ಹೊಸದುರ್ಗ: ‘ಸಿರಿಗೆರೆಯ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ಧರ್ಮಗುರುವಷ್ಟೇ ಆಗಿರದೆ ಸಮಾಜಕ್ಕೆ ತಾಯಿಯ ಪ್ರೀತಿ ಮತ್ತು ಶಿಸ್ತು ಧಾರೆ ಎರೆದ ಮಹಾನ್ ಚೇತನವಾಗಿದ್ದರು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಾಣೇಹಳ್ಳಿಯಲ್ಲಿ ಮಂಗಳವಾರ ನಡೆದ ಬಸವ ಜಯಂತಿ ಹಾಗೂ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಶಿವಕುಮಾರ ಸ್ವಾಮೀಜಿಯವರು ಬಸವ ತತ್ವಗಳನ್ನು ಅರಿತು, ಅದರಂತೆ ನಡೆದು ತೋರಿಸಿದ್ದಾರೆ. ಅವರು ಶಿಷ್ಯರ ತಪ್ಪುಗಳನ್ನು ತಿದ್ದುವಲ್ಲಿ ಕೆಲವೊಮ್ಮೆ ನಿಷ್ಠೂರವಾಗಿದ್ದರೂ, ಅದರ ಹಿಂದೆ ಸಮಾಜದ ಹಿತ ಮತ್ತು ಅತೀವ ಪ್ರೀತಿ ಅಡಗಿರುತ್ತಿತ್ತು’ ಎಂದರು.

‘ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಸಂತರ ಪಾತ್ರ ದೊಡ್ಡದು. ಸಿರಿಗೆರೆಯ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಒಂದು ಧರ್ಮಕ್ಕೆ ಸೀಮಿತವಾಗಿರದೆ, ಸರ್ವಜನಾಂಗದ ಅಭ್ಯುದಯಕ್ಕಾಗಿ ಶ್ರಮಿಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ (1946) ಸಿರಿಗೆರೆಯಲ್ಲಿ ಪ್ರೌಢಶಾಲೆ ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದರು. ಗ್ರಾಮೀಣ ಭಾಗದ ಮಕ್ಕಳಲ್ಲಿ ಜ್ಞಾನದ ದೀವಿಗೆ ಹಚ್ಚಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ದಾವಣಗೆರೆಯ ನಿವೃತ್ತ ಪ್ರಾಚಾರ್ಯ ನಾ.ಲೋಕೇಶ್ ಒಡೆಯರ್ ಹೇಳಿದರು.

‘ಸ್ವಾಮೀಜಿ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಹಾಗೂ ರಾಜಕೀಯವಾಗಿ ಮಾರ್ಗದರ್ಶನ ನೀಡಿದವರು. ಅವರು ಪ್ರತಿಪಾದಿಸಿದ ಕಾಯಕ, ಕಾಲ ಮತ್ತು ಕಾಸು ಎಂಬ ಸೂತ್ರ. ಸಮಯದ ಮಹತ್ವ ಮತ್ತು ದುಡಿಮೆಗೆ ಯಾರು ಗೌರವ ಕೊಡುತ್ತಾರೋ ಅವರು ಜೀವನದಲ್ಲಿ ಸೋಲಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು’ ಎಂದರು.

ಸಾಣೇಹಳ್ಳಿಯ ಪ್ರಮುಖ ಬೀದಿಗಳಲ್ಲಿ ಶಿವಕುಮಾರ ಸ್ವಾಮೀಜಿ ಅವರ ರಥೋತ್ಸವ ಸಾಗಿತು.

ಸಾಹಿತಿ ಚಂದ್ರಶೇಖರ್ ತಾಳ್ಯ, ಶಿವಸಂಚಾರದ ಕಲಾವಿದರಾದ ಜ್ಯೋತಿ, ದಾಕ್ಷಾಯಿಣಿ, ನಾಗರಾಜ್, ಗುರುಪಾದೇಶ್ವರ ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎ.ಸಿ.ಚಂದ್ರಪ್ಪ, ಮಾಗನೂರು ಚಂದ್ರಶೇಖರ್ ಗೌಡ, ಪ್ರಭುದೇವ, ಸಂಧ್ಯಾ ಪಿ.ಎಲ್. ಸೇರಿದಂತೆ ಸಾಣೇಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಮಠದ ಭಕ್ತರು ಮತ್ತು ವಿದ್ಯಾರ್ಥಿಗಳಿದ್ದರು. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯ ಜೀವನಾಧಾರಿತ ‘ಮಹಾಬೆಳಗು’ ನಾಟಕವನ್ನು ರಾಜು ಲಕ್ಕಮುತ್ತೇನಹಳ್ಳಿ ಪ್ರಸ್ತುತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-44-1380701792

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.