ಹೂವಿನಹಡಗಲಿ: ಶರಣರು, ದಾರ್ಶನಿಕರ ವಿಚಾರಧಾರೆಗಳು ಸಾರ್ವ ಕಾಲಿಕ ಪ್ರಸ್ತುತವಾಗಿದ್ದು, ಮನುಕುಲಕ್ಕೆ ದಾರಿದೀಪವಾಗಿವೆ ಉಪನ್ಯಾಸಕಿ ಶ್ವೇತಾ ಬೀರಬ್ಬಿ ಹೇಳಿದರು.

ಪಟ್ಟಣದ ಗವಿಸಿದ್ದೇಶ್ವರ ಶಾಖಾ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ 215ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಸಂತರು ಮಾನವೀಯತೆ, ಸಮಾನತೆ, ಶಾಂತಿಯ ತತ್ವಗಳನ್ನು ಸಾರಿದ್ದಾರೆ. ಬಸವಣ್ಣನವರ ಕಾಯಕವೇ ಕೈಲಾಸ ತತ್ವ ಶ್ರಮದ ಗೌರವವನ್ನು ಎತ್ತಿಹಿಡಿದಿದೆ ಎಂದರು.

ಪತ್ರಕರ್ತ ಎಂ.ದಯಾನಂದ ಮಾತನಾಡಿ,ದಾರ್ಶನಿಕರ ವಿಚಾರಗಳು ಕೇವಲ ಧಾರ್ಮಿಕ ಚೌಕಟ್ಟಿಗೆ ಸೀಮಿತವಾಗದೇ, ಸಾಮಾಜಿಕ ಬದಲಾವಣೆಗೆ ಪ್ರೇರಣೆ ಯಾಗಿವೆ ಎಂದರು.

ಹಿರಿಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ ಉದ್ಘಾಟಿಸಿದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಎಂ ನಾಗಭೂಷಣ, ಚುಸಾಪ ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್, ನಿವೃತ್ತ ಎಂಜಿನಿಯರ್ ಎಚ್ .ಎಂ.ಶಶಿಧರಯ್ಯ, ಕಳಕರಡ್ಡಿ, ಜ್ಯೋತಿ ಪ್ರಕಾಶ, ಟಿ ಗಂಗಮ್ಮ, ದೇವಣ್ಣ, ಎಚ್ .ಬಿ. ರಾಜಣ್ಣ, ಎಚ್.ಎಂ .ಚನ್ನಬಸಯ್ಯ ಇದ್ದರು. ಸೋಮಶೇಖರ ಬಳೆಗಾರ ಭಾವಗೀತೆ ಹಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-25-2111652508

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.