ಪ್ರಜಾವಾಣ ವಾರ್ತೆ

ಹೆಬ್ರಿ: ‘ದೇವರನ್ನು ಕುರಿತ ಚಿಂತನೆ ಬೆಳೆಸಿಕೊಳ್ಳಲು ಧಾರ್ಮಿಕ ಶಿಕ್ಷಣ ಶಿಬಿರ ಅವಶ್ಯಕ. ಉತ್ತಮ ಕಾರ್ಯಗಳಿಗೆ ದೇವರ ರಕ್ಷೆ ಸದಾ ಇರುತ್ತದೆ. ಸನಾತನ ಧರ್ಮದ ಸಂಸ್ಕೃತಿ ಉಳಿಸಿ ಬೆಳೆಸುವುದಕ್ಕಾಗಿ ಮಕ್ಕಳನ್ನು ಧಾರ್ಮಿಕ ಶಿಕ್ಷಣ ಶಿಬಿರಕ್ಕೆ ಕಳುಹಿಸಬೇಕು’ ಎಂದು ವಿದ್ವಾನ್ ವಾಸುದೇವ ಉಪಾಧ್ಯಾಯ ಹೇಳಿದರು.

ಹೆಬ್ರಿ ಗಿಲ್ಲಾಳಿ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ವಿಪ್ರರಿಗಾಗಿ ನಡೆದ 10 ದಿನಗಳ ಧಾರ್ಮಿಕ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

ಕಲಿತ ವಿದ್ಯೆ ಫಲಿಸಬೇಕಾದರೆ ಚುರುಕುತನ, ಏಕಾಗ್ರತೆ ಹಾಗೂ ಕರ್ತವ್ಯ ಪ್ರಜ್ಞೆ ಅಗತ್ಯ. ಸಾತ್ವಿಕ ಆಹಾರ ರೂಢಿಸಿಕೊಳ್ಳಬೇಕು. ಗುರುಕುಲದ ಶಿಕ್ಷಣ ಪಡೆಯಬೇಕಾದರೆ ತ್ಯಾಗಿಗಳಾಗಬೇಕು ಎಂದು ಅವರು ಹೇಳಿದರು.

ಗೋಶಾಲೆಯ ಟ್ರಸ್ಟಿ ವಿದ್ವಾನ್ ಪದ್ಮನಾಭ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿಗಳಾದ ಮಹತಿ ಮತ್ತು ಹರಿಪ್ರಸಾದ, ಅಧ್ಯಾಪಕರಾದ ಶ್ರೀವತ್ಸ ಕುಲಕರ್ಣಿ ಹಾಗೂ ಶ್ರೀವಾಸ ಆಚಾರ್ಯ, ಪೋಷಕರಾದ ವೆಂಕಟೇಶ ವೈಲಾಯ ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. ಗಿಲ್ಲಾಳಿ ನರಸಿಂಹ ಆಚಾರ್ಯ ಹೊಸಪೇಟೆ, ಪೋಷಕರಾದ ಕೃಷ್ಣಪ್ರಸಾದ ಭಟ್ ಕಬ್ಬಿನಾಲೆ, ಶಿಬಿರದ ಗುರುಗಳಾದ ಸುಬ್ರಮಣ್ಯ ಅಡಿಗ, ಶಿಬಿರ ವ್ಯವಸ್ಥಾಪನ ಸಮಿತಿಯ ಪ್ರಮುಖರಾದ ಬಲ್ಲಾಡಿ ಚಂದ್ರಶೇಖರ ಭಟ್, ಮಡಾಮಕ್ಕಿ ವೇದವ್ಯಾಸ ತಂತ್ರಿ, ಗಿಲ್ಲಾಳಿ ವಿಷ್ಣುಮೂರ್ತಿ ಆಚಾರ್ಯ, ವರಂಗ ರಾಮಚಂದ್ರ ಭಟ್, ಹರೀಶ್ ಭಟ್, ಗೋಶಾಲೆಯ ಉಸ್ತುವಾರಿ ಸುಬ್ರಹ್ಮಣ್ಯ ನಾಯಕ್ ಪಾಲ್ಗೊಂದ್ದರು. ಆದ್ಯಾ ಜೋಯಿಸ್ ಮತ್ತು ಪದ್ಮಶ್ರೀ ಜೋಯಿಸ್ ಪ್ರಾರ್ಥಿಸಿದರು. ಅದಿತಿ ಸ್ವಾಗತಿಸಿ ವಂದಿಸಿದರು. ಶಿಬಿರದ ಅದ್ಯಾಪಕ ಶ್ರೀಧಾಮ ಆಚಾರ್ಯ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-28-292430372

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.