ಶಿಗ್ಗಾವಿ: ತಾಲ್ಲೂಕಿನ ಮುಗಳಿ ಗ್ರಾಮದಲ್ಲಿನ ಬಸವಣ್ಣ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಏ. 17ರಿಂದ 21ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಏ. 17ರಂದು ಬೆಳಿಗ್ಗೆ 8ಕ್ಕೆ ಗ್ರಾಮದೇವಿಗೆ ಮಹಿಳೆಯರು ಉಡಿ ತುಂಬುವರು. ಮಧ್ಯಾಹ್ನ 1ಕ್ಕೆ ಹಾನಗಲ್ ತಾಲ್ಲೂಕಿನ ವೀರಾಪುರದ ಈರಣ್ಣ ಬಡಿಗೇರ ನಿರ್ಮಿಸಿದ ನೂತನ ಮಹಾರಥವನ್ನು ಬರಮಾಡಿಕೊಳ್ಳಲಾಗುವುದು.

ಏ.18ರಂದು ಸಂಜೆ 7.30ಕ್ಕೆ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ಬಸವರಾಜ ಗೊಬ್ಬಿ ಹಾಗೂ ಕಲಾವಿದ ಗುರುನಾಥ ಹುಬ್ಬಳ್ಳಿ ಅವರಿಂದ ಜನಪದ ಸಂಭ್ರಮ ಜರುಗಲಿದೆ.

ಏ.19ರಂದು ಸಂಜೆ 7ಕ್ಕೆ ಬಸವ ಜಯಂತಿ ಅಂಗವಾಗಿ ಮುಗಳಿ ಮಲ್ಲಿಕಾರ್ಜುನ ಜಾನಪದ ಕಲಾ ತಂಡ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕುಂದಗೋಳ ತಾಲ್ಲೂಕಿನ ಶಿರೂರ ಗ್ರಾಮದ ವಿಶ್ವಭಾರತಿ ರಮ್ಯ ನಾಟಕ ಸಂಘ(ರಿ) ವತಿಯಿಂದ ಜಗಜ್ಯೋತಿ ಬಸವೇಶ್ವರ ಭಕ್ತಿ ಪ್ರಧಾನ ರಂಗ ನಾಟಕ ಪ್ರದರ್ಶನಗೊಳ್ಳಲಿದೆ. ಮಹಾದೇವ ಬಣಕಾರ ರಚಿತ ನಾಟಕವನ್ನು ಹಿರಿಯ ರಂಗಕರ್ಮಿ ಬಸವರಾಜ ಬೆಂಗೇರಿ ನಿರ್ದೇಶಿಸಿ ಅಭಿನಯಿಸುವರು.

ಪಂಚಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸುವರು. ನಿವೃತ್ತ ಮುಖ್ಯ ಶಿಕ್ಷಕ ಬಸವಣ್ಣೆಪ್ಪ ದುಂಡಪ್ಪನವರ ಅಧ್ಯಕ್ಷತೆ ವಹಿಸುವರು. ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಉದ್ಘಾಟಿಸುವರು. ಯುವ ಮುಖಂಡ ಭರತ್ ಬೊಮ್ಮಾಯಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವರು. ಮುಖಂಡರಾದ ಶಿವಾನಂದ ರಾಮಗೇರಿ, ಮಾರುತಿ ಶಿಡ್ಲಾಪುರ, ಕೊಟ್ರೇಶ ಮಾಸ್ತರ ಬೆಳಗಲಿ, ಪ್ರಭು ಗುರಪ್ಪನವರ, ಪರಿಮಳಾ ಜೈನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಹಾಗೂ ಶೈಲಜಾ ಪಾಟೀಲ ಆಗಮಿಸುವರು.

2025-26ನೇ ಸಾಲಿನಲ್ಲಿ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಏ.20ರಂದು ಸಂಜೆ 5ಕ್ಕೆ ಬಸವಣ್ಣ ದೇವರ ರಥೋತ್ಸವ ಹಾಗೂ ಸಂಜೆ 7.45ಕ್ಕೆ ಹಿರಿಯ ಕಲಾವಿದರಾದ ಶಿವನಗೌಡ ಪಾಟೀಲ, ಡಾ.ಬಸನಗೌಡ ಪಾಟೀಲ, ಶಂಕ್ರಣ್ಣ ಸಂಕಣ್ಣವರ, ಕಬನೂರಿನ ಅಲ್ಲಿಕೇರಿ ಬಸವೇಶ್ವರ ಸಾಂಸ್ಕೃತಿಕ ಹಾಗೂ ಕ್ರೀಡಾ ಯುವ ಸಂಘದ ವತಿಯಿಂದ ಗಾನ ಸಿಂಚನ ಕಾರ್ಯಕ್ರಮ ಜರುಗಲಿದೆ.

ಏ. 21ರಂದು ಸಂಜೆ 5ಕ್ಕೆ ರಥೋತ್ಸವ ನಿಮಿತ್ತ ಕಡುಬಿನ ಕಾಳಗ, ಸಂಜೆ 7.45ಕ್ಕೆ ಕುಂದಗೋಳ ತಾಲ್ಲೂಕಿನ ಹರ್ಲಾಪುರದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರದ ಮಕ್ಕಳಿಂದ ಮಲ್ಲಗಂಬ, ಕಲಾವಿದ ಎಸ್.ಎಸ್. ಹಿರೇಮಠ ನೇತೃತ್ವದ ತಂಡದಿಂದ ಜನಪದ ಸಂಭ್ರಮ ಜರುಗಲಿವೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-22-377938494

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.