ಹೊಸದುರ್ಗ: ಶರಣರ ವಚನಗಳು ಹಾಗೂ ಸಂವಿಧಾನದ ಆಶಯದಂತೆ 28 ವರ್ಷಗಳಿಂದ ಮಠದಲ್ಲಿ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಈವರೆಗೂ 132 ಅಂತರ್ಜಾತಿ ವಿವಾಹಗಳಿಗೆ ಮಠ ಸಾಕ್ಷಿಯಾಗಿದೆ ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.

ಮಠದಲ್ಲಿ ತಾಲ್ಲೂಕಿನ ಹುಲೇನಹಳ್ಳಿ ಗ್ರಾಮದ ಕುಂಚಿಟಿಗ ಸಮಾಜದ ವರ ರಂಗನಾಥ ಹಾಗೂ ಹೊಸದುರ್ಗ ಪಟ್ಟಣದ ಭೋವಿ ಸಮಾಜದ ವಧು ನಂದಿನಿ ಅವರಿಗೆ ಶನಿವಾರ ಲಿಂಗ ದೀಕ್ಷೆ ನೀಡಿ ಮಾತನಾಡಿದರು.

‘ಪರಸ್ಪರ ಪ್ರೀತಿಸುತ್ತಿರುವ ರಂಗನಾಥ–ನಂದಿನಿ ಜೋಡಿ ಏಪ್ರಿಲ್ 9ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದೆ. ಅಂತರ್ ಧರ್ಮೀಯ ಮತ್ತು ಅಂತರ್ಜಾತಿ ವಿವಾಹಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಹಾಗೂ ಜಾತ್ಯತೀತ ಸಮಾಜ ನಿರ್ಮಾಣ ಮಾಡಲು ಇವು ಸಹಾಯ ಮಾಡುತ್ತವೆ ಎಂದರು.

‘ಮಠ ಯಾವುದನ್ನೂ ಒತ್ತಾಯ ಪೂರ್ವಕವಾಗಿ ಹೇರುವುದಿಲ್ಲ. ಸ್ವಯಂ ಪ್ರೇರಣೆಯಿಂದ ಬಂದವರಿಗೆ ದಾರಿ ತೋರುತ್ತದೆ. ಮಾತಿನಲ್ಲಿ, ಲೇಖನಗಳಲ್ಲಿ ಜಾತ್ಯತೀತತೆ ಬಗ್ಗೆ ಮಾತನಾಡುವ ಜಾಣರು ಅವಕಾಶ ಬಂದಾಗ ತಾವಷ್ಟೇ ಬೆಳೆಯುವ ಆಲೋಚನೆ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-44-1488521995

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.