ಹುಬ್ಬಳ್ಳಿ: ‘ಸಮಾಜ ಲೌಕಿಕ ಹಾಗೂ ಬೌದ್ಧಿಕವಾಗಿ ಮುಂದೆ ಬರಬೇಕು. ಅದಕ್ಕೆ ಶಿಕ್ಷಣ ಬಹಳ ಅವಶ್ಯ’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಇಲ್ಲಿನ ವಿದ್ಯಾನಗರದ ವಾದಿರಾಜ ಸೇವಾ ಪ್ರತಿಷ್ಠಾನ, ಅಖಿಲ ಭಾರತ ಮಾಧ್ವ ಮಹಾ ಮಂಡಳ ವಿದ್ಯಾರ್ಥಿ ನಿಲಯದ ಷಷ್ಠಿಪೂರ್ತಿ ಮಹೋತ್ಸವ ಹಾಗೂ ನವೀಕೃತ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಶುದ್ಧ ಆಹಾರ ನೀಡುವ ಉದ್ದೇಶದಿಂದ ಇಲ್ಲಿಯ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಭೂಮಿ ದಾನ ಮಾಡಿದರು. ಸಮಾನ ಮನಸ್ಕರನ್ನು ಕೂಡಿಸಿ ನಮ್ಮ ಗುರುಗಳು ವಿದ್ಯಾರ್ಥಿ ನಿಲಯ ಆರಂಭಕ್ಕೆ ಕಾರಣರಾದರು’ ಎಂದರು.

‘ನಿಲಯದ ಹಳೇ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಈ ಸಂಸ್ಥೆಯನ್ನು ಬೆಳೆಸುತ್ತಿದ್ದಾರೆ. ಕೆಲವರು ದಾನ ನೀಡಲು ಸಾಧ್ಯ. ಇನ್ನೂ ಕೆಲವರಿಗೆ ದಾನ ಕೊಡಿಸಲು ಸಾಧ್ಯ’ ಎಂದು ಹೇಳಿದರು.

ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ‘ಹಿಂದು ಸಮಾಜ ಕಟ್ಟಿ ಬೆಳೆಸಿದ ವಿಶ್ವೇಶ್ವರ ಶ್ರೀಗಳು ವಿದ್ಯಾರ್ಥಿ ನಿಲಯ ಕಟ್ಟಿದರು. ಹಿಂದು ಸಮಾಜದ ಉಳಿವಿಗೆ ಇಂತಹ ವಿದ್ಯಾರ್ಥಿ ನಿಲಯ ಹಾಗೂ ಕಾಲೇಜಗಳ ಅವಶ್ಯಕತೆ ಇದೆ’ ಎಂದು ತಿಳಿಸಿದರು.

‘ಎಲ್ಲ ಸಮಾಜ, ಮಠ ಒಗ್ಗೂಡಿಸಿದ್ದು ಮಾಧ್ವ ಮಹಾಮಂಡಳ. ವಿದ್ಯೆಯ ಮಹತ್ವ ಹೇಳುವಾಗ ಸುಖ ಕೊನೆಯ ಹಂತ. ವಿನಯ ಮೊದಲ ಹಂತ. ಅಖಿಲ ಭಾರತ ಮಾಧ್ವ ಮಹಾಮಂಡಳದ ಅನೇಕ ಸಂಸ್ಥೆಗಳು ಹಲವೆಡೆ ಇವೆ’ ಎಂದು ಹೇಳಿದರು.

ಸಮಾರಂಭಕ್ಕೆ ಮೊದಲು ಸುಬುಧೇಂದ್ರ ತೀರ್ಥ ಸ್ವಾಮೀಜಿ ಹಾಗೂ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ ಮೆರವಣಿಗೆ ನಡೆಯಿತು.

ಅನಂತ ಪದ್ಮನಾಭ ಐತಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ಕೆಮತೂರ ಸೇರಿದಂತೆ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-24-1030741763

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.