ಹಿರಿಯೂರು: ‘ರಾಜ್ಯದಲ್ಲಿ ನಡೆಯು ತ್ತಿರುವ ಈಚೆಗಿನ ಕೆಲವೊಂದು ವಿದ್ಯಮಾನಗಳು ಭಕ್ತರು–ಮಠಾಧೀಶರ ನಡುವೆ ಹೊಯ್ ಕೈ ಮಟ್ಟ ತಲುಪಿರುವುದು ಬೇಸರದ ಸಂಗತಿ. ಸ್ವಾಮೀಜಿಗಳಾದವರು ವೈಯಕ್ತಿಕ ಬಯಕೆಗಳನ್ನು ಬದಿಗಿಟ್ಟು ಶಿಕ್ಷಣ, ಸಂಸ್ಕಾರದ ಜೊತೆಗೆ ಸಮಾಜವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ. ಪಾಪಣ್ಣ ಸಲಹೆ ನೀಡಿದರು.

ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ಕರಿಯಾಲ ರಸ್ತೆಯಲ್ಲಿರುವ ಶ್ರೀಕೃಷ್ಣ ಫಾರಂಹೌಸ್ ಆವರಣದಲ್ಲಿ ಸೋಮವಾರ ಶ್ರೀಕೃಷ್ಣ ಕೃಪಾಪೋಷಿತ ನಾಟಕ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕಲಾವಿದರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭ ಹಾಗೂ ‘ಶ್ರೀಕೃಷ್ಣ ಸಂಧಾನ’ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದಾಬಸ್ಪೇಟೆ ಸಮೀಪದ ವನಕಲ್ಲು ಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಬಸವ ರಮಾನಂದ ಸ್ವಾಮೀಜಿಯವರು ಇತರೆ ಸ್ವಾಮೀಜಿಗಳಿಗೆ ಮಾದರಿಯಾಗಿದ್ದಾರೆ. ಶಿಕ್ಷಣಕ್ಕೆ ಒತ್ತು ನೀಡಿರುವ ಅವರು 25 ಪದವಿಗಳನ್ನು ಪಡೆದಿದ್ದಾರೆ. ಮಠದಲ್ಲಿ ಬಡ ಮಕ್ಕಳ ಶಿಕ್ಷಣ ಹಾಗೂ ದಾಸೋಹಕ್ಕೆ ಒತ್ತು ನೀಡಿದ್ದಾರೆ. ಅನ್ನ ಮತ್ತು ಅಕ್ಷರ ಮನುಷ್ಯನ ಬದುಕನ್ನು ಬದಲಿಸಬಲ್ಲವು ಎಂಬ ಸಿದ್ಧಾಂತದೊಂದಿಗೆ ಹೆಜ್ಜೆ ಹಾಕುತ್ತಿರುವ ಸ್ವಾಮೀಜಿಗೆ ಅವರನ್ನು ಸನ್ಮಾನಿಸುವುದು ಸಂತಸದ ಸಂಗತಿ’ ಎಂದು ತಿಳಿಸಿದರು.

‘ಜ್ಞಾನಿಗಳಿಗೆ ಮೌಲ್ಯ ನಿಗದಿ ಮಾಡಲಾಗದು. ವಿದ್ವಾಂಸರಾದವರಿಗೆ ಜಗತ್ತಿನಲ್ಲಿ ಇರುವ ಸ್ಥಾನವೇ ಬೇರೆ. ಸ್ವಾಮೀಜಿಗಳು ಬಹಳಷ್ಟು ಜನ ಕಾಣಸಿಗಬಹುದು. ಆದರೆ, ವಿದ್ವಾಂಸರು ಸಿಗುವುದು ಕಷ್ಟ. ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಸಮಾಜಕ್ಕೆ ಈ ಪರಿಯ ವಿದ್ಯಾದಾಯಿ ಸ್ವಾಮೀಜಿಯಾಗಿ ದೊರೆತಿರುವುದು ಈ ಸಮಾಜದ ಪುಣ್ಯ. ಸಮಾಜದಲ್ಲಿನ ಅನಕ್ಷರಸ್ಥರನ್ನು ಗುರುತಿಸಿ ಅಕ್ಷರ ಕಲಿಕೆಗೆ ಪ್ರೇರೇಪಣೆ ನೀಡುತ್ತಿರುವ ರಮಾನಂದ ಸ್ವಾಮೀಜಿ ನಿಜಕ್ಕೂ ಅಭಿನಂದನೀಯರು’ ಎಂದು ಚಿತ್ರದುರ್ಗದ ಕಬೀರಾನಂದ ಮಠದ ಶಿವಲಿಂಗಾನಂದ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.

