ಹರಿಹರ: ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಸಂಪೂರ್ಣ ಲೆಕ್ಕವನ್ನು ಸೋಮವಾರ ಮಂಡಿಸಲು ಟ್ರಸ್ಟ್ ಸಿದ್ಧತೆ ಮಾಡಿಕೊಂಡಿದೆ. ಲೆಕ್ಕ ಕೊಡುವಂತೆ ಕೇಳಿದವರು ಸಭೆಯಲ್ಲಿ ಶಾಂತಿಯುತವಾಗಿ ವರ್ತಿಸಬೇಕು ಎಂದು ಟ್ರಸ್ಟ್ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ತಿಳಿಸಿದರು.

‘ಶ್ರೀಗಳ ಆಚಾರ-ವಿಚಾರದ ಬಗ್ಗೆ ಪ್ರಶ್ನೆ ಎತ್ತಿದ್ದರಿಂದ ‘ಲೆಕ್ಕ ಕೊಡಿ ಎಂಬುದನ್ನು ಮುನ್ನೆಲೆಗೆ ತರಲಾಗಿದೆ. ಪಾರದರ್ಶಕತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಪೀಠದ ಲೆಕ್ಕಪತ್ರ ಮಂಡಿಸಲಾಗುವುದು. ಪ್ರತಿಯೊಬ್ಬರು ಲೆಕ್ಕಪತ್ರ ಪರಿಶೀಲನೆಗೆ ಅವಕಾಶವಿದೆ’ ಎಂದು ಗುರುಪೀಠದ ಆವರಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ಪದಚ್ಯುತ ವಚನಾನಂದ ಸ್ವಾಮೀಜಿ ಸೇರಿದಂತೆ ಮಠದ ಎಲ್ಲ ಭಕ್ತರಿಗೂ ಆಹ್ವಾನ ನೀಡಲಾಗಿದೆ. ‘ಲೆಕ್ಕ ಕೊಡಿ’ ಎಂಬ ಚಳವಳಿ ನಡೆಸುವವರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಅವರು ಸಭೆಗೆ ಗೈರು ಹಾಜರಾದರೂ ಟ್ರಸ್ಟ್ ತನ್ನ ಲೆಕ್ಕಪತ್ರ ಮಂಡಿಸಲಿದೆ’ ಎಂದು ಸ್ಪಷ್ಟಪಡಿಸಿದರು.

‘ಟ್ರಸ್ಟ್ನಲ್ಲಿ 11 ಆಜೀವ ಸದಸ್ಯರಿದ್ದಾರೆ. ಉಳಿದವರು ವಿಶೇಷ ಆಹ್ವಾನಿತರಾಗಿದ್ದು, ಇವರನ್ನು 5 ವರ್ಷಕ್ಕೊಮ್ಮ ಬದಲಾವಣೆ ಮಾಡಬಹುದಾಗಿದೆ. ರಾಜ್ಯದ 85 ಲಕ್ಷ ಸಮಾಜ ಬಾಂಧವರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವ ಟ್ರಸ್ಟ್, ಹರಿಹರ ಪೀಠವನ್ನು ನಿರ್ವಹಿಸುತ್ತಿದೆ’ ಎಂದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರ ಬಸರಹಳ್ಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ ಪಟ್ಟಣಶೆಟ್ಟಿ, ಟ್ರಸ್ಟ್ನ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಸಮಾಜ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ವಸಂತ ಹುಲ್ಲತ್ತಿ, ಟ್ರಸ್ಟಿ ಚಂದ್ರಶೇಖರ ಪೂಜಾರ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-43-1016237553

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.