ಹಗರಿಬೊಮ್ಮನಹಳ್ಳಿ: ‘ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಿವೆ’ ಎಂದು ತಾಲ್ಲೂಕು ರಡ್ಡಿ ಸಮಾಜದ ನಿಕಟಪೂರ್ವ ಅಧ್ಯಕ್ಷ ಆರ್.ಕೇಶವರೆಡ್ಡಿ ಹೇಳಿದರು.

ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಅವರ ಜಯಂತ್ಯುತ್ಸವ ಮಾತನಾಡಿದರು.

ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಂಡ ಹೇಮರಡ್ಡಿ ಮಲ್ಲಮ್ಮ ಅವರು ಸಮಾಜವನ್ನು ತಿದ್ದುವ ಕೆಲಸ ಮಾಡಿದರು’ ಎಂದರು.

ರೆಡ್ಡಿ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಬಸವರೆಡ್ಡಿ, ಮುಖಂಡರಾದ ಬನ್ನಿಗೋಳ ವೆಂಕಣ್ಣ, ಜೆಸ್ಕಾಂ ಎಇಇ ಆರ್.ಹೇಮರೆಡ್ಡಿ, ಡಾ.ಬಸವರೆಡ್ಡಿ, ಎಂ.ಯಂಕರೆಡ್ಡಿ, ಆನಂದರೆಡ್ಡಿ, ತಿಪ್ಪಾರೆಡ್ಡಿ ಮುಕ್ಕಣ್ಣ, ಅಡಿವೆಪ್ಪ, ಉಪ ತಹಶೀಲ್ದಾರ್ ಶಿವಕುಮಾರಗೌಡ ಇದ್ದರು.

ಕುರುಗೋಡಿನಲ್ಲಿ ಮಲ್ಲಮ್ಮ ಜಯಂತಿ: ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಭಾನುವಾರ ಆಚರಿಸಲಾಯಿತು.

ಶಿರಸ್ತೇದಾರ ವಿಜಯಕುಮಾರ ಹೇಮರಡ್ಡಿ ಮಲ್ಲಮ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಹೇಮವೇಮನ ರಡ್ಡಿ ಸಂಘದ ಅಧ್ಯಕ್ಷ ಜೆ.ರವಿರಡ್ಡಿ ಮಾತನಾಡಿದರು. ಪಿ.ಟಿ. ಭೀಮರಡ್ಡಿ, ಹನುಮಂತ ರೆಡ್ಡಿ, ಮೇಘನಾಥ್ ರೆಡ್ಡಿ, ಗಿರಿರೆಡ್ಡಿ, ಕಚೇರಿ ಸಿಬ್ಬಂದಿ ನಾಗರಾಜ, ಯಮನೂರಪ್ಪ ಮತ್ತು ಯು.ಲತಾ ಇದ್ದರು.

ಹೇಮರಡ್ಡಿ ಮಲ್ಲಮ್ಮ ಜಯಂತಿ, ಅದ್ದೂರಿ ಮೆರವಣಿಗೆ: ತಾಲ್ಲೂಕಿನ ಗದ್ದಿಕೆರೆ ಗ್ರಾಮದಲ್ಲಿ ರಡ್ಡಿ ಸಮಾಜದಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಅಭಿನವ ಚರಂತೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಕಳಸದೊಂದಿಗೆ ಪಾಲ್ಗೊಂಡಿದ್ದರು. ಸಮ್ಮಾಳ, ನಂದಿಕೋಲು ಮೆರವಣಿಗೆಗೆ ಮೆರುಗು ತಂದವು. ಮಹಿಳೆಯರಿಗೆ ಉಡಿ ತುಂಬಲಾಯಿತು. ನಂತರ ಪ್ರಸಾದ ವಿತರಿಸಲಾಯಿತು.

‘ಹೇಮರಡ್ಡಿ ಮಲ್ಲಮ್ಮ ಸ್ತ್ರೀಕುಲಕ್ಕೆ ಆದರ್ಶ’

ಹೂವಿನಹಡಗಲಿ: ‘ಕೇಡು ಬಗೆದವರಿಗೂ ಒಳಿತನ್ನೇ ಬಯಸಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸ್ತ್ರೀಕುಲಕ್ಕೆ ಆದರ್ಶವಾಗಿದ್ದಾರೆ’ ಎಂದು ರೆಡ್ಡಿ ಸಮಾಜ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್. ದ್ವಾರಕೀಶರೆಡ್ಡಿ ಹೇಳಿದರು.

ತಾಲ್ಲೂಕಿನ ಹಿರೇಮಲ್ಲನಕೆರೆ ಗ್ರಾಮದಲ್ಲಿ ಭಾನುವಾರ ರಡ್ಡಿ ಸಮಾಜ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರೇಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ದಾನ ನೀಡಿದ ಮಕಾಸಿ ದೇವಪ್ಪ ಅವರನ್ನು ಸನ್ಮಾನಿಸಲಾಯಿತು. ರಡ್ಡಿ ಸಮಾಜದ ಉಪಾಧ್ಯಕ್ಷ ರಾಜೂರ ಮಲ್ಲಪ್ಪ, ಖಜಾಂಚಿ ಡಂಬಳ ವಿಶ್ವನಾಥ ರೆಡ್ಡಿ, ಮುಖಂಡರಾದ ಮಲ್ಲಪ್ಪ ಡಂಬಳ, ಪಕ್ಕೀರರೆಡ್ಡಿ ಡಂಬಳ, ರಾಜೂರು ಶಿವಣ್ಣ, ಬಂಡಿ ಮಲ್ಲಪ್ಪ, ಮಕಾಶಿ ನಿಂಗರೆಡ್ಡಿ, ಡಿ.ಹನುಮಂತಪ್ಪ, ಟಿ.ಬಸವರೆಡ್ಡಿ, ಎಸ್.ಬಸರೆಡ್ಡಿ ಇದ್ದರು. ಈ ವೇಳೆ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-25-675125936

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.