ಹಗರಿಬೊಮ್ಮನಹಳ್ಳಿ: ‘ಮನುಷ್ಯನಲ್ಲಿ ಆಸೆಗಳು ಇತಿಮಿತಿಯಲ್ಲಿ ಇರಬೇಕೇ ಹೊರತು ದುರಾಸೆ ಇರಬಾರದು’ ಎಂದು ಬಾಳೆಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಗಿರಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದ ವಿಘ್ನೇಶ್ವರ, ಈಶ್ವರ, ಬಸವೇಶ್ವರ, ಆಂಜನೇಯಸ್ವಾಮಿ, ನಾಗದೇವತೆಯ ನೂತನ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ದೇವಾಸ್ಥಾನದ ಜೋಡು ಗೋಪುರಗಳ ಕಳಸಾರೋಹಣ ಕಾರ್ಯಕ್ರಮ ಅಂಗವಾಗಿ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಮನುಷ್ಯ ಭೌತಿಕವಾಗಿ ಅಪಾರವಾದ ಸಂಪತ್ತು ಹಾಗೂ ಅಧಿಕಾರದ ಅಂತಸ್ತನ್ನು ಹೊಂದಿದ್ದರೂ ನೆಮ್ಮದಿ ಕಾಣದಾಗಿ ದ್ದಾನೆ. ದೇವರು ಇದ್ದಾನೆ ಎಂಬ ನಂಬಿಕೆ ಕಳೆದುಕೊಳ್ಳಬಾರದು. ದೇವನೊಬ್ಬ ನಾಮ ಹಲವು. ಯಾವ ಹೆಸರಿನಿಂದ ಕರೆದರೂ ಪರಮಾತ್ಮ ಒಬ್ಬನೇ ಆಗಿದ್ದಾನೆ ಎನ್ನುವ ಭಾವನೆಯು ಎಲ್ಲರಲ್ಲಿಯೂ ಮೂಡಬೇಕು’ ಎಂದರು.

‘ದೇವರಲ್ಲಿ ನಂಬಿಕೆ, ಅಪನಂಬಿಕೆ, ಅವಿಶ್ವಾಸ ಇರುವಂಥವರನ್ನೂ ಕಾಣುತ್ತೇವೆ. ಭಗವಂತ ಕೊಟ್ಟಂತಹ ಭೂಮಿ, ನೀರು, ಅನ್ನ, ಗಾಳಿಯ ಕೊಡುಗೆ ಯಾರೂ ಕೊಡಲು ಸಾಧ್ಯವಿಲ್ಲ. ದೇವರು, ಧರ್ಮ, ಜಾತಿ, ಭಾಷೆ ಹಾಗೂ ಪ್ರಾಂತೀಯ ಹೆಸರಿನಲ್ಲಿ ದುರ್ಘಟನೆಗಳು ನಡೆಯುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು.

ಮುಖಂಡ ಹೊಳಗುಂದಿ ಹನುಮಜ್ಜ, ‘ದೇವಸ್ಥಾನದ ಅಭಿವೃದ್ಧಿಗೆ ಹೂವಿನಹಡಗಲಿ ಕ್ಷೇತ್ರದ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ₹10 ಲಕ್ಷ, ಶಾಸಕ ಕೃಷ್ಣಾನಾಯ್ಕ ₹5 ಲಕ್ಷ ದೇಣಿಗೆ ಸೇರಿದಂತೆ ಗ್ರಾಮದ ಭಕ್ತರು ನೀಡಿದ ಭಕ್ತಿಯ ಕಾಣಿಕೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಮುಖಂಡರಾದ ಮುದುಕಪ್ಪ ಮೇಟಿ, ಉಮೇಶಪ್ಪ, ಸೆರೆಗಾರ ಕನಕಪ್ಪ, ಸಂಜೀವಪ್ಪ, ಬಸವರಾಜ್, ವೈ.ಕೊಟ್ರಗೌಡ, ಕೆ.ಕೊಟ್ರಬಸಪ್ಪ, ಹಕ್ಕಂಡಿ ಶಿವಲಿಂಗಪ್ಪ, ಹೊಳಗುಂದಿ ಚೌಡಪ್ಪ, ತಳವಾರ ನಾಗಪ್ಪ, ಡಾ.ಹಿಟ್ನಾಳ್ ರಮೇಶ್, ಎಂ.ಕಲ್ಲಪ್ಪ, ಪ್ರಕಾಶ, ದೊಡ್ಡಬಸಪ್ಪ, ಪೂಜಾರ ರಾಜಪ್ಪ, ಶಂಭಣ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-25-1116745306

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.