ಗುರ್ಲಾಪುರ (ಮೂಡಲಗಿ): ಇಲ್ಲಿಯ ಮಾರುತಿ ದೇವರ ಓಕುಳಿ ಹಾಗೂ ಬಸವೇಶ್ವರ ದೇವರ ರಥೋತ್ಸವ ಜಾತ್ರೆಯು ಸಂಭ್ರಮದಿಂದ ಜರುಗಿತು.

ಮೇ 21ರಿಂದ ಪ್ರಾರಂಭಗೊಂಡ ಉತ್ಸವದಲ್ಲಿ ಮಾರುತಿ ದೇವರಿಗೆ ಅಭಿಷೇಕ, ವಿಶೇಷ ಪೂಜೆಗಳು, ಸಣ್ಣ ಓಕುಳಿ, ನಡು ಓಕುಳಿ ಜರುಗಿತು. ಗ್ರಾಮ ದೇವತೆ ಲಕ್ಷ್ಮೀದೇವಿ ಸೇರಿದಂತೆ ಗ್ರಾಮದ ಎಲ್ಲ ದೇವರಿಗೆ ನೈವೇದ್ಯ ಜರುಗಿತು. ಮೇ 23ರಂದು ಸಂಜೆ ದೊಡ್ಡ ಓಕುಳಿಯಲ್ಲಿ ಅನೇಕ ಜನರು ಮಿಂದು ಸಂಭ್ರಮಿಸಿದರು.

ರಥೋತ್ಸವದಂದು ಬೆಳಿಗ್ಗೆ ಬಸವೇಶ್ವರ ಕರ್ತೃ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ ಜರುಗಿತು. ಹೂಮಾಲೆಗಳು, ದೀಪಾಲಂಕರದೊಂದಿಗೆ ಅಲಂಕರಿಸಿದ ರಥೋತ್ಸವವು ಮಹಿಳೆಯರ ಆರತಿ, ಕರಡಿ ಮಜಲು ವಿವಿಧ ವಾದ್ಯಗಳೊಂದಿಗೆ ಬಸವೇಶ್ವರ ದೇವಸ್ಥಾನದಿಂದ ಗ್ರಾಮ ದೇವರ ಪಾಲಕಿಗಳೊಂದಿಗೆ ಪ್ರಾರಂಭಗೊಂಡು ಮಾರುತಿ ದೇವಸ್ಥಾನದ ವರೆಗೆ ಬರಮಾಡಿಕೊಂಡರು.

ಮೆರವಣಿಗೆಯಲ್ಲಿ ಕುದರೆ ಕುಣಿತ, ಧ್ವನಿವರ್ಧಕದಲ್ಲಿಯ ಹಾಡಿಗೆ ಯುವಕರ ಕುಣಿತ ಗಮನಸೆಳೆದವು. ಮಾರುತಿ ದೇವಸ್ಥಾನದ ಬಳಿಯಲ್ಲಿ ಮಹಾ ಮಂಗಳಾರತಿ ಸಲ್ಲಿಸಿ ಮರಳಿ ಬಸವೇಶ್ವರ ದೇವಸ್ಥಾನದವರೆಗೆ ಉತ್ಸವ ಜರುಗಿತು. ಸ್ಥಳೀಯ ಹವ್ಯಾಸಿ ಕಲಾವಿದರಿಂದ ಸಾಮಾಜಿಕ ನಾಟಕ ಪ್ರದರ್ಶನ ಜರುಗಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-21-1615657603

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.