ಹಳಿಯಾಳ: ‘ನೇರ ನಡೆ ನುಡಿಯ ಮೂಲಕ ವಿಶ್ವಾಸಾರ್ಹತೆ ಗಳಿಸುವುದೇ ಜೀವನದ ನಿಜವಾದ ಸಂಸ್ಕಾರ. ನಂಬಿಕೆಯೇ ಜೀವನದ ಉಸಿರು, ಅದನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಕೊಪ್ಪಳದ ಗವಿಸಿದ್ಧೇಶ್ವರ ಸಂಸ್ಥಾನಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿನ ಶೆಟ್ಟಿಗಲ್ಲಿ ವಿರಕ್ತಮಠದಲ್ಲಿ ಶನಿವಾರ ನಡೆದ ಡಾ.ಬಿ.ಬಿ.ಮೂಡಬಾಗಿಲ ಮತ್ತು ಭಕ್ತರ ಸಹಕಾರದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಶ್ರೀಗುರು ವಿರೂಪಾಕ್ಷೇಶ್ವರ ಸಭಾಭವನ, ಹಾನಗಲ್ಲ ಕುಮಾರೇಶ್ವರ ದಾಸೋಹ ನಿಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಮಾಜದಲ್ಲಿ ಗೌರವಯುತವಾಗಿ ಬದುಕಲು ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಮುಖ್ಯ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವು ಅವನ ನಡತೆ ಮತ್ತು ಸತ್ಯ ಸಂದತೆಯಮೇಲೆ ನಿರ್ಧಾರವಾಗುತ್ತದೆ. ನಮ್ಮ ಹುಟ್ಟಿನೊಂದಿಗೆ ಸಾವು ಸಹ ಪ್ರಾರಂಭ ಆಗುತ್ತದೆ. ನಿಸರ್ಗ ಹುಟ್ಟು ಮತ್ತು ಸಾವು ಬೇರ್ಪಡಿಸಲು ಆಗುವುದಿಲ್ಲ. ಮನುಷ್ಯನಿಗೆ ಸಾವು ಎಲ್ಲವೂ ಕಸಿದು ಕೊಂಡು ಹೋಗುತ್ತದೆ. ನಾವು ಜೀವನದುದ್ದಕ್ಕೂ ಮಾಡಿದ ಒಳ್ಳೆಯ ಕಾರ್ಯ ಮಾತ್ರ ಉಳಿಯುತ್ತದೆ. ಬದುಕಿನಲ್ಲಿ ಸಮತೋಲನ ಕಾಯ್ದುಕೊಂಡು ವಸ್ತುಗಳ ಮೇಲೆ ಅವಲಂಬಿತರಾಗದೇ ಬದುಕುವುದು ನಿಜವಾದ ಸುಖಕ್ಕೆ ದಾರಿಯಾಗಿದೆ’ ಎಂದರು.

ಸಮಾಜ ಸೇವಕ ಡಾ.ಬಿ.ಬಿ. ಮೂಡಬಾಗಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳಿಯಾಳದ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿದರು. ಸಭಾಭವನ ನಿರ್ಮಾಣಕ್ಕೆ ದಾನ ನೀಡಿದ ಡಾ.ಬಿ.ಬಿ.ಮೂಡಬಾಗಿಲ ಮತ್ತಿತರ ದಾನಿಗಳನ್ನು ಸನ್ಮಾನಿಸಲಾಯಿತು.

ಸೋಮಶೇಖರ ಮಠ ಮುನವಳ್ಳಿಯ ಮುರುಘೇಂದ್ರ ಸ್ವಾಮೀಜಿ, ಪ್ರಭು ಶಂಕರೇಶ್ವರ ಮಠ ಅಮಿನಗಡದ ಶಂಕರರಾಜೇಂದ್ರ ಸ್ವಾಮೀಜಿ, ಶಿವಲಿಂಗಯ್ಯಾ ಅಲ್ಲಯ್ಯನವ ರಮಠ, ಉದ್ಯಮಿ ಬಸವರಾಜ ಓಶಿಮಠ, ಶಿಕ್ಷಕ ಗುರು ಎಸ್. ಮಠಪತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-20-772808316

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.