ಎಸ್ಟಿಗೆ ಸೇರಿಸಿ: ‘ರಮಾನಂದ ಸ್ವಾಮೀಜಿಗೆ ಕೇಂದ್ರ ಸಚಿವ ಕುಮಾರಸ್ವಾಮಿ, ತುಮಕೂರು ಮತ್ತು ಚಿತ್ರದುರ್ಗದ ಸಂಸದರೊಂದಿಗೆ ಉತ್ತಮ ಬಾಂಧವ್ಯವಿದೆ. ಅವರನ್ನು ಒಲಿಸಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಾರ್ಯ ಮಾಡಿದಲ್ಲಿ ಈಗ ಬೆಳ್ಳಿ ಕಿರೀಟ ತೊಡಿಸಿದ್ದು, ಮುಂದೆ ಚಿನ್ನದ ಕಿರೀಟ ತೊಡಿಸುತ್ತೇವೆ’ ಎಂದು ಹೇಳಿದ ಮಾಜಿ ಶಾಸಕ ಎ.ವಿ. ಉಮಾಪತಿ, ‘ಬಸವಣ್ಣನವರು ತೋರಿಸಿಕೊಟ್ಟಿರುವ ಇವ ನಮ್ಮವ, ಇವ ನಮ್ಮವ ಎನ್ನುವ ಸಿದ್ದಾಂತದೊಂದಿಗೆ ಬದುಕು ನಡೆಸೋಣ’ ಎಂದು ಸಲಹೆ ನೀಡಿದರು.

ಸಂಗನಹಳ್ಳಿಯ ಬಸವ ಮಹಾಲಿಂಗ ಸ್ವಾಮೀಜಿ, ಶಿಕಾರಿಪುರದ ಚನ್ನಬಸವ ಸ್ವಾಮೀಜಿ, ಹನುಮಂತಪುರದ ನಾಗೇಂದ್ರ ಸ್ವಾಮೀಜಿ, ಐರಣಿಯ ಗಜದಂಡ ಸ್ವಾಮೀಜಿ, ಹೊಳಲ್ಕೆರೆ ಒಂಟಿಕಲ್ಲು ಮಠದ ತಿಪ್ಪೇರುದ್ರ ಸ್ವಾಮೀಜಿ, ರಾಮೇನಹಳ್ಳಿಯ ಸಿದ್ದಲಿಂಗ ಸ್ವಾಮೀಜಿ, ಹರಿಹರದ ಬಸವರಾಜಯ್ಯ ಸ್ವಾಮೀಜಿ, ದಾವಣಗೆರೆಯ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಐಮಂಗಲದ ಬಸವ ಹರಳಯ್ಯ ಸ್ವಾಮೀಜಿ, ಚಿಕ್ಕನಾಯಕನಹಳ್ಳಿಯ ಮಂಜುನಾಥ್, ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್, ಚಿಕ್ಕಣ್ಣದೇವರಹಟ್ಟಿ ಚಿಕ್ಕಣ್ಣ, ಪ್ರಧಾನ ಅರ್ಚಕ ಪಾಪಣ್ಣ, ಅಮ್ಮನಹಟ್ಟಿ ಗೋಪಾಲಣ್ಣ, ಗೋಪಾಲಸ್ವಾಮಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-44-1512756415

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.