ಗುಳೇದಗುಡ್ಡ: ‘ಸಮಾಜ ಸುಧಾರಕರ, ಮಹಾತ್ಮರ ಚಿಂತನೆ, ಆದರ್ಶಗಳನ್ನುಬದುಕಿನಲ್ಲಿ ಅಳವಡಿಸಿಕೊಳ್ಳಿ’ ಎಂದು ಕಮತಗಿ ಹುಚ್ಚೇಶ್ವರ ಸಂಸ್ಥಾನ ಮಠದ ಹೊಳೆ ಹುಚ್ಚೇಶ್ವರ ಶ್ರೀಗಳು ಹೇಳಿದರು.

ಪಟ್ಟಣದ ಕಾಡಸಿದ್ಧೇಶ್ವರ ಮಠದಲ್ಲಿ ಮೌನಯೋಗಿಯ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಜರುಗಿದ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮನುಷ್ಯ ಸಂಘಜೀವಿ ಆಗಬೇಕು, ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ಭಗವಂತನ ಧ್ಯಾನ ಮಾಡಬೇಕು. ಆದರ್ಶರಾಗಬೇಕು’ ಎಂದು ತಿಳಿಸಿದರು.

ಅಭಿನವ ಕಾಡಸಿದ್ಧೇಶ್ವರ ಶ್ರೀಗಳು ಮಾತನಾಡಿ, ‘ಹಿರಿಯ ಪೂಜ್ಯರು ನಡೆದಾಡುವ ದೇವರಾಗಿದ್ದರು. ಧರ್ಮದಂತೆ ನಡೆದು ಭಕ್ತರಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಿದ್ದಾರೆ. ಅವರ ಆಲೋಚನೆಗಳನ್ನು ನಾವು ರೂಢಿಸಿಕೊಳ್ಳಬೇಕು’ ಎಂದರು.

ದುಮ್ಮವಾಡದ ಸರ್ಫಭೂಷಣ ದೇವರು ಮಾತನಾಡಿ, ‘ಸದಾಚಾರ ಬೆಳೆಸಿಕೊಳ್ಳಬೇಕು. ಎಲ್ಲರೂ ಒಂದೇ ಎನ್ನುವ ಮನೋಧರ್ಮ ಹೊಂದಬೇಕು’ ಎಂದು ತಿಳಿಸಿದರು.

ರುದ್ರಮುನಿ ದೇವರು ಮಾತನಾಡಿದರು. ಪ್ರಕಾಶ ಅಂಕದ, ಚಿನ್ನು ಬಾರಾಟಕ್ಕೆ, ಮಲ್ಲಿಕಾರ್ಜುನ ಹಿರೇಮಠ, ಸಂಗಪ್ಪ ಜವಳಿ, ಮುತ್ತಣ್ಣ ದೇವರಮನಿ, ಭೀಮಪ್ಪ ಹಳ್ಳಿಗೋಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-19-102307287

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.