ಹುಬ್ಬಳ್ಳಿ: ‘ಇಲ್ಲಿನ ಆರ್.ಎಂ.ಲೋಹಿಯಾ ನಗರದ ಶ್ರೀವೇದ ಸಂಸ್ಕಾರ ಧಾರ್ಮಿಕ ಸೇವಾ ಸಮಿತಿ ವತಿಯಿಂದ ವೀರಶೈವ ಲಿಂಗಾಯತ ವೀರ ಮಾಹೇಶ್ವರ ಜಂಗಮ ವಟುಗಳಿಗೆ ಲಿಂಗ ದೀಕ್ಷೆ (ಅಯ್ಯಾಚಾರ) ನೀಡುವ ಕಾರ್ಯಕ್ರಮವನ್ನು ಏ.15ರಂದು ಗೋಕುಲ ರಸ್ತೆಯ ಡಾ.ಕೆ.ಎಸ್.ಶರ್ಮಾ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಸಮಿತಿ ಅಧ್ಯಕ್ಷ ಮಹೇಶ್ವರಯ್ಯ ಶಾಸ್ತ್ರಿ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 4.30ರಿಂದ 9ರವರೆಗೆ ಲಿಂಗದೀಕ್ಷೆ ಹಾಗೂ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಧರ್ಮಸಭೆ ನಡೆಯಲಿದೆ. ನಂತರ ಮಹಾಪ್ರಸಾದ ವಿತರಿಸಲಾಗುವುದು’ ಎಂದರು.

‘ಕಲಘಟಗಿಯ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಹಾವೇರಿಯ ಸಿಂದಗಿಮಠದ ಶಾಂತವೀರ ಪಟ್ಟಾಧ್ಯಕ್ಷರು, ನವನಗರದ ಪಂಚಾಕ್ಷರಿ ನಗರದ ಕಾಶಿ ಖಾಸಾ ಶಾಖಾಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ. ಮಾಹಿತಿಗೆ ಮೊ. 70198 72064 ಸಂಪರ್ಕಿಸಬಹುದು’ ಎಂದು ತಿಳಿಸಿದರು.

ಶ್ರೀವೇದ ಸಂಸ್ಕಾರ ಧಾರ್ಮಿಕ ಸೇವಾ ಸಮಿತಿಯ ಬಸಯ್ಯಸ್ತ್ರಿ ಹಿರೇಮಠ, ಜಗದೇವಯ್ಯಶಾಸ್ತ್ರಿ ಹಿರೇಮಠ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-24-209414761

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.