ಹೊನ್ನಾಳಿ: ‘ಈ ಜಗತ್ತು ಜೈನಧರ್ಮವನ್ನು ಪರಿಪಾಲನೆ ಮಾಡಿದರೆ ಯಾವ ಯುದ್ಧಗಳು ನಡೆಯುತ್ತಿರಲಿಲ್ಲ’ ಎಂದು ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಳ್ಳೇಶ್ವರ ಗ್ರಾಮದಲ್ಲಿ ಭಾನುವಾರ 1008 ಭಗವಾನ್ ಪಾರ್ಶ್ವನಾಥ ದಿಗಂಬರ ಜೈನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ನಾಗಶಿಲಾ ಮರುಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅವರು, ‘ಪ್ರಸ್ತುತ ನಡೆಯುತ್ತಿರುವ ಇರಾನ್, ಇಸ್ರೇಲ್, ಅಮೆರಿಕ ಯುದ್ಧದ ಕುರಿತು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದರು.

‘900 ವರ್ಷಗಳ ಇತಿಹಾಸವಿರುವ ನಾಗಶಿಲೆಗೆ ಮರು ಪ್ರತಿಷ್ಠಾಪನೆ ಮಾಡುವ ಮೂಲಕ ಈ ಟ್ರಸ್ಟ್ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಇಲ್ಲಿನ ಜೈನಬಸದಿಯಲ್ಲಿ ಶಿವನಮೂರ್ತಿ, ಅದರ ಮುಂದೆ ನಂದಿಯ ವಿಗ್ರಹವಿದೆ. ಇದು ಏನನ್ನು ಸೂಚಿಸುತ್ತದೆಯೋ ಅದೇ ರೀತಿಯಲ್ಲಿ ಈ ಗ್ರಾಮದಲ್ಲಿ ಸರ್ವಧರ್ಮಿಯರು ಒಟ್ಟಾಗಿ ಬಾಳುತ್ತಿರುವುದು ಸಂತೋಷದ ಸಂಗತಿ’ ಎಂದು ಹೇಳಿದರು.

‘ಬುದ್ಧ, ಬಸವ, ಗಾಂಧಿ ತತ್ವವನ್ನು ಯಾರಾದರೂ ಅನುಸರಿಸುತ್ತಿದ್ದಾರೆ ಎಂದರೆ ಅದು ಜೈನ ಸಮುದಾಯ ಮಾತ್ರ’ ಎಂದು ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಹೇಳಿದರು.

‘ನಮ್ಮ ಸರ್ಕಾರ ಬಿಡುಗಡೆ ಮಾಡಿದ್ದ ₹ 50 ಕೋಟಿ ಅನುದಾನದಲ್ಲಿ ಸುಮಾರು ₹ 13 ಕೋಟಿಯಷ್ಟು ಅನುದಾನವನ್ನು ಎಲ್ಲಾ ಸಮುದಾಯಗಳ ದೇವಸ್ಥಾನಗಳಿಗೆ ಕೊಟ್ಟಿದ್ದೇನೆ. ದೊಡ್ಡ ಜಾತಿ, ಸಣ್ಣ ಜಾತಿ ಎಂಬುದನ್ನು ನೋಡದೇ ಪ್ರತಿಯೊಂದು ದೇವಸ್ಥಾನಗಳಿಗೆ ತಲಾ ₹ 20 ಲಕ್ಷದಷ್ಟು ಅನುದಾನ ನೀಡಿದ್ದಾಗಿ’ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಸಚಿವ ಡಿ.ಸುಧಾಕರ್ ಅವರ ಸಹೋದರ ಪಿ.ಭರತ್ರಾಜ್ ಮಾತನಾಡಿ, ‘ಸಮುದಾಯ ಭವನಕ್ಕೆ ಕೊಳವೆಬಾವಿ ಕೊರೆಯಿಸಿ, ಅದಕ್ಕೆ ಬೇಕಾದ ಎಲ್ಲಾ ಪೂರಕ ಸಾಮಗ್ರಿಗಳನ್ನು ಕೊಡಿಸಲಾಗುವುದು. ಭವನದ ಉದ್ಘಾಟನೆ ಹೊತ್ತಿಗೆ ಅವರ ಆರೋಗ್ಯ ಸುಧಾರಿಸಿದರೆ ಅವರನ್ನು ಕರೆತರಲಾಗುವುದು’ ಎಂದರು.

‘ಸಮುದಾಯ ಭವನದ ನಿರ್ಮಾಣಕ್ಕೆ ₹ 1 ಲಕ್ಷ ದೇಣಿಗೆ ನೀಡುವುದಾಗಿ’ ಭದ್ರಾವತಿಯ ಪ್ರಕಾಶ್ಚಂದ್ ಜೈನ್ ಹೇಳಿದರು.

ತಾಲ್ಲೂಕು ಕುಂಚಿಟಿಗ ಸಮಾಜದ ಮುಖಂಡ ಸುರೇಶ್ ತಕ್ಕನಹಳ್ಳಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಎಂ. ಪ್ರಮೋದ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಉಡುಪಿಯ ನಾಗಬ್ರಹ್ಮ ಪ್ರತಿಷ್ಠಾಚಾರ್ಯ ಪ್ರಸನ್ನಕುಮಾರ್ ಇಂದ್ರ, ಶ್ರೇಯಾಂಸು ಪಟೇಲ್, ನಾಗಪ್ಪ ಮಾಸಣಗಿ ಹಾಗೂ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-43-2143914745

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.