ಹೊಳೆನರಸೀಪುರ: 'ಜೈನಧರ್ಮದ 24ನೇ ತೀರ್ಥಂಕರರಾದ ಮಹಾವೀರರು ಶಾಂತಿ, ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯಗಳನ್ನು ಸಾರಿದ್ದು, ಮಹಾವೀರರು ಸಾರಿದ ಸಂದೇಶಗಳನ್ನು ಪಾಲಿಸಿ ಜೀವನವನ್ನು ಶಾಂತಿ, ಸಮಾಧಾನಗಳಿಂದ ಕಳೆಯೋಣ’ ಎಂದು ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಸಲಹೆ ನೀಡಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ‘ಮಹಾವೀರರು ಎಲ್ಲ ಜೀವಿಗಳಿಗೆ ದೈಹಿಕ, ಮಾನಸಿಕ, ಮೌಖಿಕ ಹಿಂಸೆಯಿಂದ ರಕ್ಷಣೆ ನೀಡಬೇಕು, ಸತ್ಯವನ್ನೇ ನುಡಿಯಬೇಕು, ಸತ್ಯಮಾರ್ಗದಲ್ಲಿ ನಡೆಯಬೇಕು, ಇತರರ ಸಂಪತ್ತಿಗೆ ಆಸೆ ಪಡಬಾರದು ಹಾಗೂ ಕದಿಯಬಾರದು, ಇಂದ್ರಿಯ ಸುಖಗಳನ್ನು ನಿಯಂತ್ರಿಸಬೇಕು ಎನ್ನುವ ಸಂದೇಶ ನೀಡಿದ್ದು ಜೈನ

ಧರ್ಮೀಯರು ಇವುಗಳನ್ನು ಪಾಲಿಸುತ್ತಾರೆ’ ಎಂದರು.

‘ನಾಳೆಯಿಂದ ಸ್ವಯಂ ಜನಗಣತಿ ಪ್ರಾರಂಭವಾಗುತ್ತಿದ್ದು, ವಿದ್ಯಾವಂತರು ತಮ್ಮ ತಮ್ಮ ಕುಟುಂಬದ ವಿವರಗಳನ್ನು ಯಾರಾದರೊಬ್ಬರು ಆನ್ಲೈನ್ ಮೂಲಕ ಭರ್ತಿಮಾಡಬೇಕು. ಇದರಲ್ಲಿ 33 ಪ್ರಶ್ನೆಗಳನ್ನು ಭರ್ತಿ ಮಾಡಿ 15ರ ನಂತರ ಮನೆ ಮನೆಗೆ ಗಣತಿದಾರರು ಬರುತ್ತಾರೆ. ಆಗ ನೀವು ಆನ್ಲೈನ್ನಲ್ಲಿ ಬಂದಿರುವ ನಿಮ್ಮ ಸಂಖ್ಯೆಯನ್ನು ಗಣತಿದಾರರಿಗೆ ನೀಡಿದರೆ ಅವರು ಅದನ್ನು ದೃಢೀಕರಿಸುತ್ತಾರೆ. ಆನ್ಲೈನ್ನಲ್ಲಿ ಭರ್ತಿ ಮಾಡಿರದಿದ್ದರೆ ಅವರು ನಿಮ್ಮ ಮನೆಗೆ ಬಂದು ಗಣತಿ ಮಾಡುತ್ತಾರೆ. ಮೊದಲೇ ವಿವಿರ ದಾಖಲಿಸಿದ್ದರೆ ಗಣತಿದಾರರಿಗೆ ಸಹಾಯ ಆಗುತ್ತದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧಿಕಾರಿ ಗೋಪಾಲ್, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್, ಮೀನುಗಾರಿಕೆ ಇಲಾಖೆ ಅಧಿಕಾರಿ ಸುಮಾ ಭಾಗವಹಿಸಿದ್ದರು. ಕ್ರೀಡಾ ಶಿಕ್ಷಣ ಸಂಯೋಜಕ ಸುಜತ್ಅಲಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-36-1237081697

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.