ಹಾರೋಹಳ್ಳಿ: ಅಸ್ಪೃಶ್ಯತೆ, ಅಸಮಾನತೆ ಶಿಕ್ಷಣದಿಂದ ವಂಚಿತ ಸಮುದಾಯಕ್ಕೆ ಬೆಳಕಿನಂತೆ ಬಂದ ಬಿ.ಆರ್. ಅಂಬೇಡ್ಕರ್ ಅವರು ಜಾತಿ, ಧರ್ಮ ಪಂಥಗಳೆನ್ನದೆ ಸರ್ವರನ್ನು ಸಮಾನವಾಗಿ ಕಂಡು ಜಾತಿ ತಾರತಮ್ಯ, ಆಸ್ಪೃಶ್ಯತೆ, ಅಸಮಾನತೆಯಿಂದ ನಲುಗಿ ಹೋಗಿದ್ದ ಸಮುದಾಯಕ್ಕೆ ಸರ್ವಶ್ರೇಷ್ಠ ಗ್ರಂಥ ಸಂವಿಧಾನದ ಮೂಲಕ ಸ್ವತಂತ್ರ ನೀಡಿದ್ದಾರೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ನಾಗೇಶ್ ಹೇಳಿದರು.

ಹಾರೋಹಳ್ಳಿ ತಾಲ್ಲೂಕಿನ ಹೊನ್ನಾಲಗನದೊಡ್ಡಿ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಹಬ್ಬ ಹಾಗೂ ದಾದಾಸಾಹೇಬ್ ಕಾನ್ಶಿರಾಂ ಯುವಕರ ಸಂಘ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಮಾನತೆ, ಮೀಸಲಾತಿ ಮತ್ತು ಜನರ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಇಂದಿಗೂ ಚರ್ಚೆಗಳು ಮುಂದುವರೆಯುತ್ತಲೇ ಬಂದಿದೆ. ಆದರೆ ಅಂಬೇಡ್ಕರ್ ತೋರಿಸಿಕೊಟ್ಟ ಹಾದಿ, ಸಿದ್ಧಾಂತ ಅಥವಾ ಮಾರ್ಗವನ್ನು ಭಾರತ ಅನುಸರಿಸುತ್ತಿದೆಯೇ? ಅಥವಾ ಕೇವಲ ಅವರನ್ನು ಏಪ್ರಿಲ್ 14ಕ್ಕೆ ಸೀಮಿತಗೊಳಿಸಿದ್ದೇವೆಯೇ? ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಯುವಕರು ಇನ್ನಾದರೂ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.

ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಯಕನಹಳ್ಳಿ ಅನ್ನದಾನಪ್ಪ ಮಾತನಾಡಿ, ಸಂವಿಧಾನವು ಎಲ್ಲ ಜಾತಿ, ಧರ್ಮ, ಮೇಲು– ಕೀಳು ತಾರತಮ್ಯವಿಲ್ಲದೆ ಸರ್ವರೂ ಅಪ್ಪಿಕೊಳ್ಳಬಹುದಾದ ಶ್ರೇಷ್ಠ ಗ್ರಂಥ ಎಂದರು.

ಬಿ.ಆರ್. ಅಂಬೇಡ್ಕರ್ ಹಾಗೂ ಕಾನ್ಶಿರಾಂ ಯುವಕರ ಸಂಘದ ನಾಮ ಫಲಕ ಅನಾವರಣಗೊಳಿಸಲಾಯಿತು.

ಬಿಡದಿ ರೋಟರಿ ಕ್ಲಬ್ ಅಧ್ಯಕ್ಷ, ರಮೇಶ್, ಮಾದಾರ ಮಹಾಸಭಾದ ಬೆಂಗಳೂರು ದಕ್ಷಿಣ ಜಿಲ್ಲೆ ಜಿಲ್ಲಾಧ್ಯಕ್ಷ ನರಸಿಂಹಯ್ಯ, ಮಾಗಡಿ ಯೋಜನ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ್, ಕೃಷ್ಣಮೂರ್ತಿ, ನಗೆ ಮಳೆ ರಾಜ ಚಂದ್ರಾಜ್, ಮೇಡಮಾರನಹಳ್ಳಿ ಶಿವರಾಜು, ಶ್ರೀಕಂಠು, ಪ್ರದೀಪ್, ಬನವಾಸಿ ಗೋಪಾಲ್, ಮುಳ್ಳಹಳ್ಳಿ ಆನಂದ್, ಯುವಕರ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-14-900612963

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.