ಶಿಗ್ಗಾವಿ: ‘ಬದುಕು ಬರೆದಿಟ್ಟಿರುವ ಪುಸ್ತಕದಂತೆ. ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಬಂದಂತೆ ಸ್ವೀಕರಿಸಬೇಕು. ದಾಂಪತ್ಯದಲ್ಲಿಯೂ ಸುಖ, ದುಃಖ, ನೋವು... ಎಲ್ಲವೂ ಬರುತ್ತದೆ. ದಂಪತಿಗಳು ಒಬ್ಬರಿಗೊಬ್ಬರು ಅನುಸರಿಸಿಕೊಂಡು ಹೋದರೆ, ಜೀವನ ಸುಖಕರವಾಗಿರುತ್ತದೆ’ ಎಂದು ಕೆಂಡದಮಠ ರೇವಣಸಿದ್ದೇಶ್ವರ ಸ್ವಾಮೀಜಿ ಕಿವಿಮಾತು ಹೇಳಿದರು.

ತಾಲ್ಲೂಕಿನ ಬಂಕಾಪುರದ ಕೆಂಡದ ಮಠ ಆವರಣದಲ್ಲಿ ‘ಚಿನ್ನಯ್ಯಸ್ವಾಮಿ ಅವರ 62ನೇ ಪುಣ್ಯ ಸ್ಮರಣೋತ್ಸವ’ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ‘ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ’ದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಚಕ್ಕಡಿಯ ಚಕ್ರಗಳು ಸುಗಮವಾಗಿ ಮುಂದಕ್ಕೆ ಹೋಗಲು ಕಡಾಣಿ ಬೇಕು. ದೇಹವೆಂಬ ಚಕ್ಕಡಿಯು ಸುಗಮವಾಗಿ ಸಾಗಬೇಕಾದರೆ, ಗುರು–ಶರಣರ ಆಶೀರ್ವಾದ ಬೇಕು. ಅದು ಇದ್ದರೆ, ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ’ ಎಂದರು.

‘ಸರ್ವಧರ್ಮಗಳ ಏಳು ಜೋಡಿಗಳು ಇಂದು ನವ ದಾಂಪತ್ಯಕ್ಕೆ ಕಾಲಿಡುತ್ತಿವೆ. ಏಳು ಎಂಬುದಕ್ಕೆ ವಿಶೇಷ ಅರ್ಥಗಳಿವೆ. ಸಪ್ತಪದಿ ಎಂಬುದು ಏಳು, ಖಂಡಗಳು ಏಳು, ಸಪ್ತಸಾಗರಗಳು ಏಳು, ಸಂಗೀತದ ಸ್ವರಗಳು ಏಳು. ಸೂರ್ಯ ಏಳು ಕುದುರೆ ಮೇಲೆ ಪ್ರಯಾಣ ಮಾಡುತ್ತಾನೆ. ಇಂದು ನವ ಜೋಡಿಗಳ ಮೇಲೆಯೂ ಸೂರ್ಯನ ಆಶೀರ್ವಾದವಾಗಿದೆ. ಒಳ್ಳೆಯ ಆಚಾರ, ವಿಚಾರದಿಂದ ಮದುವೆಯಾದರೆ, ವಿವಾಹದ ಬದುಕು ಸುಂದರವಾಗುತ್ತದೆ’ ಎಂದು ಹೇಳಿದರು.

ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಮಾತನಾಡಿ, ‘ಸಾಮೂಹಿಕ ವಿವಾಹಗಳು, ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತವೆ. ಬಡತನ ನಿರ್ಮೂಲನೆಯೂ ಸಾಧ್ಯವಿದೆ. ಮದುವೆಗೆ ಭಾರತೀಯರಲ್ಲಿ ವಿಶೇಷ ಸ್ಥಾನವಿದೆ. ಭಾರತವು ಸಂಸ್ಕಾರ, ಸಂಸ್ಕೃತಿಗಳಿಗೆ ಶ್ರೀಮಂತಿಕೆ ಪಡೆದಿದೆ’ ಎಂದರು.

‘ವಿವಾಹ ಒಂದು ಪ್ರಮುಖ ಸಂಸ್ಕಾರವಾಗಿದ್ದು, ಭಾರತೀಯರಲ್ಲಿ ಪವಿತ್ರ ಸ್ಥಾನವಿದೆ. ಧರ್ಮಾಚರಣೆಗೆ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಭಾರತ ಸಂಸ್ಕಾರ, ಸಂಸ್ಕೃತಿಗಳಿಗೆ ಶ್ರೀಮಂತಿಕೆ ಪಡೆದಿದೆ’ ಎಂದರು.

ರಾಜ್ಯ ಗಡಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾತನಾಡಿದರು. ಶ್ರೀಕಾಂತ ದುಂಡಿ ಗೌಡ್ರ, ಗುಡ್ಡಪ್ಪ ಜಲದಿ, ಶಿವಾನಂದ ರಾಮಗೇರಿ, ಗುರುಸ್ವಾಮಿ ಕೆಂಡದಮಠ, ಎಂ.ಎನ್. ಹೊನ್ನಕೇರಿ, ಹೊನ್ನಪ್ಪ ಹೂಗಾರ, ಸತೀಶ ಆಲದಕಟ್ಟಿ, ಫಕ್ಕೀರಪ್ಪ ಕುಂದೂರ, ಬಾಬಣ್ಣ ತಳಳ್ಳಿ, ಶಿವಪ್ಪ ಮತ್ತೂರ, ಚಂದ್ರಶೇಖರ ಮಾನೋಜಿ, ಬಿ.ಡಿ. ಸವೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-22-1358611558

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.