ಹೊರ್ತಿ: ಆದರ್ಶ ಜೀವನಕ್ಕೆ ಸಂತ, ಮಹಂತರರ ತತ್ವಗಳನ್ನು ಪಾಲಿಸಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾಧವಾನಂದ ಪ್ರಭುಜಿ ಪ್ರೌಢಶಾಲೆಯ ಶಿಕ್ಷಕ ಶಿವಣ್ಣ ಹದಿಮೂರ ಹೇಳಿದರು.

ಸಮೀಪದ ಇಂಚಗೇರಿ ಗ್ರಾಮದ ಭಾವುಸಾಹೇಬರ ಹಾಗೂ ಗಿರಿಮಲ್ಲೇಶ್ವರರ, ಮಾಧವಾನಂದ ಪ್ರಭುಜಿ ಮತ್ತು ಸಪ್ತ ಮಹಾರಾಜ ಅವರ ಮಹಾದ್ವಾರದಲ್ಲಿಡಲಾದ ಕುಡಿಯುವ ನೀರಿನ ಅರವಟಿಗೆ ಮುಂದೆ ಮಂಗಳವಾರ ಜಗಜ್ಯೋತಿ ಬಸವೇಶ್ವರರ ಹಾಗೂ ಸದ್ಗುರು ಸಮರ್ಥ ಗಿರಿಮಲ್ಲೇಶ್ವರ ಮಹಾರಾಜರ ಮಠದ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಅವರ ಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾನಾಡಿದರು.

ಶ್ರೀಮಠದ ಹಿರಿಯ ವಿವೇಕಾನಂದ ಅರಳಿ ಮಾತನಾಡಿ, ಜಗಜ್ಯೋತಿ ಬಸವೇಶ್ವರರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು. ಗಿರಿಮಲ್ಲೇಶ್ವರ ಮಹಾರಾಜರು ಗುರುಪದೇಶ ಸಾಧನೆಯಿಂದ ಪ್ರತಿ ಮಾನವ ಮಹಾದೇವನಾಗಬಲ್ಲನು ಎಂದರು. ಅಪ್ಪಟ ದೇಶ ಭಕ್ತರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ದೇಶಾಭಿಮಾನವು ಯುವಜನಾಂಗಕ್ಕೆ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.

ಮಲ್ಲಿಕಾರ್ಜುನ ಹದಿಮೂರ, ದಯಾನಂದ ಏಳಗಿ, ಸೋಮು ಬಿರಾದಾರ, ಗ್ರಂಥಾಪಾಲಕ ಓಂಕಾರಶೆಟ್ಟಿ, ಮಹಾಂತೇಶ ಚಟ್ಟರಕಿ, ವಿಶ್ವನಾಥ ಗುಡ್ಡದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-26-708825898

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.