ಹಾಸನ: ವೀರಶೈವ ಲಿಂಗಾಯತ ಸಮುದಾಯದಲ್ಲಿ ಲಿಂಗಧಾರಣೆ, ವಿಭೂತಿ ಧಾರಣೆ, ರುದ್ರಾಕ್ಷಿ ಧಾರಣೆ ಹಾಗೂ ಇಷ್ಟಲಿಂಗ ಪೂಜೆಗಳ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುವುದರ ಜೊತೆಗೆ ಸಮಾಜವನ್ನು ಒಗ್ಗಟ್ಟಿನಿಂದ ಕೊಂಡೊಯ್ಯುವುದು ಅಗತ್ಯ ಎಂದು ನುಗ್ಗೇಹಳ್ಳಿ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ತಣ್ಣೀರುಹಳ್ಳ ಮಠದಲ್ಲಿ ಶನಿವಾರ ನಡೆದ ಉಚಿತ ಲಿಂಗಧಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವಗುರು ಬಸವೇಶ್ವರರ 896ನೇ ಜಯಂತ್ಯುತ್ಸವ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತ್ಯುತ್ಸವ, ಲಿಂಗೈಕ್ಯ ಶಿವಲಿಂಗ ಸ್ವಾಮೀಜಿಯವರ 92ನೇ ಜಯಂತ್ಯುತ್ಸವ ಹಾಗೂ ನಿರಂಜನ ನಿರಾಭಾರಿ ಜಂಗಮ ಪಟ್ಟಾಧಿಕಾರದ 56ನೇ ಮಾಸದ ಅಂಗವಾಗಿ ಏ. 26ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಈ ಹಿನ್ನೆಲೆಯಲ್ಲಿ ತಣ್ಣೀರುಹಳ್ಳ ಮಠ ಮತ್ತು ವಿಶ್ವ ವೀರಶೈವ ಲಿಂಗಾಯತ ಮಹಾ ವೇದಿಕೆ ವತಿಯಿಂದ ಶನಿವಾರ ದೀಕ್ಷಾ ವಟುಗಳಿಗೆ ಉಚಿತ ಲಿಂಗಧಾರಣೆ ಹಾಗೂ ಇಷ್ಟಲಿಂಗ ಪೂಜೆ ನೆರವೇರಿಸಲಾಯಿತು. ಸುಮಾರು 68 ವಟುಗಳಿಗೆ ಕರಡಿಗೆ, ಲಿಂಗ, ಶಿವದಾರ, ಪಂಚೆ ಮತ್ತು ಟವಲ್ ವಿತರಣೆ ಮಾಡಲಾಯಿತು ಎಂದರು.

ವಿಶ್ವ ವೀರಶೈವ ಲಿಂಗಾಯತ ಮಹಾ ವೇದಿಕೆಯ ವತಿಯಿಂದ ಇದುವರೆಗೆ ಸುಮಾರು 27,600ಕ್ಕೂ ಹೆಚ್ಚು ದೀಕ್ಷಾ ವಟುಗಳಿಗೆ ಲಿಂಗಧಾರಣೆ ಹಾಗೂ ಧಾರ್ಮಿಕ ಸೇವೆಗಳನ್ನು ನೀಡಲಾಗಿದೆ. ರಾಜ್ಯದ ಜೊತೆಗೆ ತಮಿಳುನಾಡು, ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲೂ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಆಶೀರ್ವಚನ ನೀಡಿದ ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ, ಲಿಂಗಪೂಜೆ ಅತ್ಯಂತ ಶ್ರೇಷ್ಠವಾಗಿದ್ದು, ಗುರುಗಳಿಂದ ಲಿಂಗಧಾರಣೆ ಮಾಡಿಸಿಕೊಳ್ಳುವುದು ಮಹತ್ವದ್ದಾಗಿದೆ ಎಂದು ಹೇಳಿದರು.

ರಾಮೇಗೌಡನಪುರ ಮಠ, ಗೋಪಾಲಪುರ ಮಠ, ಹಂಗ್ರಾಪುರ ಮಠ, ಕಳ್ಳಿಪುರ ಮಠ, ಬೀಚನಹಳ್ಳಿ ಮಠ, ಅಂಬಲಿ ಮಠ, ಸಂಕಲಾಪುರ ಮಠದ ಶ್ರೀಗಳು, ವೀರಶೈವ ಲಿಂಗಾಯತ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಐಸಾಮಿಗೌಡರು, ಮಠದ ಶಿಷ್ಯರಾದ ಕೆ.ಬಿ. ಜಗದೀಶ್, ಡಿಂಪಲ್ಕುಮಾರ್, ಅಭಿವೃದ್ದಿ ಸಮಿತಿ ಕಾರ್ಯದರ್ಶಿ ಬಿ.ಎಸ್. ಕಾಂತರಾಜು, ಬಿ.ಪಿ. ಸೋಮಣ್ಣ, ಎನ್.ಕೆ. ಮಲ್ಲಿಕಾರ್ಜುನ, ಸಕಲೇಶಪುರ ಸಿದ್ದಗಂಗಾ ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್. ವಿದ್ಯಾಶಂಕರ್, ಉದ್ಯಮಿ ರಾಜಶೇಖರ್, ಎಂ.ಎನ್. ಕುಮಾರಸ್ವಾಮಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-36-1126791042

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.