ಹೊನ್ನಾಳಿ: ‘ಬಸವಣ್ಣನವರು ನಡೆ–ನುಡಿಗಳಲ್ಲಿ ಒಂದಾಗಿ ಬಾಳಿದ ಯುಗಪುರುಷ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ.ಜಿ. ಧನಂಜಯ ಹೇಳಿದರು.

ಸೋಮವಾರ ಕಾಲೇಜಿನಲ್ಲಿ ನಡೆದ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಳಸಮುದಾಯಗಳಲ್ಲಿ ಆತ್ಮವಿಶ್ವಾಸ ಮೂಡಿಸಿ ಶೂದ್ರರೂ ದೈವತ್ವಕ್ಕೇರಬಹುದು ಎಂಬುದನ್ನು ಬಸವಣ್ಣನವರು ಸಾಧಿಸಿ ತೋರಿಸಿದರು ಎಂದರು.

ಬಸವಣ್ಣನವರು ಶ್ರಮ ಸಂಸ್ಕೃತಿಯ ಹರಿಕಾರರಾಗಿದ್ದರು. ತಮ್ಮ ವ್ಯಕ್ತಿತ್ವದ ವಿಕಾಸದೊಂದಿಗೆ ಜನಸಮೂಹದ ವಿಕಾಸವನ್ನೂ ಸಾಧ್ಯ ಮಾಡಿದರು. ಈ ಮೂಲಕ ಅವರು ಸ್ಥಾಪಿಸಿದ ಅನುಭವ ಮಂಟಪವು ಮುಕ್ತ ವಿಶ್ವವಿದ್ಯಾಲಯದಂತೆ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿಸಿದರು.

ಉಪನ್ಯಾಸಕ ಇರ್ಫಾನ್ ಬಾಷಾ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಹರಾಳು ಮಹಾಬಲೇಶ್ವರ ಸ್ವಾಗತಿಸಿದರು. ದೊಡ್ಡಪ್ಪ ವಂದಿಸಿದರು. ಪ್ರೊ. ಗೋವಿಂದಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-43-2101625640

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.