.

ಶರಣೆ ರತ್ನಕ್ಕ ಪಾಟೀಲ ಮಾತನಾಡಿ, ‘ಈ ಬಾರಿಯ ಜಾತ್ರಾ ಮಹೋತ್ಸವದ ಸ್ಪರ್ಧೆಗಳು ತುಂಬಾ ವಿಶೇಷವಾಗಿವೆ. ಶರಣರ ತತ್ವ ಚಿಂತನೆಗಳನ್ನು ಇಂದಿನ ಸಮಾಜದಲ್ಲಿ ಮೂಡಿಸುವ ಪ್ರಯತ್ನ ಸಾರ್ಥಕವಾಗಿದೆ’ ಎಂದರು.

ಈ ಕಾರ್ಯಕ್ರಮದ ಜೊತೆಗೆ ಮಹಿಳೆಯರಿಗಾಗಿ ವಚನ ಗಾಯನ, ವಚನಕಾರ್ತಿಯರ ವೇಷಭೂಷಣ ಸ್ಪರ್ಧೆ, ಸಿರಿ ಧಾನ್ಯಗಳ ಅಡುಗೆ ಸ್ಪರ್ಧೆ, ಮರೆತು ಹೋದ ಖಾದ್ಯಗಳ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ಗೌರಕ್ಕ ಬಡಿಗಣ್ಣವರ, ಸುವರ್ಣ ನಿಡುಗುಂದಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ಜಾತ್ರಾ ಕಮಿಟಿಯ ಉಪಾಧ್ಯಕ್ಷ ಶಿವಯ್ಯ ನಾಲ್ವತ್ವಾಡಮಠ ಅಧ್ಯಕ್ಷತೆ ವಹಿಸಿದ್ದರು.

ಪ್ರಕಾಶ ಅಸುಂಡಿ, ಸುಭಾಷ್ ಚನ್ನಪ್ಪನವರ, ಎಂ.ಜಿ.ಹೂಗಾರ, ಎಸ್.ವಿ.ಪವಾಡಿಗೌಡ್ರು, ಉಮೇಶ್ ಗೌಡ ಎಸ್. ಪಾಟೀಲ, ಹಬೀಬ್, ವೀರಣ್ಣ ಗಡಗಿ, ಶಿವಲೀಲಾ ಅಕ್ಕಿ, ಪುಷ್ಪಾ ಭಂಡಾರಿ, ಸುಜಾತ ಕಾಡಪ್ಪನವರ, ಗಿರಿಜಾ ಹಸಬಿ, ಸುರೇಖಾ ಪಿಳ್ಳಿ, ಶ್ರೀದೇವಿ ಶೆಟ್ಟರ್, ಅಕ್ಕಮಹಾದೇವಿ ಚಟ್ಟಿ ಇದ್ದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-23-816009993

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.