ಹಾವೇರಿ: ‘ಉತ್ತಮವಾದ ಭವಿಷ್ಯದ ಭರವಸೆಯನ್ನು ಇಂದಿನ ಆಧುನಿಕ ಶಿಕ್ಷಣ ನೀಡುವುದಿಲ್ಲ. ಲೌಕಿಕ ವಿದ್ಯೆಯೊಂದಿಗೆ ಶಾಸ್ತ್ರಗಳ ಜ್ಞಾನ ಹಾಗೂ ಧಾರ್ಮಿಕ ಸಂಸ್ಕಾರವು ವ್ಯಕ್ತಿತ್ವಕ್ಕೆ ಪರಿಪೂರ್ಣತೆ ನೀಡುತ್ತದೆ’ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥರು ಹೇಳಿದರು.

ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ ಆರಂಭವಾಗಿರುವ ವಿಶ್ವೇಶತೀರ್ಥ ಗುರುಕುಲದ ಪ್ರಥಮ ವರ್ಷದ ಪಠ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿದ ಮಾತನಾಡಿದರು.

‘ಗುರುಕುಲಕ್ಕೆ ಸೇರುವ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಬೇಡ. ಸಕಾರಾತ್ಮಕ ಚಿಂತನೆ ಹಾಗೂ ಆತ್ಮವಿಶ್ವಾಸ ಮೂಡಿಸುವ ಗುರುಕುಲ ಶಿಕ್ಷಣ, ಮಕ್ಕಳ ಸರ್ವತೋಮುಖ ಉನ್ನತಿಯನ್ನು ಕಲ್ಪಿಸುತ್ತದೆ. ಗುರುಕುಲ ಶಿಕ್ಷಣ ನಗರಗಳಿಗೆ ಮಾತ್ರ ಸೀಮಿತವಾಗದೆ, ಗ್ರಾಮೀಣ ಭಾಗಕ್ಕೂ ವಿಸ್ತರಿಸಬೇಕು. ಧಾರ್ಮಿಕ ಶ್ರದ್ಧಾವಂತ ಜನತೆ ಪೌರೋಹಿತ್ಯದ ಪರಂಪರೆಯನ್ನು ಉಳಿಸಬೇಕು. ನಮ್ಮ ಆಧ್ಯಾತ್ಮಿಕ ಸಾಧನೆಗೆ ನಾವೇ ಮುಂದಾಗಬೇಕು. ಸಮಾಜದಲ್ಲಿ ಧರ್ಮ ಜಾಗೃತಿ ಹಾಗೂ ಧಾರ್ಮಿಕ ಸ್ಥಳಗಳ ರಕ್ಷಣೆಗಾಗಿ ಗುರುಕುಲ ಶಿಕ್ಷಣ ಅಗತ್ಯವಿದೆ’ ಎಂದರು.

ಕಾರ್ಯಕ್ರಮದಲ್ಲಿ ಗುರುಕುಲದ ನೂತನ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು. ಕರ್ಜಗಿ ಗ್ರಾಮದ ಪೇಜಾವರ ಮಠದ ಅಂಗ ಸಂಸ್ಥೆಯಾದ ರಾಘವೇಂದ್ರ ಸ್ವಾಮೀಜಿ ಮಠದಲ್ಲಿ ಸಂಸ್ಥಾನ ಪೂಜೆಯನ್ನು ಸ್ವಾಮೀಜಿ ನೆರವೇರಿಸಿದರು. ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ತೀರ್ಥಪ್ರಸಾದ ವಿತರಣೆ ಕೈಗೊಳ್ಳಲಾಯಿತು.

ವ್ಯವಸ್ಥಾಪಕರಾದ ಅಕ್ಷಯ ಮನ್ನಾರಿ ಹಾಗೂ ಧೀರೇಂದ್ರ ಲಕ್ಷ್ಮೇಶ್ವರ, ವೆಂಕಟೇಶ್ ಆಚಾರ್ ಹತ್ತಿಮತ್ತೂರು, ವಸಂತ ಮುಕ್ತಾಲಿ, ರವಿ ಮುಧೋಳ, ಉದಯ ಕುಲಕರ್ಣಿ, ಮುರಳಿಧರ ಮಠದ, ರಾಮಚಂದ್ರ ರಾಯರು ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-22-795838311

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.