ಹೊಸದುರ್ಗ: ‘ಮನುಷ್ಯ ಇಂದು ಮಂಗನಾಗುತ್ತಿದ್ದಾನೆಯೇ ಹೊರತು ಮಾನವನಾಗುತ್ತಿಲ್ಲ. ಕೋತಿಯಂತೆ ಚಂಚಲವಾಗಿರುವ ಮನಸ್ಸನ್ನು ನಿಯಂತ್ರಣದಲ್ಲಿಡಲು ಹಿರಿಯರು ಧ್ಯಾನ, ಮೌನ ಮತ್ತು ಪ್ರಾರ್ಥನೆಯಂತಹ ಮಾರ್ಗಗಳನ್ನು ರೂಪಿಸಿದ್ದಾರೆ. ಅದರಲ್ಲಿ ಅತ್ಯಂತ ಪರಿಣಾಮಕಾರಿಯಾದದ್ದು ಇಷ್ಟಲಿಂಗ ಪೂಜೆ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಾಣೇಹಳ್ಳಿಯಲ್ಲಿನ ಮಠದ ಆವರಣದಲ್ಲಿ ಹದಿನೈದು ದಿನಗಳಿಂದ ನಡೆಯುತ್ತಿರುವ ‘ಮಕ್ಕಳ ಹಬ್ಬ’ ಬೇಸಿಗೆ ಶಿಬಿರದ ಉಪನ್ಯಾಸ ಹಾಗೂ ಅಂಡಮಾನ್ ಪ್ರವಾಸಿಗರಿಗೆ ಕೃತಜ್ಞತಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮಕ್ಕಳು ಮಹಾತ್ಮ ಗಾಂಧೀಜಿಯವರ ಸರಳತೆ, ಪ್ರಾಮಾಣಿಕತೆ ಮತ್ತು ಪರರ ನೋವಿಗೆ ಸ್ಪಂದಿಸುವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಇಂದಿನ ಅತಿಯಾದ ಬಿಸಿಲಿಗೆ ಮನುಷ್ಯನ ಅತಿರೇಕದ ಚಟುವಟಿಕೆಗಳು, ಅತಿಯಾದ ಗಣಿಗಾರಿಕೆ ಮತ್ತು ಅರಣ್ಯ ನಾಶವೇ ಕಾರಣವಾಗಿದೆ. ಕೇವಲ ದೈಹಿಕವಾಗಿ ಬೆಳೆಯುವುದು ಅಥವಾ ಸುಂದರ ಬಟ್ಟೆ ಧರಿಸುವುದು ನಿಜವಾದ ಬೆಳವಣಿಗೆಯಲ್ಲ. ಬೌದ್ಧಿಕವಾಗಿ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬದಲಾವಣೆಯಾದಾಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ’ ಎಂದು ಹೇಳಿದರು.

ವಚನ ಟಿವಿ ಸಂಪಾದಕ ಸಿದ್ದು ಯಾಪಲಪರವಿ, ಚಿಂತಕ ಅಶೋಕ ಮಳಗಲಿ ಮಾತನಾಡಿದರು. ಮುಖಂಡ ರಾದ ಸುರೇಶ್ ಎಸ್.ಎಂ, ಹನುಮಂತ, ಸಿದ್ದಪ್ಪ ದುಂಡಿ, ದಾಬೇರ ಬಸವರಾಜ್, ಶಿವಲಿಂಗಪ್ಪ, ಸಿದ್ದಯ್ಯ ಪಿ.ಕೆ, ನಾಗರಾಜ್, ರಾಜು ಸೇರಿ ಮಠದ ಭಕ್ತರು ಹಾಗೂ ಶಿಬಿರಾರ್ಥಿಗಳಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-44-297475763

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.