ಸವಣೂರು (ಹಾವೇರಿ): ತಾಲ್ಲೂಕಿನ ಹತ್ತಿಮತ್ತೂರಿನಲ್ಲಿರುವ ವಿರಕ್ತಮಠದ ಸಭಾಭವನದಲ್ಲಿ ಸಿದ್ಧಲಿಂಗೇಶ್ವರ ಸ್ವಾಮೀಜಿ ನೆನಪು ಹಾಗೂ ಹತ್ತಿಮತ್ತೂರ -ಕರ್ಜಗಿ ವಿರಕ್ತಮಠದ ಲಿಂ.ರುದ್ರಮುನಿ ಸ್ವಾಮೀಜಿಯವರ 42ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಧರ್ಮ ಸಮಾರಂಭ ಹಾಗೂ ಮಠದಿಂದ ಗುರುಸ್ಮರಣೆಯಲ್ಲಿ ತುಲಾಭಾರ ಸೇವೆ ನಡೆಯಿತು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಂದವಾಡಗಿ ಆಳಂದ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಶಿಕ್ಷಾ ಗುರು, ದೀಕ್ಷಾ ಗುರು, ಮೋಕ್ಷಾ ಗುರು ಎಂಬ ಮೂವರು ಗುರುಗಳ ಮಹಿಮೆಯೂ ಒಂದೇ ವ್ಯಕ್ತಿತ್ವದಲ್ಲಿ ಅಡಕವಾಗಿ, ಒಂದೇ ವೇದಿಕೆಯಲ್ಲಿ ಭಕ್ತರಿಗೆ ದೊರೆಯುವುದು ಅಪರೂಪದ ಭಾಗ್ಯ’ ಎಂದರು.

‘ಇಂದಿನ ಸಮಾಜಕ್ಕೆ ನಿಜಗುಣ ಶಿವಯೋಗಿಗಳಂಥ ಸ್ವಾಮೀಜಿಗಳು ಅವಶ್ಯ. ಅಂತಹ ಅಪೂರ್ವ ಸಾನ್ನಿಧ್ಯವನ್ನು ತಮ್ಮ ಜೀವನದಲ್ಲಿ ಪಡೆದಿರುವ ಭಕ್ತರು ನಿಜಕ್ಕೂ ಧನ್ಯರು. ಅವರು ಶಿಕ್ಷಣದ ಮೂಲಕ ಜ್ಞಾನವನ್ನು, ದೀಕ್ಷೆಯ ಮೂಲಕ ಆಧ್ಯಾತ್ಮಿಕ ಬೆಳಕನ್ನು ಹಾಗೂ ತಮ್ಮ ಅನುಗ್ರಹ ಮತ್ತು ಮಾರ್ಗದರ್ಶನದ ಮೂಲಕ ಮೋಕ್ಷದ ದಾರಿಯನ್ನು ತೋರಿಸುತ್ತಿದ್ದಾರೆ’ ಎಂದರು.

‘ಜೀವನದಲ್ಲಿ ಯಶಸ್ಸು ಸಾಧಿಸಲು ಮುಂದೆ ಸ್ಪಷ್ಟ ಗುರಿ ಮತ್ತು ಹಿಂದೆ ಗುರು ಇರಬೇಕು. ಗುರುವಿನ ಕೃಪೆಯೇ ಶಿಷ್ಯನ ಜೀವನದ ದಿಕ್ಕು ಮತ್ತು ಗುರಿಯನ್ನು ನಿರ್ಧರಿಸುತ್ತದೆ. ಗುರುದೇವರ ಪಾದಸೇವೆಯಲ್ಲಿ ಬೆಳೆದ ಶಿಷ್ಯ ಇಂದು ಗುರುತತ್ತ್ವದ ಜೀವಂತ ಪ್ರತಿರೂಪವಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವುದು ಎಲ್ಲರಿಗೂ ಸ್ಫೂರ್ತಿ’ ಎಂದರು.

ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ನಿಜಗುಣ ಶಿವಯೋಗಿ ಸ್ವಾಮೀಜಿ ಮಾತನಾಡಿ, ‘ಸುಮಾರು 48 ವರ್ಷಗಳ ಹಿಂದೆ ನಂದವಾಡಗಿ ಆಳಂದ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಂದ ದೀಕ್ಷೆ ಪಡೆದ ದಿನ, ನನ್ನ ಜೀವನದ ಮಹತ್ವದ ತಿರುವಾಗಿತ್ತು. ಗುರುದೇವರು ನೀಡಿದ ಶಿವದೀಕ್ಷೆಯೇ ನನ್ನ ಆಧ್ಯಾತ್ಮಿಕ ಬದುಕಿನ ಅಡಿಪಾಯವಾಗಿದೆ. ಗುರುಗಳು ಕೇವಲ ಮಂತ್ರವನ್ನು ನೀಡಲಿಲ್ಲ, ಬದುಕಿನ ಮಾರ್ಗವನ್ನು ತೋರಿಸಿದರು. ಅವರ ಅನುಗ್ರಹದಿಂದ ಇಂದು ಸಮಾಜ ಮತ್ತು ಧರ್ಮ ಸೇವೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ’ ಎಂದರು.

ನರಸೀಪುರದ ಅಂಬಿಗರ ಚೌಡಯ್ಯನಪೀಠದ ಶಾಂತಭೀಷ್ಮ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು. ಸಿದ್ಧಲಿಂಗ ಸ್ವಾಮೀಜಿ, ಗುರುಸಿದ್ಧ ಸ್ವಾಮೀಜಿ, ಸಂಗನಬಸವ ಸ್ವಾಮೀಜಿ, ಚನ್ನವೀರ ಸ್ವಾಮೀಜಿ, ಶಿವಯೋಗೇಶ್ವರ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಸಿದ್ದಯ್ಯ ಸ್ವಾಮೀಜಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-22-598014066

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.