ಗುಳೇದಗುಡ್ಡ: ಮನುಕುಲ ಎಲ್ಲ ಸಂದರ್ಭದಲ್ಲೂ ಸಂಕಷ್ಟಕ್ಕೆ ಸಿಲುಕಿದೆ. ಅದಕ್ಕೆ ಮನುಷ್ಯನೆ ಕಾರಣ. ಗ್ರಾಮಸ್ಥರಾದ ಹಿರಿಯರು, ಯುವಕರು ಮನುಕುಲದ ಮತ್ತು ಹಳ್ಳಿಗಳ ಉದ್ದಾರಕ್ಕೆ ಶ್ರಮಿಸಬೇಕು ಎಂದು ಗುಳೇದಗುಡ್ಡ ಪಟ್ಟಣದ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿ ಲಕ್ಕಸಕೊಪ್ಪ ಗ್ರಾಮದಲ್ಲಿ ಮಂಗಳವಾರ ಜರುಗಿದ ಶ್ರೀಗಳ ನಡಿಗೆ-ಹಳ್ಳಿಯ ಕಡೆಗೆ ಪಾದಯಾತ್ರೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮಾಡುತ್ತಾ ಯುವಕರು, ಹಿರಿಯರು ದುಶ್ಚಟಗಳಿಂದ ದೂರವಿರ ಬೇಕು. ಎಲ್ಲರು ಕಾಯಕ ತತ್ವದಡಿ ಕೃಷಿ ಮಾಡಬೇಕು. ಅದರಲ್ಲಿ ಸಾವಯವ ದೇಶಿ ಕೃಷಿಗೆ ಆದ್ಯತೆ ನೀಡಬೇಕು. ದನ, ಕರುಗಳನ್ನು ಸಾಕಬೇಕು. ಜಾತಿ, ಧರ್ಮ ಮೀರಿ ಎಲ್ಲರೂ ಒಂದಾಗಿ ಬದುಕಬೇಕು ಎಂದರು.

ಮುರನಾಳ ಮಳೆ ರಾಜೆಂದ್ರಮಠದ ನಿತ್ಯಾನಂದ ಸ್ವಾಮೀಜಿ ಮಾತನಾಡಿ, ಮಳೆ, ಬೆಳೆ ಚೆನ್ನಾಗಿ ಆಗಲು ಗಿಡಮರ ನೆಡಬೇಕು ಎಂದರು.

ಕಲಬುರಗಿಯ ರುದ್ರಮುನಿ ಶ್ರೀಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಗ್ರಾಮವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.ಗ್ರಾಮದ ಭಜನಾಮೇಳ,ಡೊಳ್ಳು ಮೇಳಗಳು,ಮಹಿಳೆಯರಿಂದ ಕಳಸದಾರತಿ ಪಾದಯಾತ್ರೆಗೆ ಮೆರಗು ತಂದಿದ್ದವು ಪಾದಯಾತ್ರೆ ನಂತರ ಪ್ರಸಾದ ವ್ಯವಸ್ಥೆ ಎರ್ಪಡಿಸಲಾಗಿತ್ತು. ಗ್ರಾಮದ ಹಿರಿಯರಾದ ವೈ.ಬಿ.ಅಣ್ಣಿಗೇರಿ, ಬಸು ಗೌಡರ, ಈರಣ್ಣ ಗೌಡರ, ಜಿ.ಎಸ್.ಹಿರೇಮಠ, ಮಲ್ಲಯ್ಯ ಹಿರೇಮಠ, ವ್ಹಿ.ಕೆ.ಹಿರೇಮಠ, ಪಿ.ಡಿ.ವಾಲೀಕಾರ, ಕುಮಾರ ಹಳಗೇರಿ, ಮಹಾದೇವಪ್ಪ ಗೌಡರ, ಮೌಲಾಸಾಬ ಜಲಗೇರಿ, ವಿಠ್ಠಲ ತಳವಾರ, ಮನಸೂರಸಾಬ ವಾಲೀಕಾರ, ದ್ಯಾಮಣ್ಣ ಆಡೀನ, ಮಲ್ಲಿಕಾರ್ಜುನ ಹಾಲೀಗೇರಿ, ಸಿದ್ದು ಹೊಸಮನಿ, ವ್ಹಿ.ಎಸ್.ಹಿರೇಮಠ, ಮಲ್ಲನಗೌಡ ಗೌಡರ, ಜಯಶ್ರೀ ಗಾಣಿಗೇರ, ಬಿ.ಎಮ್.ಗೌಡರ, ಉಸ್ಮಾನ್ ಮುದ್ದಾಪೂರ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-19-1303227709

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.