ಹೊಸದುರ್ಗ: ‘ಬಸವಣ್ಣನ ತತ್ವ ಮತ್ತು ವಚನ ಸಾಹಿತ್ಯ ಇಂದಿಗೂ ಎಲ್ಲಾ ವರ್ಗದವರಿಗೆ ಬೇಕಾಗಿದೆ. ಬಸವಣ್ಣ ಧಾರ್ಮಿಕ ಸುಧಾರಕರಷ್ಟೇ ಅಲ್ಲ, ಬದುಕು ನಡೆಸುವ ರೀತಿ, ನುಡಿ, ಆಹಾರ ಕ್ರಮ ಹಾಗೂ ಆದರ್ಶ ಜೀವನದ ಸಿದ್ಧಾಂತಗಳನ್ನು ಬೋಧಿಸಿದ ಸಾಂಸ್ಕೃತಿಕ ನಾಯಕ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಾಣೇಹಳ್ಳಿಯ ಮಠದ ಆವರಣದಲ್ಲಿ ಮಂಗಳವಾರ ನಡೆದ ಬಸವ ಜಯಂತಿ, ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಜಯಂತಿ ಕಾರ್ಯಕ್ರಮ ಹಾಗೂ ರಥೋತ್ಸವದ ಅಂಗವಾಗಿ ಶಿವಧ್ವಜಾರೋಹಣ ನೆರವೇರಿಸಿ ಮಾತ ನಾಡಿದರು. ‘ಬಸವಣ್ಣನವರ ವಚನಗಳ ಸಾರ ಅರಿತು ಮಾನವೀಯ ಗುಣ ಬೆಳೆಸಿಕೊಳ್ಳಬೇಕು. ಸಜ್ಜನರ ಮನಸ್ಸಿಗೆ ನೋವು ಕೊಡಬೇಡಿ. ನಾವು ಇತರರನ್ನು ಅವಹೇಳನ ಮಾಡುವುದರಿಂದ ಅಥವಾ ಕೆಟ್ಟದಾಗಿ ನಡೆಸಿಕೊಳ್ಳುವುದರಿಂದ ಅವರ ಮನಸ್ಸಿಗೆ ನೋವಾಗುತ್ತದೆ. ಅಂತಹ ನೋವು ನಮ್ಮ ಬದುಕಿನ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇತರರಿಗೆ ಮಾಡುವ ಕೇಡು ನಮಗೇ ತಿರುಗುತ್ತದೆ’ ಎಂದು ಎಚ್ಚರಿಸಿದರು.

‘ಸತತ ಪ್ರಯತ್ನ, ಸಾಧನೆ ಮತ್ತು ದೃಢ ಸಂಕಲ್ಪದಿಂದ ಆಧ್ಯಾತ್ಮಿಕ ಶಿಖರಕ್ಕೇರಿದವರು ತರಳಬಾಳು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ. ಅವರು ಅಂದಿನ ದಿನಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಮಠವನ್ನು ಮೇಲೆತ್ತಿ, ಭಕ್ತರಲ್ಲಿ ಸಾಮರಸ್ಯ ಬೆಳೆಸುವಲ್ಲಿ ಯಶಸ್ವಿಯಾಗಿದ್ದರು’ ಎಂದರು.

ಸಂಗೀತ ಶಿಕ್ಷಕ ನಾಗರಾಜ್ ಎಚ್.ಎಸ್, ಸಂಧ್ಯಾ ಪಿ.ಎಲ್, ಶೋಭಾ ಎಸ್.ಪಿ ಸೇರಿದಂತೆ ಶಿಬಿರಾರ್ಥಿಗಳು, ರಂಗಶಾಲೆಯ ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕರು, ಅಧ್ಯಾಪಕರು ಸೇರಿದಂತೆ ಮಠದ ಭಕ್ತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-44-1015496894

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.