ಹುಬ್ಬಳ್ಳಿ: ‘ಪ್ರಸ್ತುತ ಶೈಕ್ಷಣಿಕವಾಗಿ ನಾವು ಸಾಕಷ್ಟು ಉನ್ನತಿ ಸಾಧಿಸಿದ್ದರೂ, ಸಂಸ್ಕಾರದಲ್ಲಿ ಎಡವುತ್ತಿದ್ದೇವೆ. ಇದಕ್ಕೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಕಾರಣವಾಗಿದೆ. ಗಾಯತ್ರಿ ಮಂತ್ರ ಜಪ ನಿತ್ಯದ ಬದುಕಿನ ಭಾಗವಾದರೆ, ಸರ್ವಸಿದ್ದಿ ಸಾಧ್ಯ’ ಎಂದು ವಿಶ್ವಭಾರತೀ ವೇದಪೀಠದ ಅಧ್ಯಕ್ಷ ಸಮೀರಣಾಚಾರ್ಯ ಕಂಠಪಲ್ಲಿ ಹೇಳಿದರು.

ಸಮರ್ಥ ಸೇವಾ ಕೇಂದ್ರ ಟ್ರಸ್ಟ್ ಮತ್ತು ಪ್ರವರ್ತಿತ ಅಖಿಲ ಭಾರತ ಬ್ರಾಹ್ಮಣ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ ಗುರುವಾರ ಭವಾನಿ ನಗರದ ರಾಘವೇಂದ್ರ ಮಠದ ಸುಜಯೀಂದ್ರ ಭವನದಲ್ಲಿ ಹಮ್ಮಿಕೊಂಡಿದ್ದ ‘ಜೀವನಮ್ ಸ್ವಾವಲಂಬನಮ್’ ಕಾರ್ಯಾಗಾರದ ಸನಾತನ ಸಂಸ್ಕಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಪಠಿಸಿದ್ದು ಗಾಯತ್ರಿ ಮಂತ್ರವಾಗಿದೆ. ವಿಪ್ರೇತರ ಸಮುದಾಯದ ಅನೇಕರು ಸಹ ಗಾಯತ್ರಿ ಮಂತ್ರ ಜಪದ ಪ್ರಭಾವದಿಂದ ಉನ್ನತಿ ಹೊಂದಿದ್ದಾರೆ’ ಎಂದರು.

ವೇ.ಮೂ. ಸತ್ಯನಾರಾಯಣಾಚಾರ್ಯ, ವೆಂಕಟೇಶ ಜೋಶಿ, ಹನುಮಂತಣ್ಣ ಟಕ್ಕಳಕಿ ಸಂಸ್ಕಾರದ ಮಹತ್ವ, ಮಕ್ಕಳು, ಪಾಲಕರ ಜವಾಬ್ದಾರಿ ಕುರಿತು ಮಾತನಾಡಿದರು. ಭಾಸ್ಕರ ಪಾಟೀಲ, ಶ್ರೀಪಾದ ಶಾಸ್ತ್ರಿ, ಅಶೋಕ ಕುಲಕರ್ಣಿ ಸಂಗ್ರೇಶಕೊಪ್ಪ ಇದ್ದರು.

ಸಮಾರೋಪ ಸಮಾರಂಭದಲ್ಲಿ ಟಿಟಿಡಿ ಜಿಲ್ಲಾ ಸಂಚಾಲಕ ಗೋಪಾಲ ಕುಲಕರ್ಣಿ ಮಾತನಾಡಿ, ‘ಎಲ್ಲ ಕ್ಷೇತ್ರದಲ್ಲಿ ವಿಪ್ರರು ಸಾಧನೆ ಮಾಡಿದ್ದು, ಇಂದು ಸ್ವಾವಲಂಬಿ ಆಗುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪರಸ್ಪರ ಸಹಾಯ, ಸಹಕಾರ ಮನೋಭಾವದಿಂದ ಮುನ್ನಡೆಯಬೇಕು’ ಎಂದರು.

ಧಾರವಾಡದ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯ ಅಧ್ಯಕ್ಷ ರಾಜೀವ ಪಾಟೀಲ್ ಕುಲಕರ್ಣಿ ಮಾತನಾಡಿದರು. ಪ್ರೊ.ಸಿ.ಆರ್. ಜೋಶಿ ಅಧ್ಯಕ್ಷತೆ ವಹಿಸಿದ್ದರು. ನರಸಿಂಹರಾವ್ ಸೋಮಲಾಪುರ, ಸಿ.ಎಂ. ದೀಕ್ಷಿತ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-24-55083143

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.