ಹಾನಗಲ್: ಜಗತ್ತು ಯುದ್ಧಗ್ರಸ್ತಗೊಳ್ಳುತ್ತಿದೆ. ನಮ್ಮಲ್ಲಿ ರಾಷ್ಟ್ರೀಯತೆ ಜಾಗೃತಗೊಳ್ಳಬೇಕು. ಬಾಲ್ಯದಿಂದಲೇ ಮಕ್ಕಳಲ್ಲಿ ದೇಶಪ್ರೇಮ ರೂಢಿಸಬೇಕು ಎಂದು ಹೋತನಹಳ್ಳಿ ಸಿದ್ಧಾರೂಢಮಠದ ಶಂಕರಾನಂದ ಸ್ವಾಮೀಜಿ ಹೇಳಿದರು.

ಯುವ ಕರ್ನಾಟಕ ಹಿಂದೂ ಮಹಾಸಭಾ ತಾಲ್ಲೂಕು ಘಟಕದಿಂದ ಗುರುವಾರ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಜಯಂತಿಯ ನಿಮಿತ್ತ ಇಲ್ಲಿನ ಗುರುಭವನದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದೇಶಕ್ಕೆ ಕೊಡುಗೆಯಾಗಿ ಕಂಗೊಳಿಸುವ ವೀರರು, ಸಾಧಕರ ಚರಿತ್ರೆಯನ್ನು ಅರಿಯಬೇಕು. ವಿದ್ಯಾರ್ಥ ಜೀವನದಿಂದಲೇ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಹುಬ್ಬಳ್ಳಿ, ಗುಂಡೂರ ಬಂಜಾರ ಗುರುಪೀಠದ ತಿಪ್ಪೇಶ್ವರ ಸ್ವಾಮೀಜಿ ಮಾತನಾಡಿ, ಶಿಸ್ತು, ಸಂಯಮಕ್ಕೆ ಆದ್ಯತೆ ನೀಡಬೇಕು. ಗುರುಗಳು ಮತ್ತು ಪಾಲಕರ ಮಾರ್ಗದರ್ಶನದಲ್ಲಿ ಭವಿಷ್ಯ ಉತ್ತಮಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಯುವ ಕರ್ನಾಟಕ ಹಿಂದೂ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಸಂಕಪಾಳೆ, ಗಣ್ಯರಾದ ದಿನೇಶ ಹೊಂಡದಕಟ್ಟಿ, ನಿಂಗಪ್ಪ ಕಾಳೇರ, ನಾಗೇಶಪ್ಪ ಸಾಳಂಕಿ, ಹನುಮಂತಪ್ಪ ಚವ್ಹಾಣ, ಹನುಮಂತ ಜಾಧವ, ಈರಣ್ಣ ಬಡಿಗೇರ, ಅಣ್ಣಪ್ಪ ಚಾಕಾಪೂರ, ರಾಮನಗೌಡ ಪಾಟೀಲ ಇದ್ದರು. ಇದಕ್ಕೂ ಮುನ್ನ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಯುವ ಕರ್ನಾಟಕ ಹಿಂದೂ ಮಹಾಸಭಾ ವತಿಯಿಂದ ಬ್ರೆಡ್ ಮತ್ತು ಹಣ್ಣು ವಿತರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-22-1725915916

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.