ಹನುಮಸಾಗರ: ಬಕ್ರೀದ್ ಧರ್ಮಗಳ ನಡುವೆ ಸೌಹಾರ್ದ ಮತ್ತು ಗೌರವ ಬೆಳೆಸುವ ಹಬ್ಬವಾಗಿದೆ. ಪರಸ್ಪರ ಮನೆಗಳಿಗೆ ಭೇಟಿ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸಮಾಜದ ಬಾಂಧವ್ಯವನ್ನು ಗಟ್ಟಿ ಗೊಳಿಸುತ್ತದೆ. ಇಂದು ದ್ವೇಷ, ವಿಭಜನೆ ಮತ್ತು ಅಸಹಿಷ್ಣುತೆಯ ನಡುವೆ ತ್ಯಾಗ, ಸಹೋದರತ್ವ ಮತ್ತು ಮಾನವ ಸಮಾನತೆಯ ಸಂದೇಶವನ್ನು ಸಾರುತ್ತಿದೆ. ಇಂಥ ಹಬ್ಬವನ್ನು ಆಚರಿಸಲು ಜಿಲ್ಲೆಯಾದ್ಯಂತ ಸಿದ್ಧತೆ ಮಾಡಿಕೊಳ್ಳಲಾಗಿದೆ.

ತ್ಯಾಗ, ದೇವಭಕ್ತಿ, ಸಹೋದರತ್ವ, ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರುವ ಈ ಹಬ್ಬ ಕೇವಲ ಧಾರ್ಮಿಕ ಆಚರಣೆಯಲ್ಲ, ವಿಶ್ವ ಮಾನವತೆಗೆ ದಾರಿದೀಪವಾಗಿರುವ ಆತ್ಮೀಯ ಚಳವಳಿಯಾಗಿದೆ.

ಬಕ್ರೀದ್ ಹಬ್ಬದ ಮೂಲದಲ್ಲಿ ಪ್ರವಾದಿ ಇಬ್ರಾಹಿಂ ಮತ್ತು ಪ್ರವಾದಿ ಇಸ್ಮಾಯಿಲ್ ತ್ಯಾಗದ ಸಂದೇಶ ಅಡಕವಾಗಿದೆ. ಕುರ್ಬಾನಿ ಎಂದರೆ ಕೇವಲ ಪ್ರಾಣಿಬಲಿ ಅಲ್ಲ, ಅದು ಅಹಂಕಾರ, ಸ್ವಾರ್ಥ, ದುರಾಸೆ ಮತ್ತು ಕೆಟ್ಟ ಗುಣಗಳನ್ನು ತ್ಯಜಿಸುವ ಆತ್ಮೀಯ ಪಾಠವಾಗಿದೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮನೆಮನೆಗಳಲ್ಲಿ ಸಂಭ್ರಮ ಮನೆಮಾಡುತ್ತದೆ.

ಕುಟುಂಬಸ್ಥರು, ಬಂಧುಗಳು ಒಂದಾಗಿ ಸೇರಿ ಹಬ್ಬ ಆಚರಿಸುತ್ತಾರೆ. ತರಹೇವಾರಿ ಮಾಂಸದ ಅಡುಗೆ, ನಾನ್-ಕುರ್ಮಾ, ಖೀಮಾ ಪದಾರ್ಥಗಳು, ಶೀರ್ ಖುರ್ಮಾ ಮತ್ತು ಪಾಯಸದ ಸವಿರುಚಿಗಳು ಹಬ್ಬದ ವಿಶೇಷ ತಿನಿಸುಗಳಾಗಿವೆ. ಹಾಲು, ಖರ್ಜೂರ, ಗೋಡಂಬಿ, ಬಾದಾಮಿ ಮತ್ತು ತುಪ್ಪದ ಸವಿಯಿಂದ ತಯಾರಾಗುವ ಶೀರ್ ಖುರ್ಮಾ ಕುಟುಂಬದ ಸಿಹಿ ಬಾಂಧವ್ಯದ ಪ್ರತೀಕವಾಗಿದೆ.

ಹಬ್ಬದ ದಿನದಂದು ಮುಸ್ಲಿಮರು ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಶುಭ್ರವಾದ ಹೊಸ ಬಟ್ಟೆಗಳನ್ನು ತೊಟ್ಟು ಈದ್ಗಾ ಮೈದಾನ ಅಥವಾ ಮಸೀದಿಗಳಿಗೆ ತೆರಳುತ್ತಾರೆ. ಅಲ್ಲಿ ಸಾಮೂಹಿಕವಾಗಿ ಈದ್ ನಮಾಜ್ ನೆರವೇರಿಸುತ್ತಾರೆ. ನಮಾಜ್ ಮುಗಿದ ನಂತರ, ಪರಸ್ಪರ ಆಲಂಗಿಸಿಕೊಂಡು 'ಈದ್ ಮುಬಾರಕ್' ಎಂದು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.

ನಮಾಜ್ ನಂತರ ಮನೆಗೆ ಮರಳಿ ಅಲ್ಲಾಹನ ಹೆಸರಿನಲ್ಲಿ ಕುರ್ಬಾನಿ (ಪ್ರಾಣಿ ಬಲಿ) ನೀಡಲಾಗುತ್ತದೆ. ಬಲಿಕೊಟ್ಟ ಪ್ರಾಣಿಯ ಮಾಂಸವನ್ನು ಮೂರು ಸಮಾನ ಭಾಗಗಳಾಗಿ ವಿಂಗಡಿಸಿ ಒಂದು ಭಾಗವನ್ನು ತಮ್ಮ ಕುಟುಂಬದ ಬಳಕೆಗೆ, ಎರಡನೇ ಭಾಗವನ್ನು ಬಂಧು-ಮಿತ್ರರಿಗೆ ಮತ್ತು ಮೂರನೇ ಭಾಗವನ್ನು ಬಡವರು, ನಿರ್ಗತಿಕರು ಹಾಗೂ ಅಸಹಾಯಕರಿಗೆ ಹಂಚಲಾಗುತ್ತದೆ. ಈ ಪದ್ಧತಿಯು ಸಮಾಜದಲ್ಲಿ ಯಾರೂ ಹಸಿವಿನಿಂದ ಇರಬಾರದು ಮತ್ತು ಎಲ್ಲರೂ ಹಬ್ಬದ ಸಂತೋಷವನ್ನು ಸಮಾನವಾಗಿ ಅನುಭವಿಸಬೇಕು ಎಂಬ ಉದಾತ್ತ ಸಂದೇಶ ಸಾರುತ್ತದೆ.

ಇಂಥ ಹಬ್ಬವನ್ನು ಆಚರಿಸಲು ಜಿಲ್ಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಸೀದಿಗಳಿಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದ್ದು, ಹಬ್ಬವನ್ನು ಸೌಹಾರ್ದದಿಂದ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-35-304572273

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.