ಹಾವೇರಿ: ‘ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಸಮಾಜದ ಅಂಕು–ಡೊಂಕುಗಳನ್ನು ತಿದ್ದಿದವರು. ಅಂದಿನ ಪರಿಸ್ಥಿತಿಯನ್ನು ಪರಾಮರ್ಶಿಸುವ, ಪ್ರಶ್ನಿಸುವ, ಪ್ರತಿಭಟಿಸುವ, ನಿರಾಕರಿಸುವ ಹಾಗೂ ಪರ್ಯಾಯ ವ್ಯವಸ್ಥೆಯನ್ನು ರೂಪಿಸುವ ಸೂತ್ರಗಳನ್ನು ನೀಡಿ ಸಮ ಸಮಾಜದ ನಿರ್ಮಾತರಾದರು’ ಎಂದು ಚಿಕ್ಕಬಾಸೂರಿನ ಸರ್ಕಾರಿ ಮಹಾವಿದ್ಯಾಲಯದ ಉಪನ್ಯಾಸಕರಾದ ಪುಷ್ಪಾವತಿ ಶಲವಡಿಮಠ ಹೇಳಿದರು.

ಇಲ್ಲಿಯ ಬಸವೇಶ್ವರ ನಗರ ಸಿ ಬ್ಲಾಕ್ನಲ್ಲಿರುವ ಶಿವಯೋಗಿ ಬೆನ್ನೂರ ಅವರ ತೋಟದ ಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಭೇದ–ಭಾವ ಸಂಸ್ಕೃತಿಯನ್ನು ತೊಡೆದು ಹಾಕಿ, ಎಲ್ಲರೂ ಸಮಾನರು ಎಲ್ಲರೂ ನಮ್ಮವರು ಎಂಬ ಭಾವ ಮೂಡಿಸುವುದೇ ಶರಣ ತತ್ವದ ಮೂಲ ಆಶಯವಾಗಿದೆ’ ಎಂದರು.

ರಾಣೆಬೆನ್ನೂರಿನ ಎಸ್.ಜೆ.ಎಂ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಆರ್.ಬಿ. ಹೆಗಡಾಳ ಮಾತನಾಡಿ, ‘ಶರಣರು ನೀಡಿದ ವಚನ ಸಾಹಿತ್ಯ, ಬದುಕಿನ ಸಾಹಿತ್ಯವಾಗಿದೆ. ಯಾವುದೇ ಪ್ರಶಸ್ತಿಗಾಗಿ ಅವರು ಸಾಹಿತ್ಯ ಬರೆಯಲಿಲ್ಲ. ಜನಸಾಮಾನ್ಯರ ಹೃದಯ ಮುಟ್ಟುವ ಸಾಹಿತ್ಯ ಅವರದ್ದಾಗಿದೆ. ಶರಣರು, ನುಡಿದಂತೆ ನಡೆದರು. ನಡೆದಂತೆ ನುಡಿದರು. ವಚನ ಸಾಹಿತ್ಯದ ಅಧ್ಯಯನದ ಜೊತೆಗೆ, ಅದರ ಅಂಶಗಳ ಅನುಷ್ಠಾನ ಇಂದಿನ ಅವಶ್ಯಕತೆಯಾಗಿದೆ’ ಎಂದರು.

ಬಸವ ಬಳಗದ ಅಧ್ಯಕ್ಷ ವಿ.ಜಿ ಯಳಗೇರಿ ಮಾತನಾಡಿ, ‘ಬಸವಾದಿ ಶಿವಶರಣರ ಆಚಾರ–ವಿಚಾರ–ಬದುಕು–ಬರಹ ಬೋಧನೆಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿವೆ. ಅವುಗಳನ್ನು ಜನಮಾನಸಕ್ಕೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನವನ್ನು ಬಸವ ಬಳಗದಿಂದ ಮಾಡಲಾಗುತ್ತಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಎನ್.ಬಿ ಕಾಳೆ ಅವರು, ವಚನ ಸಾಹಿತ್ಯದ ಶ್ರೇಷ್ಠತೆ ಕುರಿತು ಮಾತನಾಡಿದರು.

ಉಪಾಧ್ಯಕ್ಷ ಕೆ.ಎಂ. ವಿಜಾಪುರ, ಶಿವಯೋಗಿ ಮಾಮಲೆಪಟ್ಟಣಶೆಟ್ಟಿ, ಮುರಿಗೆಪ್ಪ ಕಡೆಕೊಪ್ಪ, ಶಿವಬಸಪ್ಪ ಮುದ್ದಿ, ಹನುಮಂತಪ್ಪ ಮಡಿವಾಳರ, ಶಂಕರ ಸುತಾರ, ಮಹಾಂತೇಶ ಕರಿಮಣ್ಣವರ, ಬಸವರಾಜ ಕೋರಿ, ಶಿವಾನಂದ ಹೊಸಮನಿ, ಚಂದ್ರಶೇಖರ ಮಾಳಗಿ, ಜಿ.ಬಿ ಇಟಗಿ, ವೀರೇಶ ಕಲ್ಮನಿ, ಪ್ರವೀಣ ಕಡಕೋಳ, ಶಾರದಾ ಬೆನ್ನೂರ, ಶ್ರೀದೇವಿ ಕಲ್ಮನಿ, ಸಿದ್ದು ಬೆನ್ನೂರು, ಆಶಾ ತಿಮ್ಮಾಪುರ, ಶಕುಂತಲಮ್ಮ ಮಾಮಲೆ ಪಟ್ಟಣಶೆಟ್ಟಿ, ಚನ್ನಮ್ಮ ಕುಸುಗಲ್ ಇದ್ದರು.

ಶಿವಯೋಗಿ ಬೆನ್ನೂರು ಸ್ವಾಗತಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಉಳಿವೆಪ್ಪ ಪಂಪಣ್ಣವರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-22-183233772

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.