ಹರಿಹರ: ‘ಶೂದ್ರ ವರ್ಗದಲ್ಲಿ ಹುಟ್ಟಿದ ಕನಕದಾಸರು, ಜ್ಞಾನಾರ್ಜನೆ ಮೂಲಕ ಸಮ ಸಮಾಜದ ಸಿದ್ಧಾಂತವನ್ನು ಪಸರಿಸಿದರು’ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ ಹೇಳಿದರು.

ಇಲ್ಲಿನ ಕನಕ ಗುರುಪೀಠದ ಶಾಖಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ ‘ತಲ್ಲಣಿಸದಿರು ಮನವೇ’ ಮಾಸಿಕ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಶೂದ್ರ ವರ್ಗದಲ್ಲಿ ಹುಟ್ಟಿದ್ದರಿಂದ ಕನಕದಾಸರಿಗೆ ಅಸ್ಪೃಶ್ಯತೆ, ಮೇಲು–ಕೀಳು, ಲಿಂಗ ಬೇಧದಂತಹ ಅನಿಷ್ಟ ಆಚರಣೆಗಳು ಅರಿವಿಗೆ ಬಂದು ಅವುಗಳ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದರು. 12ನೇ ಶತಮಾನದಲ್ಲಿ ಬಸವಣ್ಣ, 20ನೇ ಶತಮಾನದಲ್ಲಿ ಬಿ.ಆರ್.ಅಂಬೇಡ್ಕರ್ ಸೇರಿದಂತೆ ಈ ನಾಡಿನ ದಾಸ ಪರಂಪರೆಯವರು, ಹಲವು ದಾರ್ಶನಿಕರು ಸಮ ಸಮಾಜದ ತತ್ವಗಳನ್ನೇ ತಿಳಿಸಿದ್ದಾರೆ. ಆದರೆ ದೇಶದಲ್ಲಿಂದು ಜಾತ್ಯತೀತ ತತ್ವಗಳು ಭಾಷಣಕ್ಕೆ, ವೇದಿಕೆಗೆ ಸೀಮಿತವಾಗಿರುವುದು ವಿಪರ್ಯಾಸ’ ಎಂದರು.

‘ಮಠದಲ್ಲಿ ಪ್ರತಿ ತಿಂಗಳ 4ನೇ ಶನಿವಾರ ಸತ್ಸಂಗ ಆಯೋಜಿಸಲಾಗುತ್ತಿದೆ. ದೇಶಕ್ಕೆ ಅಗತ್ಯವಾಗಿರುವ ಜಾತ್ಯತೀತ ಮನೋಭಾವ, ಪರಸ್ಪರ ಸಹಕಾರ ಅಂಶಗಳನ್ನು ಪಸರಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಭಕ್ತರು ಭಾಗವಹಿಸಬೇಕು’ ಎಂದು ಹೇಳಿದರು.

‘ದಾರ್ಶನಿಕರ ಸಾಧನೆಗಳನ್ನು ಮೆಲುಕು ಹಾಕುವುದರಿಂದ ತಲ್ಲಣಗೊಂಡ ಮನಸ್ಸು ಶಾಂತವಾಗುತ್ತದೆ. ಪ್ರಶಾಂತ ಮನಃಸ್ಥಿತಿ ಹೊಂದಿದ ವ್ಯಕ್ತಿ ಉನ್ನತ ಗುರಿಯೊಂದಿಗೆ ಸಮಾಜ ಮೆಚ್ಚುವ ಸಾಧನೆ ಮಾಡಲು ಸಾಧ್ಯ’ ಎಂದು ಸಿಪಿಐ ಸುರೇಶ್ ಸಗರಿ ಅಭಿಪ್ರಾಯಪಟ್ಟರು.

‘ಬೀರದೇವರಿಗೆ ಮೂಲವಾಗಿ ಬಂದಿರುವುದು ಭಂಡಾರ. ಆದರೆ 12ನೇ ಶತಮಾನದ ನಂತರ ರೇವಣಸಿದ್ದರು ವಿಭೂತಿಯನ್ನು ಆಚರಣೆಗೆ ತಂದರು’ ಎಂದು ವಿಭೂತಿ ಮತ್ತು ಭಂಡಾರ ಆಚರಣೆ ಬಂದ ಬಗೆಯನ್ನು ಕಮಲಾಪುರದ ಸಾಹಿತಿ ಷಣ್ಮುಖಪ್ಪ ವಿವರಿಸಿದರು.

ಪ್ರವಚನಕಾರ ರೇವಣಪ್ಪ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಉಮಾಪತಿ, ಕಾರ್ಯದರ್ಶಿ ಶರಣ್ ಕುಮಾರ್ ಹೆಗಡೆ, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎನ್.ವೀರಣ್ಣ ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಕನಕ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕುಬೇಂದ್ರಪ್ಪ ಮೆಕ್ಕೆಪ್ಪನವರ್, ಕಾಂಗ್ರೆಸ್ ಮುಖಂಡ ಸಿ.ಎನ್.ಹುಲಿಗೇಶ್, ರಾಮಣ್ಣ, ಸೋಮಣ್ಣ, ಬಿ.ಬಿ.ಮಲ್ಲೇಶ್, ಡಿ.ಕೆ. ಕರಿಬಸಪ್ಪ, ದಂಡಿ ತಿಪ್ಪೇಸ್ವಾಮಿ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-43-606475138

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.