ಹೊಸದುರ್ಗ: ‘ನಡೆ ಮತ್ತು ನುಡಿ ಒಂದಾದಾಗ ಮಾತ್ರ ಧರ್ಮ ಸಾರ್ಥಕವಾಗುತ್ತದೆ. ನಮ್ಮ ಆಚರಣೆಗಳು ಕೇವಲ ಸಾಂಕೇತಿಕವಾಗದೆ, ಅವುಗಳು ಪ್ರಾಮಾಣಿಕತೆ ಮತ್ತು ಮಾನವೀಯತೆ ಒಳಗೊಂಡಿರಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅಂಡಮಾನ್ನ ರಾಜಧಾನಿ ಶ್ರೀ ವಿಜಯಪುರಂನ ಮಾನ್ಷಾ ರೀಜೆನ್ಸಿ ಪೋರ್ಟ್ಬ್ಲೇರ್ನಲ್ಲಿ ಶನಿವಾರ ನಡೆದ ‘ಬಸವ ಜಯಂತಿ ಕಾರ್ಯಕ್ರಮದ’ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಪೂಜೆ, ಪುನಸ್ಕಾರಗಳಿಗಿಂತ ಮನುಷ್ಯನ ಮನಃಸ್ಥಿತಿ ಮುಖ್ಯ. ಪರರ ಸುಖ– ದುಃಖಗಳನ್ನು ನಮ್ಮದೆಂದು ಭಾವಿಸುವ ಗುಣವೇ ನಿಜವಾದ ಧರ್ಮ. ಮನಸ್ಸು ಅರಳಿದಾಗ ಮಾತ್ರ ಮಾಡುವ ಪೂಜೆಗೆ ಫಲ ಸಿಗುತ್ತದೆ. ಕೆರಳಿದ ಮನಸ್ಸಿನಿಂದ ಮಾಡುವ ಯಾವುದೇ ಆಚರಣೆ ವ್ಯರ್ಥ’ ಎಂದರು.

‘ಶರಣರ ತತ್ವಗಳು ಜನರ ಮನಸ್ಸನ್ನು ಮುಟ್ಟುವಷ್ಟು ಸರಳವಾಗಿವೆ. ಬುದ್ಧನು ಪಾಲಿ ಭಾಷೆಯಲ್ಲಿ ಬೋಧಿಸಿದಂತೆ, ಬಸವಾದಿ ಶರಣರು ಸಾಮಾನ್ಯ ಜನರ ಭಾಷೆಯಲ್ಲಿ ಸತ್ಯವನ್ನು ಸಾರಿದ್ದರಿಂದಲೇ ಅವು ಇಂದಿಗೂ ಪ್ರಸ್ತುತವಾಗಿವೆ’ ಎಂದು ಹೇಳಿದರು.

‘ಆಧುನಿಕ ಜಗತ್ತಿನ ಗೊಂದಲಗಳಿಗೆ ಬಸವ ತತ್ವ ಮತ್ತು ಭಗವದ್ಗೀತೆಯ ಚಿಂತನೆಗಳು ಸಂಜೀವಿನಿ ಇದ್ದಂತೆ. ಜ್ಞಾನದೊಂದಿಗೆ ಮಗುವಿನಂತಹ ಮುಗ್ಧತೆಯನ್ನು ಬೆಳೆಸಿಕೊಂಡರೆ ನಿಜವಾದ ಆಧ್ಯಾತ್ಮಿಕನಾಗುವನು. ಬಸವಣ್ಣನವರ ಅನುಭವ ಮಂಟಪ ಕೇವಲ ಚರ್ಚೆಯ ವೇದಿಕೆಯಲ್ಲ. ಅದು ಅನುಭವಗಳ ಸಾಗರವಾಗಿತ್ತು’ ಎಂದು ಅವಧೂತ ವಿನಯ್ ಗುರೂಜಿ ಹೇಳಿದರು.

ಚಿಂತಕಿ ಕಾವ್ಯಶ್ರೀ ಮಹಗಾಂವಕರ್ ‘ಅರಿವಿನ’ ಬಗ್ಗೆ ಉಪನ್ಯಾಸ ನೀಡಿದರು. ವಚನ ಟಿವಿ ಸಂಪಾದಕ ಸಿದ್ಧು ಯಾಪಲಪರವಿ ಮಾತನಾಡಿದರು. ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ. ಸುರೇಶ್, ಮುಖಂಡರಾರ ಜಿ.ಬಿ. ಪಾಟೀಲ್, ಬಿ.ಆರ್. ಪೊಲೀಸ್ ಪಾಟೀಲ, ಅಶೋಕ ಮೊಳಗಲಿ, ರಾಮಚಂದ್ರ ಹಡಪ, ಶೋಭಾ ಶಿವಳ್ಳಿ, ತೇಜಸ್ವಿನಿ, ಸ್ಪರ್ಶ ಸೇರಿ ಮಠದ ಭಕ್ತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-44-1968002810

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.