ಹಾಸನ: ಉತ್ತಮ ಧಾರ್ಮಿಕ ಸಂಸ್ಕಾರ ಮತ್ತು ಸನ್ನಡತೆಯೊಂದಿಗೆ ಯುವ ಸಮುದಾಯ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ವಿಶ್ವಕರ್ಮ ಸಮಾಜದ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ. ಹರೀಶ್ ತಿಳಿಸಿದರು.

ನಗರದ ಕಾಳಿಕಾಂಬ ಕಮಠೇಶ್ವರ ದೇವಾಲಯದ ವಿಶ್ವಕರ್ಮ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವಕರ್ಮ ವಧು-ವರರ ಪ್ರಥಮ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಕರ್ಮ ಸಮಾಜಕ್ಕೆ ಅನುವಂಶೀಯವಾಗಿ ಬಂದಿರುವ ಕೌಶಲವನ್ನು ವೃತ್ತಿಯಾಗಿಸಿಕೊಂಡು ಸರ್ವರ ಬೆನ್ನೆಲುಬಾಗಿ, ಕೀರ್ತಿವಂತರಾಗಿ, ದೇಶದ ಪರಂಪರೆ, ಸಂಸ್ಕೃತಿಯ ವಾರಸುದಾರರಾಗಬೇಕು. ಗುರು– ಹಿರಿಯರನ್ನು ಗೌರವಿಸುತ್ತ, ಧಾರ್ಮಿಕ ತಳಹದಿಯ ಮೇಲೆ ಸಮಾಜವನ್ನು ಮುನ್ನಡೆಸಬೇಕು ಎಂದರು.

ವಿದ್ಯಾವಂತರು ನಗರ ಜೀವನಕ್ಕೆ ಮಾರು ಹೋಗದೇ ಕೃಷಿಯನ್ನು ಅವಲಂಬಿಸಿ ಆರೋಗ್ಯಪೂರ್ಣ ನೆಮ್ಮದಿಯ ಜೀವನ ಸಾಗಿಸುತ್ತಿರುವ ಹಳ್ಳಿಗರನ್ನು ತಮ್ಮ ಬಾಳಸಂಗಾತಿಯನ್ನಾಗಿ ಮಾಡಿಕೊಂಡು ಉತ್ತಮ ವೈವಾಹಿಕ ಬದುಕನ್ನು ಸಾಗಿಸಬೇಕು ಎಂದರು.

ಪುರೋಹಿತ್ ಎನ್. ಪ್ರವೀಣ್ ಕುಮಾರ್, ಬ್ರಹ್ಮಾನಂದ ಮತ್ತು ನಾಗರಾಜು ಅವರನ್ನು ಸನ್ಮಾನಿಸಲಾಯಿತು. ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಉಪಾಧ್ಯಕ್ಷ ಎ.ಸಿ. ನಾರಾಯಣ್, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರಕುಮಾರ್, ಖಜಾಂಚಿ ಕೆ.ಎಸ್. ಜಗದೀಶ್, ನಿರ್ದೇಶಕರಾದ ಜಿ.ಎಸ್. ಜಯರಾಜ, ಕೆ.ಟಿ. ನಾಗೇಶ್, ಅನಿಲ ಪದ್ಮನಾಭ, ಛಾಯಾ ಲೋಕೇಶ್, ಕೆ.ಟಿ. ಯೋಗೇಶ್, ಕಾಳಿಕಾಂಬ ದೇವಾಲಯದ ಪೂಜಾ ಸಮಿತಿ ಅಧ್ಯಕ್ಷ ಎಚ್.ಕೆ. ಆನಂದ್, ವಿಶ್ವಕರ್ಮ ಸಮಾಜದ ತಾಲ್ಲೂಕು ಘಟಕದ ಉಪಾಧ್ಯಕ್ಷ ಎ. ಬ್ಯಾಟರಂಗಾಚಾರ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಆನಂದ್, ಸಹ ಕಾರ್ಯದರ್ಶಿ ಎಂ.ಟಿ. ಸುರೇಶ್, ಬಿ. ಲೋಕೇಶ್, ಜಿ.ಆರ್. ತಿಮ್ಮಚಾರ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-36-2113918141

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.