ಹಾನಗಲ್: ‘ಸಮ ಸಮಾಜಕ್ಕಾಗಿ ದೇಶದ ನಾಲ್ಕು ಭಾಗಗಳಲ್ಲಿ ಸಂಚರಿಸಿದ ಶಂಕರಾಚಾರ್ಯರು ವೇದಗಳ ನಿಜಾರ್ಥ ಸಾರಿದರು. ಭೇದಭಾವ ಇಲ್ಲದ ಆಧ್ಯಾತ್ಮಿಕ ನಾಯಕರಾಗಿ ಹೊಮ್ಮಿದರು’ ಎಂದು ತಹಶೀಲ್ದಾರ್ ರೇಣುಕಾ ಎಸ್ ಹೇಳಿದರು.

ಇಲ್ಲಿನ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವೈಚಾರಿಕತೆ, ಧರ್ಮದ ಹೆಸರಿನಲ್ಲಿ ವೇದಗಳ ಸರಳೀಕರಣ ಮೂಲಕ ಆಚಾರ್ಯರು ಜನಮಾನಸದಲ್ಲಿ ಅಜರಾಮರರಾಗಿದ್ದಾರೆ’ ಎಂದರು.

ವೇ.ಮೂ.ಗಂಗಾಧರಶಾಸ್ತ್ರೀ ಕಾಶೀಕರ ಮಾತನಾಡಿ, ಧರ್ಮ ಜಾಗೃತಿಗಾಗಿ ಶಂಕರಾಚಾರ್ಯರು ಸಂಚಾರ ಕೈಗೊಂಡ ಪರಿಣಾಮ ಸನಾತನ ಧರ್ಮ ಬೆಳೆದು ಬಂದಿತು ಎಂದರು.

ಶಂಕರ ಸೇವಾ ಸಮಿತಿ ಅಧ್ಯಕ್ಷ ರವಿ ದೇಶಪಾಂಡೆ, ಬ್ರಾಹ್ಮಣ ಮಹಾಸಭಾ ತಾಲ್ಲೂಕು ಘಟಕದ ಕಾರ್ಯದರ್ಶಿ ರವಿ ಪೋತದಾರ, ಗಣ್ಯರಾದ ಘನಶಾಮ್ ದೇಶಪಾಂಡೆ, ಮನೋಜ್ ಸರಾಫ, ಪಾರ್ವತಿಬಾಯಿ ಕಾಶೀಕರ, ವಿದ್ಯಾ ಕಾಶೀಕರ, ಪಾಂಡುರಂಗ ಪಾರಗಾವಕರ, ಎಚ್.ಬಿ.ದೇಸಾಯಿ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-22-360582347

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.